Get Updates
Get notified of breaking news, exclusive insights, and must-see stories!

ನಟ ದಿಲೀಪ್ ಮಾಜಿ ಪತ್ನಿ, ಸೂಪರ್ ಸ್ಟಾರ್ ನಟಿ ಚುನಾವಣಾ ಕಣಕ್ಕೆ

ತಿರುವನಂತಪುರಂ, ಜನವರಿ 27: ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ನಟಿ ಮಂಜು ವಾರಿಯರ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಸುಳಿವು ಸಿಕ್ಕಿದೆ. ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸಿಲುಕಿರುವ ಸ್ಟಾರ್ ನಟ ದಿಲೀಪ್ ಅವರು ಮಂಜು ಅವರ ಮಾಜಿ ಪತಿ.

ಸಾಮಾಜಿಕ ಹೋರಾಟ,ಮಹಿಳಾ ಶೋಷಣೆ ಪರ ದನಿಯೆತ್ತುವ ಮೂಲಕ ಮನೆ ಮಾತಾಗಿರುವ ಮಂಜು ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಲು ಕಾಂಗ್ರೆಸ್ ಮುಂದಾಗಿದೆ.

ಆದರೆ, ಮಂಜು ವಾರಿಯರ್ ಅವರು ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದು, ಅಗತ್ಯಬಿದ್ದರೆ ಸಮರ್ಥ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಬಹುದು ಎಂದು ಅವರ ಆಪ್ತವಲಯದಿಂದ ತಿಳಿದು ಬಂದಿದೆ.

Lok Sabha elections 2019: Kerala Actress Manju Warrier likely to join Congress

ಹೀಗಾಗಿ, ಕಾಂಗ್ರೆಸ್ ನೀಡುವ ಆಫರ್ ತಿರಸ್ಕರಿಸಿದರೂ, ಸ್ಟಾರ್ ಪ್ರಚಾರಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಪರ ದನಿಯಾಗಿರುವ ಮಂಜು ಅವರು ಡಬ್ಲ್ಯೂಸಿಸಿ ಸಂಘಟನೆ ಸ್ಥಾಪಕರಲ್ಲಿ ಒಬ್ಬರು. ದಿಲೀಪ್ ಪರ ನಿಂತ ಅಲ್ಲಿನ ಚಿತ್ರರಂಗ ಮಂಡಳಿ (AMMA) ವಿರುದ್ಧ ಮಂಜು ಹೋರಾಟ ನಡೆಸಿದ್ದರು.

40 ವರ್ಷ ವಯಸ್ಸಿನ ಮಂಜು ಅವರು ಇತ್ತೀಚಿಗೆ ಮೋಹನ್ ಲಾಲ್ ಜತೆ ಓಡಿಯನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+