ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ: ಇಂದು 15 ನಿಮಿಷ ಇಡೀ ರಾಜ್ಯವೇ ಕತ್ತಲೆಯಲ್ಲಿ

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 29: ದೇಶದಲ್ಲಿ ಕಲ್ಲಿದ್ದಲು ಬಿಕ್ಕಟ್ಟು ಎದುರಾಗಿ ದೇಶದ ರಾಜ್ಯಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟುಗುವ ಭೀತಿಯು ಎದುರಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಗಳು ಕತ್ತಲಲ್ಲಿ ಕಳೆಯುವ ಪರಿಸ್ಥಿತಿಯು ಬಂದರು ಬರಬಹುದು. ಏಕೆಂದರೆ ದೇಶದಲ್ಲಿ ಕಲಿದ್ದಲು ಬಿಕ್ಕಟ್ಟು ಹಾಗೂ ತೀವ್ರಗೊಳ್ಳುತ್ತಿರುವ ಗರಿಷ್ಠ ಬೇಸಿಗೆಯ ತಾಪಮಾನದಿಂದಾಗಿ ಇಂದು (ಏ.29)15 ನಿಮಿಷಗಳ ಕಾಲ ಕೇರಳ ಇಡೀ ರಾಜ್ಯದಲ್ಲಿಯೇ ಕತ್ತಲು ಆವರಿಸಲಿದೆ.

ಆಂದ್ರಪ್ರದೇಶ ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವ ಪರಿಣಾಮ ಕೇರಳ ರಾಜ್ಯದಲ್ಲಿ ಗುರುವಾರ ಮತ್ತು ಶುಕ್ರವಾರ 15 ನಿಮಿಷಗಳ ಕಾಲ ವಿದ್ಯುತ್ ನಿಲ್ಲಿಸಲಾಗುವುದು ಎಂದು ಕೇರಳದ ಕೆಎಸ್ಇಬಿಎಲ್ ಕೇರಳ ರಾಜ್ಯದಲ್ಲಿ ಆದೇಶ ಜಾರಿ ಮಾಡಿದೆ.

ರಾಷ್ಟ್ರವ್ಯಾಪಿ ಕಲ್ಲಿದ್ದಲು ಬಿಕ್ಕಟ್ಟು ಮತ್ತು ತೀವ್ರಗೊಳ್ಳುತ್ತಿರುವ ಬೇಸಗೆಯ ಪರಿಣಾಮ ಕೇರಳದ ಕೆಎಸ್ಇಬಿ ಎರಡು ದಿನ ರಾಜ್ಯದಲ್ಲಿ 15 ನಿಮಿಷಗಳು ಸಂಜೆ 6ರಿಂದ ರಾತ್ರಿ 11:30ರ ನಡುವಿನ ಸಮಯದಲ್ಲಿ 15 ನಿಮಿಷ ರಾಜ್ಯದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಆದೇಶ ಹೊರಡಿಸಲಾಗಿದೆ.

Power Cut in Kerala: KSEB announces 15-min power cut in Kerala during peak hours

ನಗರಗಳು, ಆಸ್ಪತ್ರೆಗಳು ಮತ್ತು ಅಗತ್ಯ ಸೇವೆಗಳಿಗೆ ಗುರುವಾರ ಮತ್ತು ಶುಕ್ರವಾರ ಸಂಜೆ 6.30ರಿಂದ ರಾತ್ರಿ 11.30 ರವರೆಗೆ ವಿದ್ಯುತ್ ಕಡಿತದಿಂದ ವಿನಾಯಿತಿ ನೀಡಲಾಗಿದೆ ಎಂದು ಹೇಳಿಕೊಂಡಿರುವ ಕೆಎಸ್‌ಇಬಿಎಲ್, ಕಲ್ಲಿದ್ದಲು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದಲ್ಲಿ ಉಷ್ಣ ವಿದ್ಯುತ್ ಉತ್ಪಾದನೆಯು ಕುಸಿದಿದೆ ಇಂತಹ ಸಮಯದಲ್ಲಿ ಬೇಸಿಗೆಯ ಬಿಸಿಯಿಂದಾಗಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಎಂದು ಕೆಎಸ್ಇಬಿಎಲ್ ತಿಳಿಸಿದೆ.

