ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿ: ನಾಳೆ ಮಂಡಲಪೂಜೆ
ತಿರುವನಂತಪುರಂ, ಡಿಸೆಂಬರ್ 25: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಪವಿತ್ರ ಮಂಡಲ ಪೂಜೆ ಶನಿವಾರದಿಂದ ಶುರುವಾಗಲಿದೆ. ಅಯ್ಯಪ್ಪ ಸ್ವಾಮಿಗೆ ತೊಡಿಸುವ ಚಿನ್ನದ ಅಂಗಿಯ ಮೆರವಣಿಗೆ ಶುಕ್ರವಾರ ಶಬರಿಮಲೆಗೆ ತಲುಪಲಿದೆ. ಅಲ್ಲಿಂದ ಸನ್ನಿಧಾನಕ್ಕೆ ಅದನ್ನು ಕೊಂಡೊಯ್ದ ಬಳಿಕ ಮಂಡಲ ಪೂಜೆ ಆರಂಭವಾಗಲಿದೆ. ಅದಕ್ಕೆ ಅಗತ್ಯವಾದ ಎಲ್ಲ ತಯಾರಿಗಳು ಪೂರ್ಣಗೊಂಡಿದೆ.
42 ದಿನಗಳ ವ್ರತದ ಬಳಿಕ ಶಬರಿಮಲೆ ದೇವಸ್ಥಾನವು ಮಂಡಲ ಪೂಜೆಗೆ ಸಜ್ಜುಗೊಂಡಿದೆ. ಆಚರಣೆಗಳಿಗೆ ಅನುಗುಣವಾಗಿ ಅರಣ್ಮುಲ ಪಾರ್ಥಸಾರಥಿ ದೇವಸ್ಥಾನದಿಂದ ಹೊರಟ ತಂಕಯಂಕಿ ರಥಯಾತ್ರೆಯು ಪಂಬಾಕ್ಕೆ ಇಂದು ತಲುಪಲಿದೆ. ಮೆರವಣಿಗೆಯು ಮಧ್ಯಾಹ್ನ 1 ಗಂಟೆಗೆ ಪಂಬಾದ ಗಣಪತಿ ದೇವಸ್ಥಾನಕ್ಕೆ ತಲುಪಿದೆ. 3 ಗಂಟೆಯವರೆಗೂ ತಂಕ ಅಂಕಿಯನ್ನು ಪ್ರದರ್ಶನಕ್ಕೆ ಇರಿಸಿ ಬಳಿಕ ವಿಶೇಷ ಪೆಟ್ಟಿಗೆಗೆ ವರ್ಗಾಯಿಸಲಾಗುತ್ತದೆ. ಅಯ್ಯಪ್ಪ ಸೇವಾ ಸಂಘದ ಕೆಲಸಗಾರರು ಅದನ್ನು ತಲೆಯ ಮೇಲೆ ಇರಿಸಿಕೊಂಡು ಅರಣ್ಯ ಪ್ರದೇಶದಲ್ಲಿ ಸಾಗಿ ಸಂಜೆ 5 ಗಂಟೆಗೆ ಶರಮುಕ್ತಿಗೆ ಸಾಗಿಸಲಿದ್ದಾರೆ.
ದೇವಸ್ವಂ ಮಂಡಳಿಯ ಅಧಿಕಾರಿಗಳು ತಂಕ ಅಂಕಿಯನ್ನು ಶರಮುಕ್ತಿಯಲ್ಲಿ ಬರಮಾಡಿಕೊಂಡು ಸನ್ನಿಧಾನಕ್ಕೆ ಸಾಗಿಸುತ್ತಾರೆ. ಅದನ್ನು ಸೋಪಾನದಲ್ಲಿ ತಂತ್ರಿಗಳು ಮತ್ತು ಮುಕ್ತ ಅರ್ಚಕರು ಸ್ವಾಗತಿಸುತ್ತಾರೆ. ಇದರ ನಂತರ ಅಯ್ಯಪ್ಪನ ವಿಗ್ರಹಕ್ಕೆ ಚಿನ್ನದ ದಿರಿಸನ್ನು ತೊಡಿಸಿ ಸಂಜೆ 6.30ರಿಂದ ದೀಪಾರಾಧನೆ ಆರಂಭವಾಗುತ್ತದೆ.

ಸಂಜೆ 6.30ರ ಆಚರಣೆಗಳು ಪೂರ್ಣಗೊಳ್ಳುವವರೆಗೂ 18 ಮೆಟ್ಟಿಲನ್ನು ಏರಿ ಬರಲು ಭಕ್ತರಿಗೆ ಅವಕಾಶ ನೀಡುವುದಿಲ್ಲ. ಉಚ್ಚಪೂಜಾ ಆರಂಭವಾದ ನಂತರ ಮಧ್ಯಾಹ್ನ 3 ಗಂಟೆಯವರೆಗೆ ಮೆರವಣಿಗೆ ಹೊರಡುವವರೆಗೂ ಭಕ್ತರು ಪಂಬಾದಿಂದ ಹೊರಹೋಗುವಂತಿಲ್ಲ.












Click it and Unblock the Notifications