ಪ್ರೀತಿಸಿದ ಬಾಲಕಿಯನ್ನು ಮನೆಗೆ ಕರೆದು ಬೆಂಕಿ ಹಚ್ಚಿ ಕೊಂದ ಪಾಗಲ್ ಪ್ರೇಮಿ

ಪಾಲಕ್ಕಾಡ್‌, ಏಪ್ರಿಲ್‌ 25: ಅಪ್ರಾಪ್ತ ಯುವತಿಯೊಂದಿಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಯುವಕನೊಬ್ಬ ಯುವತಿಗೆ ಬೆಂಕಿಹಚ್ಚಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡುಕೊಂಡ ಘಟನೆ ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದೆ.

ಭಾನುವಾರ (ಏಪ್ರಿಲ್ 24)ರ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಸ್ಥಳೀಯ ಪೋಲಿಸರು ಮಾಹಿತಿ ನೀಡಿದ್ದು ಈ ಇಬ್ಬರು ಪ್ರೇಮಿಗಳು ಪ್ರೀತಿಸುತ್ತಿದ್ದರು. ಒಂದೇ ಮನೆಯ ರೂಮ್‌ನಲ್ಲಿ ತಡರಾತ್ರಿ ಹುಟ್ಟಿದ ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದರು. ಆದರೆ ಭಾನುವಾರ ಬೆಳಗ್ಗೆ ರೂಮ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಈ ಇಬ್ಬರನ್ನು ಕಾಪಾಡಲು ಪ್ರಯತ್ನಿಸಿದ್ದಾರೆ. ಆದರೆ, ಬೆಂಕಿಯಿಂದ ಸುಟ್ಟುಕೊಂಡಿದ್ದ ಇಬ್ಬರನ್ನು ಸಾರ್ವಜನಿಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಇಬ್ಬರು ಸಾವನ್ನಪ್ಪಿದರು.

 Lover who was brought home by a girl he loved and killed by fire

23 ವರ್ಷದ ಯುವಕ ಹಾಗೂ 16 ವರ್ಷದ ಬಾಲಕಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಥಳೀಯ ಪೊಲೀಸರು ಹೇಳುವಂತೆ, 23 ವರ್ಷದ ಯುವಕ ಬಾಲಸುಬ್ರಹ್ಮಣ್ಯಂ ಎಂಬಾತನೇ 16 ವರ್ಷದ ಅಪ್ರಾಪ್ತೆ ಬಾಲಕಿಯನ್ನು ಪ್ರೀತಿಸುತ್ತಿದ್ದನು. ಬಾಲಕಿ‌ ಕೂಡ ಇವಳನ್ನು ಪ್ರೀತಿಸದ್ದಳು. ಇವರಿಬ್ಬರೂ ಲಿವಿಂಗ್ ಟು ರಿಲೆಷನಶೀಪ್‌ನಲ್ಲಿದ್ದರು. ಶನಿವಾರ ರಾತ್ರಿ ಇಬ್ಬರು ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುವ ನೆಪದಲ್ಲಿ ಬಾಲಸುಬ್ರಹ್ಮಣ್ಯಂ ಬಾಲಕಿಯನ್ನು ಕೊಲ್ಲೇನಗೋಡೆನಲ್ಲಿರುವ ತನ್ನ ಮನೆಗೆ ಕರಿಸಿಕೊಂಡಿದ್ದನು. ಆದರೆ ಭಾನುವಾರ ಬೆಳಗ್ಗೆ ಬಾಲಸುಬ್ರಹ್ಮಣ್ಯಂ ತಾನು ಪ್ರೀತಿಸಿದ ಅಪ್ರಾಪ್ತ ಬಾಲಕಿಗೂ ಬೆಂಕಿ ಹಚ್ಚಿ ಕೊಂದು ಕೊನೆಗೂ ತಾನು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.‌

 Lover who was brought home by a girl he loved and killed by fire

ಬಾಲಸುಬ್ರಮಣ್ಯಂ ಕೊಠಡಿಯಿಂದ ಹೊಗೆ ಬರುತ್ತಿರುವುದನ್ನು ಕಂಡ ಅಕ್ಕಪಕ್ಕದ ಮನೆಯವರೂ ಎಚ್ಚೆತ್ತುಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಬಳಿಕ ಇಬ್ಬರನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮತ್ತು ನಂತರ ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಭಾನುವಾರ ಮಧ್ಯಾಹ್ನದ ಸುಮಾರಿಗೆ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಪೋಲಿಸರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+