ದೇಶದಲ್ಲಿ10.7 GW ವಿದ್ಯುತ್ ಕೊರತೆಯಿದೆ ಮತ್ತು ಕೇರಳ ದಿನಕ್ಕೆ 400MWರಿಂದ 500MW ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ. ಕೆಎಸ್ಇಬಿಎಲ್ ಗ್ರಾಹಕರು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಬೇಕು ಅನಗತ್ಯ ವಿದ್ಯುತ್‌ನ್ನು ಬಳಕೆ ಮಾಡಬಾರದು ಅಗತ್ಯವಿದ್ದರೆ ಮಾತ್ರ ವಿದ್ಯುತ್ ಬಳಕೆ ಮಾಡಿಕೊಳ್ಳಬೇಕು. ಬೆಳಕಿನಲ್ಲಿ ವಿದ್ಯುತ್ ದ್ವೀಪಗಳನ್ನು ಉರಿಸಬಾರದು ಎಂದು ವಿದ್ಯುತ್ ಗ್ರಾಹಕರಿಗೆ ಮನವಿ ಮಾಡಿಕೊಂಡಿದೆ.

Power Cut in Kerala: KSEB announces 15-min power cut in Kerala during peak hours

ಇಂದು ಸಂಜೆ 6.30ರಿಂದ ರಾತ್ರಿ 11:30ರವರೆಗೆ 15 ನಿಮಿಷ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಕೆಎಸ್‌ಇಬಿ ಮಾಹಿತಿ ನೀಡಿದೆ. ಕೇರಳ ಕೇಂದ್ರೀಯ ಗ್ರಿಡ್ನಿಂದ ವಿದ್ಯುತ್ ಕೊರತೆಯನ್ನು ಎದುರಿಸುತ್ತಿರುವ ಕಾರಣ ವಿದ್ಯುತ್ ನಿಲುಗಡೆಯಾಗಿದೆ.

ಉತ್ತರ ಪ್ರದೇಶ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿನ ವಿದ್ಯುತ್ ಬಿಕ್ಕಟ್ಟಿನಿಂದ ಕೆಎಸ್‌ಇಬಿಗೆ ಯಾವುದೇ ಪರಿಣಾಮವು ಬೀರದಿದ್ದರೂ ಕಳೆದ ಎರಡು ವರ್ಷಗಳಿಂದ ರಾಜ್ಯದ ಹೆಚ್ಚುತ್ತಿರುವ ವಿದ್ಯುತ್ ಬಳಕೆಯನ್ನು ನಿಯಂತ್ರಿಸಲು 15 ನಿಮಿಷಗಳ ಕಾಲ ವಿದ್ಯುತ್ ನಿಲ್ಲಿಸುವುದು ಅನಿವಾ‍ರ್ಯವಾಗಿದೆ . ಕೆಎಸ್‌ಇಬಿಎಲ್ ಗುತ್ತಿಗೆ ಪಡೆದಿರುವ ದೀರ್ಘಾವಧಿ ಘಟಕಗಳಲ್ಲಿ ಕಲ್ಲಿದ್ದಲು ಕೊರತೆಯ ಬಗ್ಗೆ ವರದಿಯಾಗಿಲ್ಲ ಎಂದು ಕೆಎಸ್‌ಇಬಿಎಲ್ ಈ ಹಿಂದೆ ಹೇಳಿಕೊಂಡಿತ್ತು ಆದರೆ ರಾಜ್ಯದಲ್ಲಿ ವಿದ್ಯುತ್ ನಿಲುಗಡೆ ಮಾಡುತ್ತಿರುವುದನ್ನು ನೋಡಿದರೆ ಬೇರೆ ರಾಜ್ಯಗಳಿಗೂ ಈ ಪರಿಸ್ಥಿತಿ ಎದುರಾಗಬಹುದು ಎಂದು ವರದಿಯಾಗಿದೆ.

English summary
Power Cut in Kerala: KSEB enforced a 15-minute power supply cut during peak hours for two days in the state. The decision was taken in the wake of the nationwide coal crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X