ಕೇರಳ: ಕೊರೊನಾ ಲಸಿಕೆ ಪಡೆದಿದ್ದರೂ ಈ ಜಿಲ್ಲೆಯ 20 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು
ತಿರುವನಂತಪುರಂ, ಆಗಸ್ಟ್ 11: ಕೊರೊನಾ ಲಸಿಕೆ ಪಡೆದಿದ್ದರೂ ಕೇರಳದ ಪತ್ತನಂತಿಟ್ಟದಲ್ಲಿ 20 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಲಸಿಕೆ ಪಡೆದವರಲ್ಲಿ ಹೆಚ್ಚಿನ ಸಂಖ್ಯೆಯ ಕೊರೊನಾ ಸೋಂಕುಗಳು ಪತ್ತೆಯಾಗುತ್ತಿದ್ದು ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರ ತಂಡದ ಗಮನ ಸೆಳೆದಿದೆ. ಕುತೂಹಲಕಾರಿ ಸನ್ನಿವೇಶದಲ್ಲಿ ಸಾಂಕ್ರಾಮಿಕ ರೋಗ ತನಿಖೆ ಆರಂಭಿಸಿದೆ.
ಜಿಲ್ಲೆಯಲ್ಲಿ ಇದುವರೆಗೆ ಒಂದು ಡೋಸ್ ಲಸಿಕೆ ಪಡೆದವರಲ್ಲಿ 14,974 ಮಂದಿ ಮತ್ತು ಎರಡು ಡೋಸ್ ಲಸಿಕೆಯ ನಂತರ 5,042 ಸೋಂಕುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ಪತ್ತನಂತಿಟ್ಟದಲ್ಲಿ ಇದುವರೆಗೆ ಸುಮಾರು 1.35 ಲಕ್ಷ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ. ಲಸಿಕೆ ಹಾಕಿದವರಲ್ಲಿ ಹೆಚ್ಚಿನ ಸಂಖ್ಯೆಯ ಸೋಂಕುಗಳು ಮತ್ತು ಸೋಂಕುಗಳ ಹೊರತಾಗಿಯೂ ಕೇರಳದಲ್ಲಿ ಒಟ್ಟಾರೆ ಸಾವಿನ ಪ್ರಮಾಣವು 0.5 % ಕ್ಕಿಂತ ಕಡಿಮೆ ಇದೆ.
ಈ ದತ್ತಾಂಶ ಒಂದೆರೆಡು ದಿನಗಳಲ್ಲಿ ಸಿಗಬಹುದೆಂದು ಆಶಿಸುತ್ತಿದ್ದೇವೆ. ಅದನ್ನು ಹೆಚ್ಚು ಅರ್ಥಪೂರ್ಣವಾಗಿ ವಿಶ್ಲೇಷಿಸಲು ಸಾಧ್ಯವಾಗುತ್ತದೆ ಎಂದು ಸಿಂಗ್ ಈ ಪತ್ರಿಕೆಗೆ ತಿಳಿಸಿದರು. ಹೊಸ ಸೋಂಕು ಮತ್ತು ಮರು ಸೋಂಕುಗಳ ಚಾಲನಾ ಅಂಶ ಮತ್ತು ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಸಿಂಗ್ ಹೇಳಿದರು.
6 ಸದಸ್ಯರ ತಂಡವನ್ನು ಮುನ್ನಡೆಸುತ್ತಿರುವ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ನ ನಿರ್ದೇಶಕರಾದ ಎಸ್.ಕೆ ಸಿಂಗ್, ಇಂತಹ ಪ್ರಕರಣಗಳಲ್ಲಿ ರೋಗದ ತೀವ್ರತೆ, ಆಸ್ಪತ್ರೆಗೆ ದಾಖಲಿಸುವ ದರ ಮತ್ತು ಸಾವಿನ ದರಗಳಂತಹ ನಿರ್ದಿಷ್ಟತೆಗಳ ಮಾಹಿತಿ ನೀಡುವಂತೆ ಕೇರಳ ಸರ್ಕಾರವನ್ನು ಕೇಳಿರುವುದಾಗಿ ಹೇಳಿದರು.
ಒಟ್ಟಾರೆ, ಕೊರೊನಾ ನಿಯಮಗಳನ್ನು ಪಾಲನೆ ಮಾಡದಿರುವುದು, ಸೀಮಿತ ನಿರ್ಬಂಧಗಳನ್ನು ವಿಧಿಸಿದ್ದರೂ ಅವುಗಳನ್ನು ಜಾರಿ ಮಾಡದಿರುವುದು, ಜನರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡದೆ ನಿರ್ಲಕ್ಷ್ಯ ವಹಿಸುತ್ತಿರುವುದು, ಸೋಂಕಿತ ಸಂಪರ್ಕಿತರನ್ನು ಪತ್ತೆ ಮಾಡಿ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದಿರುವುದು ಸೇರಿದಂತೆ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಲಭ್ಯವಿಲ್ಲದಿರುವುದು ಕೇರಳದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಲು ಕಾರಣಗಳಾಗಿವೆ.

