ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಸೋಲಿಸಿ, ನಮ್ಮ ಎಡಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕಿದೆ : ವಿಜಯನ್

|
Google Oneindia Kannada News

ತಿರುವನಂತಪುರಂ, ಮಾರ್ಚ್ 31: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಮೇಥಿ ಅಲ್ಲದೆ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿರುವ ಬಗ್ಗೆ ಭಾನುವಾರದಂದು ಘೋಷಣೆ ಹೊರ ಬಂದ ಬಳಿಕ ಕೇರಳದ ಎಡಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ.

ರಾಹುಲ್ ಗಾಂಧಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಹುಲ್ ಗಾಂಧಿ ಅವರು ವಯನಾಡು ಲೋಕಸಭೆಯಿಂದ ಎಡಪಕ್ಷದ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಅಂದರೆ ಇಲ್ಲಿ ಬಿಜೆಪಿ ವಿರುದ್ಧ ಸೆಣಸುತ್ತಿಲ್ಲ. 20 ಕ್ಷೇತ್ರಗಳ ಪೈಕಿ ವಯನಾಡು ಕೂಡ ಒಂದು ಕ್ಷೇತ್ರವಷ್ಟೇ. ನಾವು ಹೋರಾಟ ಮುಂದುವರೆಸುತ್ತೇವೆ ಎಂದು ವಿಜಯನ್ ಹೇಳಿದರು.

ಕೇರಳದ ವಯನಾಡಿನಿಂದಲೂ ರಾಹುಲ್ ಗಾಂಧಿ ಸ್ಪರ್ಧೆಕೇರಳದ ವಯನಾಡಿನಿಂದಲೂ ರಾಹುಲ್ ಗಾಂಧಿ ಸ್ಪರ್ಧೆ

ಬಿಜೆಪಿ ಅಭ್ಯರ್ಥಿ ಇರುವ ಕ್ಷೇತ್ರದಿಂದ ಸ್ಪರ್ಧಿಸಬಹುದಾಗಿತ್ತು. ಎಡಪಕ್ಷಗಳ ವಿರುದ್ಧ ಹೋರಾಡುವಂತದ್ದು ಇಲ್ಲಿ ಏನಿಲ್ಲ. ಎಡಪಕ್ಷಗಳನ್ನು ನಿಜಕ್ಕೂ ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದ್ದರೆ, ನಾವು ಪ್ರತಿಸ್ಪರ್ಧಿಗೆ ಸಿದ್ಧ ಎಂದು ತಿಳಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಾಹುಲ್ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಪ್ರಕಾಶ್ ಕಾರಟ್, ಸಿಪಿಐ(ಎಂ)ನ ಮಾಜಿ ಪ್ರಧಾನ ಕಾರ್ಯದರ್ಶಿ, ಎಡಪಕ್ಷಗಳ ವಿರುದ್ಧ ಕಾಂಗ್ರೆಸ್ ಸ್ಪರ್ಧಿಸಬೇಕು ಎಂದು ಬಯಸಿದರೆ ನಾವು ಹೋರಾಟಕ್ಕೆ ಸಿದ್ಧ ಎಂದಿದ್ದಾರೆ.

20 ಕ್ಷೇತ್ರಗಳಲ್ಲಿ ವಯನಾಡು ಕೂಡಾ ಒಂದು

20 ಕ್ಷೇತ್ರಗಳಲ್ಲಿ ವಯನಾಡು ಕೂಡಾ ಒಂದು

ರಾಹುಲ್ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಪ್ರಕಾಶ್ ಕಾರಟ್, ಸಿಪಿಐ(ಎಂ)ನ ಮಾಜಿ ಪ್ರಧಾನ ಕಾರ್ಯದರ್ಶಿ, ಎಡಪಕ್ಷಗಳ ವಿರುದ್ಧ ಕಾಂಗ್ರೆಸ್ ಸ್ಪರ್ಧಿಸಬೇಕು ಎಂದು ಬಯಸಿದರೆ ನಾವು ಹೋರಾಟಕ್ಕೆ ಸಿದ್ಧ. ಬಿಜೆಪಿ ವಿರುದ್ಧ ಹೋರಾಡುವುದಾಗಿ ಘೋಷಿಸಿಕೊಂಡಿರುವ ಕಾಂಗ್ರೆಸ್, ತಮ್ಮದೇ ಸಿದ್ಧಾಂತವನ್ನು ಮುರಿಯುತ್ತಿದೆ. ಕೇರಳದಲ್ಲಿ ಬಿಜೆಪಿ ವಿರುದ್ಧ ಹೋರಾಡುವ ಪ್ರಮುಖ ಶಕ್ತಿಯಾಗಿರುವ ಎಲ್ ಡಿ ಎಫ್ ವಿರುದ್ಧವೇ ಪಕ್ಷದ ಅಧ್ಯಕ್ಷರು ಕಣಕ್ಕಿಳಿಯುತ್ತಿದ್ದಾರೆ ಎಂದಿದ್ದಾರೆ.

