Get Updates
Get notified of breaking news, exclusive insights, and must-see stories!

ದೇಶದೆಲ್ಲೆಡೆ ಕಮಲ ಅರಳಿಸಿದ ಮೋದಿಗೆ ತಾವರೆಯ ತುಲಾಭಾರ

Recommended Video

      ಕೇರಳದ ಪ್ರಸಿದ್ಧ ದೇವಾಲಯದಲ್ಲಿ ಮೋದಿಯಿಂದ ವಿಶೇಷ ಪೂಜೆ | Oneindia Kannada

      ತಿರುವನಂತಪುರಂ, ಜೂನ್ 08: ಇತ್ತೀಚೆಗಷ್ಟೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ದೇಶದೆಲ್ಲೆಡೆ ಕಮಲ ಅರಳಿಸಿದ ನರೇಂದ್ರ ಮೋದಿ ಅವರಿಗೆ ಇಂದು ಕಮಲದ ಹೂಗಳಿಂದ ತುಲಾಭಾರ ಮಾಡಲಾಯಿತು.

      ಕೇರಳದ ಶ್ರಿಶೂರ್‌ನ ಪ್ರಸಿದ್ಧ ಗುರುವಾಯುರ್ ದೇವಾಲಯದಲ್ಲಿ ಪ್ರಧಾನಿ ಮೋದಿ ಅವರಿಗೆ ಕಮಲದ ಹೂಗಳಿಂದ ತುಲಾಭಾರ ಮಾಡಲಾಯಿತು. ಜೊತೆಗೆ ಮೋದಿ ಅವರು ಇಲ್ಲಿ ವಿಶೇಷ ಪೂಜೆಯಲ್ಲಿಯೂ ಪಾಲ್ಗೊಂಡಿದ್ದರು.

      ಮೋದಿ ಅವರು ದೇವಾಲಯದಲ್ಲಿ ಭಕ್ತಿ-ಭಾವದಿಂದ ಪೂಜೆ ಮಾಡುತ್ತಿರುವ, ದೇವಾಲಯ ಪ್ರದಕ್ಷಿಣೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೋದಿ ಅವರು ಸಹ ಪೂಜೆಯ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

      ಮೋದಿ ಅವರು ಕೇರಳ ಶೈಲಿಯಲ್ಲಿಯೇ ಪಂಚೆ, ಶಲ್ಯ ಧರಿಸಿ ದೇವರ ದರ್ಶನದಲ್ಲಿ ಭಾಗಿಯಾಗಿದ್ದಾರೆ. ಮೋದಿ ಅವರೊಂದಿಗೆ ಕೆಲವು ಕೇಂದ್ರ ಸಚಿವರು, ಪಕ್ಷದ ವರಿಷ್ಠರು ಭಾಗಿಯಾಗಿದ್ದಾರೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಭಾರಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.

      Narendra Modi at Sri Krishna Temple in Guruvayur of Thrissur

      ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಆದ ನಂತರ ಮೋದಿ ಅವರದ್ದು ಇದು ಮೊದಲ ದೇವಸ್ಥಾನ ಭೇಟಿಯಾಗಿದೆ. ಲೋಕಸಭೆ ಚುನಾವಣೆಯ ಮತದಾನ ಮುಗಿದ ಬಳಿಕ ಅವರು ಕೇದಾರನಾಥ ದೇವಾಲಯಕ್ಕೆ ಹೋಗಿದ್ದರು. ಆ ನಂತರ ಈಗ ಅವರು ಕೇರಳದ ಗುರುವಾಯೂರ್ ದೇವಾಲಯಕ್ಕೆ ಆಗಮಿಸಿದ್ದಾರೆ.

      ವಿಶೇಷವೆಂದರೆ ರಾಹುಲ್ ಗಾಂಧಿ ಅವರು ಸಹ ಇದೇ ಸಮಯದಲ್ಲಿ ಕೇರಳದಲ್ಲಿಯೇ ಇದ್ದಾರೆ. ಅವರ ಮೂರು ದಿನದ ಕೇರಳ ಭೇಟಿ ನಿನ್ನೆ ಶುರುವಾಗಿದ್ದು, ಇಂದು ಎರಡನೇಯ ದಿನ ಕಲ್ಪೆಟ್ಟಾನಲ್ಲಿ ರೋಡ್‌ ಶೋ ನಡೆಸುತ್ತಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+