ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ವಿವಾದ: ಹಿಂದೂ ಸಂಘಟನೆ ನಾಯಕಿ ಬಂಧನ ಖಂಡಿಸಿ ಕೇರಳದಲ್ಲಿ ಪ್ರತಿಭಟನೆ

|
Google Oneindia Kannada News

ತಿರುವನಂತಪುರಂ, ನವೆಂಬರ್ 17: ಮಂಡಳ ಪೂಜೆ ಮತ್ತು ವ್ರತಾಚರಣೆ ಸಲುವಾಗಿ 62 ದಿನಗಳ ಕಾಲ ನಡೆಯುವ ಆಚರಣೆಗಳಿಗಾಗಿ ಶುಕ್ರವಾರ ಬಾಗಿಲು ತೆರೆದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಭಾರಿ ಭದ್ರತೆ ನಿಯೋಜಿಸಲಾಗಿದೆ.

ಶಬರಿಮಲೆ ಪ್ರವೇಶಿಸುವ ತೃಪ್ತಿ ದೇಸಾಯಿ ಪ್ರಯತ್ನ ವಿಫಲಶಬರಿಮಲೆ ಪ್ರವೇಶಿಸುವ ತೃಪ್ತಿ ದೇಸಾಯಿ ಪ್ರಯತ್ನ ವಿಫಲ

ಎಲ್ಲ ವಯಸ್ಸಿನ ಮಹಿಳೆಯರಿಗೂ ದೇವಸ್ಥಾನದೊಳಗೆ ಮುಕ್ತ ಪ್ರವೇಶ ಕಲ್ಪಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಅನೇಕ ಮಹಿಳಾ ಕಾರ್ಯಕರ್ತರು ದೇವಸ್ಥಾನದ ಒಳಗೆ ಪ್ರವೇಶಿಸಲು ಪ್ರಯತ್ನಿಸಿದ್ದರಿಂದ ದೇವಸ್ಥಾನ ಮಾತ್ರವಲ್ಲದೆ, ಇಡೀ ರಾಜ್ಯದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಶಬರಿಮಲೆ ಬದಲು ಹಳ್ಳಿಗಳಿಗೆ ಹೋಗಿ: ಕಾರ್ಯಕರ್ತೆಯರಿಗೆ ತಸ್ಲೀಮಾ ಸಲಹೆಶಬರಿಮಲೆ ಬದಲು ಹಳ್ಳಿಗಳಿಗೆ ಹೋಗಿ: ಕಾರ್ಯಕರ್ತೆಯರಿಗೆ ತಸ್ಲೀಮಾ ಸಲಹೆ

ಮಹಿಳೆಯರಿಗೆ ಪ್ರವೇಶ ನೀಡುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಹಿಂದೂ ನಾಯಕರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಶನಿವಾರ (ನ.17) ಕೇರಳ ಬಂದ್‌ಗೆ ಕರೆ ನೀಡಲಾಗಿದೆ. ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ರಾಜ್ಯದಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ. 10 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

sabarimala kerala protest issue bandh live updates hindu supreme court

ಈ ಮಧ್ಯೆ ತಿರುವನಂತಪುರಂ ದೇವಸ್ವಂ ಮಂಡಳಿ (ಟಿಡಿಬಿ) ಮಹಿಳೆಯರಿಗೆ ಪ್ರವೇಶ ಕ;್ಪಿಸುವ ತೀರ್ಪನ್ನು ಅನುಷ್ಠಾನಕ್ಕೆ ತರಲು ಕಾಲಾವಕಾಶ ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.

Newest FirstOldest First
1:36 PM, 17 Nov

ಕುಟ್ಟಿಯಾಡ್‌ನಲ್ಲಿ ಕೋಯಿಕ್ಕೋಡ್ ಸಿಪಿಎಂ ಮುಖಂಡನ ಮಗ-ಸೊಸೆ ಮೇಲೆ ಪ್ರತಿಭಟನಾ ನಿರತರಿಂದ ಹಲ್ಲೆ.
1:27 PM, 17 Nov

ಹರತಾಳಕ್ಕೆ ಬೆಂಬಲ ನೀಡಿದ್ದ ಸಂಘಟನೆಗಳ ಸದಸ್ಯರು ಕೊಯಿಕ್ಕೋಡ್ ಸಿಪಿಎಂ ಜಿಲ್ಲಾ ಕಾರ್ಯದರ್ಶಿಯ ಮಗ ಮತ್ತು ಅವರ ಪತ್ನಿಯ ಮೇಲೆ ಕುಟ್ಟಿಯಾಡಿಯಲ್ಲಿ ಹಲ್ಲೆ ನಡೆಸಿದ್ದಾರೆ. ಕಾರ್‌ನಲ್ಲಿ ತೆರಳುತ್ತಿದ್ದ ಜೂಲಿಯಸ್ ಮತ್ತು ಅವರ ಹೆಂಡತಿಯನ್ನು ಹೊರಕ್ಕೆ ಎಳೆದ ಹತ್ತು ಸದಸ್ಯರ ಗುಂಪು ಅವರನ್ನು ಥಳಿಸಿದ್ದಾರೆ ಎನ್ನಲಾಗಿದೆ.
1:08 PM, 17 Nov

