ಕೆಲವೇ ಗಂಟೆಗಳಲ್ಲಿ ಕೇರಳಕ್ಕೆ ಮುಂಗಾರು, 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ತಿರುವನಂತಪುರಂ, ಜೂನ್ 8: ಈಗಾಗಲೇ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಗಾಳಿ ಬೀಸುತ್ತಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ.

ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜೂನ್ 9-11ರವರೆಗೆ ಕೇರಳದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕಳೆದ ಆಗಸ್ಟ್‌ನಲ್ಲಿ ಕೇರಳದಲ್ಲಿ ಪ್ರವಾಹ ಸೃಷ್ಟಿಯಾಗಿ 350ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ರೆಡ್ ಅಲರ್ಟ್ ಎಂದರೆ ಆ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ, ಜೂನ್ 10ರಂದು ತ್ರಿಶೂರ್, ಜೂನ್ 10ರಂದು ಎರ್ನಾಕುಲಮ್, ಜೂನ್ 11ರಂದು ಕೋಳಿಕ್ಕೋಡ್‌ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

Red alert issued in 4 districts of Kerala

ಕೆಲವು ಕಡೆಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಅಂದರೆ ಹೆಚ್ಚು ಮಳೆಯಾಗಲಿದೆ ಎಂದರ್ಥ , ತಿರುವನಂತಪುರಂ, ಕೊಲ್ಲಮ್, ಎರ್ನಾಕುಲಮ್, ತ್ರಿಶೂರ್‌ನಲ್ಲಿ ಜೂನ್9 -10ರಂದು ಹೆಚ್ಚು ಮಳೆಯಾಗಲಿದೆ.

ಕಳೆದ ಬಾರಿ ಓಕಿ ಚಂಡಮಾರುತದಿಂದ ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು. 35-45 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಅರಬ್ಬಿ ಸಮುದ್ರ, ಸೋಮಾಲಿಯಾ, ಲಕ್ಷದ್ವೀಪ, ಮಾಲ್ಡೀವ್ಸ್‌ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+