ಕರ್ನಾಟಕ, ತಮಿಳುನಾಡಿನಿಂದಲೂ ಆಫರ್ ಇತ್ತು

ಕರ್ನಾಟಕ, ತಮಿಳುನಾಡಿನಿಂದಲೂ ಆಫರ್ ಇತ್ತು

ರಾಹುಲ್ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧಿಸಬೇಕು ಎಂದು ರಾಜ್ಯದ ನಾಯಕರು ತೀವ್ರ ಒತ್ತಡ ಹೇರಿದ್ದರು. ತಮಿಳುನಾಡಿನಿಂದಲೂ ಅವರಿಗೆ ಆಹ್ವಾನ ನೀಡಲಾಗಿತ್ತು. ಬೆಂಗಳೂರು ಸೆಂಟ್ರಲ್, ಬೀದರ್ ಮತ್ತು ಮೈಸೂರು ಕ್ಷೇತ್ರಗಳಲ್ಲಿ ಒಂದನ್ನು ಅವರು ಆಯ್ದುಕೊಳ್ಳಬಹುದು ಎಂದು ನಿರೀಕ್ಷೆಯಿತ್ತು. ತಮಿಳುನಾಡಿನ ಶಿವಗಂಗಾ ಕ್ಷೇತ್ರದ ಹೆಸರೂ ಚಾಲ್ತಿಯಲ್ಲಿತ್ತು.

ಬಿಜೆಪಿ ವಿರುದ್ಧ ಸ್ಪರ್ಧಿಸಬೇಕಿತ್ತು

ರಾಹುಲ್ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಪ್ರಕಾಶ್ ಕಾರಟ್, ಸಿಪಿಐ(ಎಂ)ನ ಮಾಜಿ ಪ್ರಧಾನ ಕಾರ್ಯದರ್ಶಿ, ಎಡಪಕ್ಷಗಳ ವಿರುದ್ಧ ಕಾಂಗ್ರೆಸ್ ಸ್ಪರ್ಧಿಸಬೇಕು ಎಂದು ಬಯಸಿದರೆ ನಾವು ಹೋರಾಟಕ್ಕೆ ಸಿದ್ಧ. ಬಿಜೆಪಿ ವಿರುದ್ಧ ಹೋರಾಡುವುದಾಗಿ ಘೋಷಿಸಿಕೊಂಡಿರುವ ಕಾಂಗ್ರೆಸ್, ತಮ್ಮದೇ ಸಿದ್ಧಾಂತವನ್ನು ಮುರಿಯುತ್ತಿದೆ. ಕೇರಳದಲ್ಲಿ ಬಿಜೆಪಿ ವಿರುದ್ಧ ಹೋರಾಡುವ ಪ್ರಮುಖ ಶಕ್ತಿಯಾಗಿರುವ ಎಲ್ ಡಿ ಎಫ್ ವಿರುದ್ಧವೇ ಪಕ್ಷದ ಅಧ್ಯಕ್ಷರು ಕಣಕ್ಕಿಳಿಯುತ್ತಿದ್ದಾರೆ ಎಂದಿದ್ದಾರೆ.

ಮೋದಿ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದರ ಬಗ್ಗೆ

ಮೋದಿ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದರ ಬಗ್ಗೆ ಸಾರ್ವಜನಿಕರಿಂದ ಸ್ಪಷ್ಟನೆ ಮಾಡಿ ಟ್ವೀಟ್. ಹಿಂದಿ ಭಾಷಿಕ ನಾಡಿನಲ್ಲಿ ಹೊರಗಿನಿಂದ ಬಂದವರು ಗೆಲ್ಲಲು ಸಾಧ್ಯವಿಲ್ಲ ಎಂಬ ಪಂಡಿತರ ಭವಿಷ್ಯವನ್ನು ಸುಳ್ಳು ಮಾಡಿದರು. ರಾಹುಲ್ ಅವರಂತೆ ಸೇಫ್ ಕ್ಷೇತ್ರವನ್ನು ಹುಡುಕಲಿಲ್ಲ.

English summary
Kerala Chief Minister Pinarayi Vijayan said that Rahul Gandhi contesting from Wayanad Lok Sabha constituency was a challenge to the Left and not a battle against the BJP. Congress on Sunday announced that Rahul Gandhi would be contesting the Lok Sabha elections from Wayanad in Kerala, along with Amethi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X