ಪಂಬಾದಲ್ಲಿ ಡ್ರೋನ್ ಭದ್ರತೆಯನ್ನು ನಿಯೋಜಿಸಲಾಗಿದೆ. ಭಕ್ತರು ಇಲ್ಲಿಂದ ಶಬರಿಮಲೆಗೆ ನಡೆದುಕೊಂಡು ಹೋಗುವುದರಿಂದ ಡ್ರೋನ್‌ಗಳು ಈ ಪ್ರದೇಶದ ಸುತ್ತಮುತ್ತ ತೀವ್ರ ನಿಗಾವಹಿಸಲಿವೆ.
11:45 AM, 17 Nov

ಪೊಲೀಸ್ ಭದ್ರತೆಯ ನಡುವೆ ಕೇರಳ ರಾಜ್ಯ ಸಾರಿಗೆ ಬಸ್‌ಗಳು ನಿಲಕ್ಕಲ್, ಪಂಬಾಗಳಿಂದ ಭಕ್ತರನ್ನು ಕರೆತರುತ್ತಿವೆ. ಬಂದ್‌ಗೆ ಕರೆ ನೀಡಿದ್ದರೂ ಬಸ್ ಸಂಚಾರಕ್ಕೆ ಅಡ್ಡಿಪಡಿಸಿಲ್ಲ. ದೇವಸ್ಥಾನದ ಸಮೀಪದಲ್ಲಿರುವ ಅಂಗಡಿಗಳು ಮತ್ತು ಹೋಟೆಲ್‌ಗಳು ತೆರೆದಿವೆ. ಹರತಾಳ ನಡೆಯುತ್ತಿದ್ದರೂ ರಾಜ್ಯದಲ್ಲಿ ಜನಜೀವನ ಸಹಜವಾಗಿದೆ. ಕೆಲವು ಪ್ರದೇಶಗಳಲ್ಲಿ ಬಸ್‌ ಮತ್ತು ಆಟೊಗಳ ಓಡಾಟ ಸ್ಥಗಿತಗೊಂಡಿವೆ.
11:23 AM, 17 Nov

ಶುಕ್ರವಾರದಿಂದ ದೇವಸ್ಥಾನದ ಆವರಣದಲ್ಲಿಯೇ ಇದ್ದ ಬಿಜೆಪಿ ಮುಖಂಡ ವಿವಿ ರಾಜೇಶ್ ಅವರನ್ನು ಶಬರಿಮಲೆ ಆವರಣದಿಂದ ಹೊರಹೋಗುವಂತೆ ಪೊಲೀಸರು ಸೂಚಿಸಿದ್ದಾರೆ. ಅದಕ್ಕೆ ನಿರಾಕರಿಸಿದರೆ ಅವರನ್ನು ಬಂಧಿಸುವ ಸಾಧ್ಯತೆ ಇದೆ.
11:04 AM, 17 Nov

ಪಂಬಾದಿಂದ ಅಯ್ಯಪ್ಪ ಭಕ್ತರು ಬೆಟ್ಟದತ್ತ ತೆರಳಲು ಆರಂಭಿಸಿದ್ದಾರೆ. ಶಬರಿಮಲೆಗೆ ತೆರಳುವ ಭಕ್ತರು ಪೊಲೀಸ್ ಭದ್ರತೆ ನಡುವೆ ಸಾಗುತ್ತಿದ್ದಾರೆ.
10:53 AM, 17 Nov

ಶಶಿಕಲಾ ಅವರ ಬಿಡುಗಡೆಗೆ ಆಗ್ರಹಿಸಿ ಹಿಂದೂ ಐಕ್ಯ ವೇದಿ ಸಂಘಟನೆಯಿಂದ ಪಂಬಾ ಪೊಲೀಸ್ ಠಾಣೆ ಎದುರು ಪ್ರತಿಭಟನೆ. ಗಲಭೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಶಶಿಕಲಾ ಅವರನ್ನು ಪಂಬಾ ಪೊಲೀಸ್ ಠಾಣೆಯಿಂದ 30 ಕಿ.ಮೀ. ದೂರದ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
Advertisement
10:49 AM, 17 Nov

ಶುಕ್ರವಾರ ಶಬರಿಮಲೆ ದೇವಸ್ಥಾನದತ್ತ ತೆರಳಿದ ಭಕ್ತರ ಸಮೂಹವನ್ನು ಪೊಲೀಸರು ತಪಾಸಣೆ ನಡೆಸಿದರು.
10:43 AM, 17 Nov