ಕೊರೊನಾ ಮೂರನೇ ಅಲೆ ಆತಂಕ
ರಾಜ್ಯ ಕೊರೊನಾ ಮೂರನೇ ಅಲೆಯ ಹೊಸ್ತಿಲಿನಲ್ಲಿದೆ. ಇದಕ್ಕೆ ನೆರೆಯ ಕೇರಳ ರಾಜ್ಯದ ಬಳುವಳಿ ಹೆಚ್ಚಾಗಿಯೇ ಇರಲಿದೆ. ರಾಜ್ಯದಲ್ಲಿ ಮೂರನೇ ಅಲೆಯ ಆರಂಭಕ್ಕೆ ಮತ್ತು ಕೇಸ್ ಗಳು ಹೆಚ್ಚಾಗೋದಕ್ಕೆ ಕೇರಳ ರಾಜ್ಯ ಕಾರಣವಾಗೋ ಸಾಧ್ಯತೆಗಳು ದಟ್ಟವಾಗಿವೆ. ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾದಿಂದ ಜೀವನ ಸಾಗಿಸುವುದು ಜೀವ ಉಳಿಸಿಕೊಳ್ಳುದು ದೊಡ್ಡ ಸವಾಲ್ ಆಗಿದೆ. ಎರಡನೇ ಅಲೆಯ ಅಂತ್ಯ ಕಾಲಕ್ಕೆ ರಾಜ್ಯ ಬಂದಿದೆ.
ರಾಜ್ಯ ಸರ್ಕಾರ ಕೇರಳದಿಂದ ಬರುವವರಿಗೆ ಕಡ್ಡಾಯ ನೆಗೆಟಿವ್ ರಿಪೋರ್ಟ್ ಅಂತ ಹೇಳಿದೆ. ರಾಜ್ಯದ ಗಡಿಯಲ್ಲಿ ಸೂಕ್ತ ರೀತಿಯಲ್ಲಿ ತಪಾಸಣೆ ಕೂಡ ಆಗ್ತಿದೆ. ಅದರೇ ರಾಜ್ಯಕ್ಕೆ ಕೇರಳದಿಂದ ಪ್ರತಿನಿತ್ಯ ಸಾವಿರಾರು ಜನ ರೈಲಿನ ಮೂಲಕ ಬರುತ್ತಿದ್ದಾರೆ.

ಬಫರ್ ಜೋನ್ ನಿರ್ಮಾಣದ ಅಗತ್ಯವಿದೆ
ಕೇರಳದಲ್ಲಿ ಸೋಂಕಿನ ನಿಯಂತ್ರಣಕ್ಕೆ ಬಫರ್ ಜೋನ್‌ಗಳನ್ನು ಹೆಚ್ಚಿಸುವ ಅಗತ್ಯವಿದೆ. ಅಲ್ಲದೇ ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯ ಆಗಬೇಕಿದೆ. ಸದ್ಯ ಕೊರೊನಾ ನಿಯಂತ್ರಣಕ್ಕೆ ಈಗ ವಿಧಿಸುವ ನಿರ್ಬಂಧಗಳನ್ನು ಮತ್ತಷ್ಟು ಕಠಿಣವಾಗಿ ಜಾರಿ ಮಾಡುವ ಅಗತ್ಯವಿದೆ. ಕೇರಳದಲ್ಲಿ ಸದ್ಯ ಸೋಂಕಿತರ ಪತ್ತೆ ಪ್ರಮಾಣ 1:5ರಷ್ಟಿದೆ. ಆದರೆ ಇದನ್ನು 1:20ಕ್ಕೆ ಹೆಚ್ಚಳ ಮಾಡಬೇಕಿದೆ. ಇದುವೇ ಸೋಂಕು ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಹೋಂ ಐಸೊಲೇಷನ್ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಕೇಂದ್ರ ಸಮಿತಿ ಹೇಳಿದೆ.

21,119 ಕೊರೊನಾ ಪ್ರಕರಣಗಳು ಪತ್ತೆ
ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 21,119 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, ಒಟ್ಟು 35,86,693 ಪ್ರಕರಣಗಳಿವೆ. 152 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 18,004 ಮಂದಿ ಸಾವನ್ನಪ್ಪಿದ್ದಾರೆ. 1,71,985 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 1,32,769 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಎರಡು ದಿನ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿತ್ತು
ಕೊರೊನಾ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಜುಲೈ 31 ಹಾಗೂ ಆಗಸ್ಟ್ 1 ರಂದುಎರಡು ದಿನ ಕೇರಳದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿತ್ತು. ಕೇಂದ್ರದ ಉನ್ನಾಧಿಕಾರಿಗಳ ಈ ತಂಡವು ಕೇರಳದ ಆರೋಗ್ಯ ಇಲಾಖೆಗಳ ಜತೆ ನಿಕಟವಾಗಿ ಕೆಲಸ ಮಾಡಲಿದೆ. ಅಲ್ಲಿ ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಪರಿಸ್ಥಿತಿಗಳ ಕುರಿತು ಪರಾಮರ್ಶೆ ನಡೆಸಿ, ಸಮಗ್ರ ಮಾಹಿತಿ ಕಲೆ ಹಾಕಿ, ಸಾರ್ವಜನಿಕ ಆರೋಗ್ಯ ಕಾಪಾಡಲು ಅಗತ್ಯವಾದ ಎಲ್ಲಾ ಸಲಹೆ ಸೂಚನೆ ಒಳಗೊಂಡ ಶಿಫಾರಸು ಮಾಡಲಿದೆ.












Click it and Unblock the Notifications