ಹಿಂದೂಗಳಿಗೆ ಶಬರಿಮಲೆಗೆ ತೆರಳುವುದು ಭಕ್ತಿ, ತ್ಯಾಗ ಮತ್ತು ಇರುಮುಡಿಯನ್ನು ಕೊಂಡೊಯ್ಯುವ ಶ್ರದ್ಧೆಯ ಪ್ರತೀಕ. ಸುಪ್ರೀಂಕೋರ್ಟ್ ಆದೇಶ ಮತ್ತು ಕಮ್ಯುನಿಸ್ಟರ ಬೆಂಬಲಕ್ಕೆ ಧನ್ಯವಾದಗಳು. ತೃಪ್ತಿ ದೇಸಾಯಿ ಅವರಂತಹ ಪಟ್ಟಭದ್ರ ಹಿತಾಸಕ್ತಿಗಳು ಸ್ವಾಮಿ ಅಯ್ಯಪ್ಪನ ಸನ್ನಿಧಾನವನ್ನು ಪಿಕ್ನಿಕ್ ಸ್ಥಳವನ್ನಾಗಿ ಕುಗ್ಗಿಸಲು ಹೊರಟಿದ್ದಾರೆ ಎಂದು ಸಿಟಿ ರವಿ ಕಿಡಿಕಾರಿದ್ದಾರೆ.
10:38 AM, 17 Nov

ದೇವಸ್ಥಾನದ ಸುತ್ತಮುತ್ತ ಪೊಲೀಸ್ ಭದ್ರತೆಯನ್ನುಬಿಗಿಗೊಳಿಸಲಾಗಿದೆ. ನಿಲಾಕಲ್‌ನಲ್ಲಿ 200 ಪೊಲೀಸರನ್ನು ನಿಯೋಜಿಸಲಾಗಿದ್ದು, ಒಳಬರುವ ಪ್ರತಿ ವಾಹನಗಳನ್ನೂ ತಪಾಸಣೆ ಮಾಡಲಾಗುತ್ತಿದೆ. ಭಕ್ತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.
10:32 AM, 17 Nov

ಶಬರಿಮಲೆ ಕರ್ಮ ಸಮಿತಿಯು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕೇರಳ ಬಂದ್‌ಗೆ ಕರೆ ನೀಡಿದೆ. ಶಬರಿಮಲೆ ದೇವಸ್ಥಾನಕ್ಕೆ ರಾತ್ರಿ ವೇಳೆ ತೆರಳಲು ಪೊಲೀಸರು ಅವಕಾಶ ನೀಡದ ಕಾರಣ ಕೆಪಿ ಶಶಿಕಲಾ ಅವರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
10:26 AM, 17 Nov

ಶಶಿಕಲಾ ಅವರು ಇರುಮುಡಿಕೆಟ್ಟು ಹೊತ್ತುಕೊಂಡು ಬೆಟ್ಟದಲ್ಲಿನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹೊರಟಿದ್ದ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ. ಇನ್ನೂ ಅನೇಕ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಅಧ್ಯಕ್ಷ ಎಸ್‌ಜೆಆರ್ ಕುಮಾರ್ ಆರೋಪಿಸಿದ್ದಾರೆ.
Advertisement
10:25 AM, 17 Nov

ಶಶಿಕಲಾ ಅವರು ಇರುಮುಡಿಕೆಟ್ಟು ಹೊತ್ತುಕೊಂಡು ಬೆಟ್ಟದಲ್ಲಿನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹೊರಟಿದ್ದ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ. ಇನ್ನೂ ಅನೇಕ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಅಧ್ಯಕ್ಷ ಎಸ್‌ಜೆಆರ್ ಕುಮಾರ್ ಆರೋಪಿಸಿದ್ದಾರೆ.
10:23 AM, 17 Nov

ಬಲಪಂಥೀಯ ಸಂಘಟನೆ ನಾಯಕಿಯ ಬಂಧನ ವಿರೋಧಿಸಿ ಕೇರಳ ಬಂದ್‌ಗೆ ಕರೆ ನೀಡಿರುವ ಹಿಂದೂ ಪರ ಸಂಘಟನೆಗಳು.
10:17 AM, 17 Nov

ಹಿಂದೂ ಐಕ್ಯ ವೇದಿ ಸಂಘಟನೆಯ ರಾಜ್ಯಾಧ್ಯಕ್ಷೆ ಕೆ.ಪಿ. ಶಶಿಕಲಾ ಅವರನ್ನು ಶಬರಿಮಲೆ ಸಮೀಪದ ಮರಕ್ಕೂಟಮ್ ಬಳಿ ಶನಿವಾರ ಮಧ್ಯರಾತ್ರಿ 2.30ಕ್ಕೆ ಬಂಧಿಸಲಾಗಿದೆ.
10:13 AM, 17 Nov

ಶಬರಿಮಲೆ ದೇವಸ್ಥಾನ ಶುಕ್ರವಾರ ಸಂಜೆ ತೆರೆದಿದ್ದು, 10-50 ವರ್ಷದ ಒಳಗಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬಳಿಕ ಇದು ಮೂರನೇ ಬಾರಿ ದೇವಸ್ಥಾನದ ಬಾಗಿಲು ತೆರೆದಿರುವುದು. ಒಟ್ಟು 62 ದಿನಗಳ ಕಾಲ ದೇವಸ್ಥಾನ ತೆರೆದಿರಲಿದೆ.

English summary
Hindu goups called for state wide bandh for condemning arrest of Hindu leaders who r protesting against the entry of women into Sabarimala Tepmle. Here is the live updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X