ಫೋಟೋ ಶೂಟ್‌ಗೆ ಕೆಎಸ್ಆರ್‌ಟಿಸಿ ಬಸ್ ಬಾಡಿಗೆಗೆ ಲಭ್ಯ!

ತಿರುವನಂತಪುರಂ, ಅಕ್ಟೋಬರ್ 29 : ಕೇರಳದಲ್ಲಿ ಪ್ರೀ ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಬಹಳ ಜನಪ್ರಿಯವಾಗಿದೆ. ಇದನ್ನೇ ಆದಾಯದ ಮೂಲವನ್ನಾಗಿ ಮಾಡಿಕೊಳ್ಳಲು ಕೆಎಸ್ಆರ್‌ಟಿಸಿ ತೀರ್ಮಾನಿಸಿದೆ.

ಡಬಲ್ ಡೆಕ್ಕರ್ ಬಸ್‌ಗಳನ್ನು ಪ್ರೀ ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್‌ಗಳಿಗೆ ಬಾಡಿಗೆಗೆ ಕೆಎಸ್ಆರ್‌ಟಿಸಿ ನೀಡುತ್ತಿದೆ. ಅಕ್ಟೋಬರ್ 21ರಿಂದಲೇ ಇ ಬಾಡಿಗೆ ಸೇವೆ ಆರಂಭವಾಗಿದೆ.

2021ರ ಜವರಿ 18ರಂದು ವಿವಾಹವಾಗಲಿರುವ ಗಣೇಶ್ ಮತ್ತು ಲಕ್ಷ್ಮೀ ಡಬಲ್ ಡೆಕ್ಕರ್ ಬಸ್‌ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ಮೊದಲ ಜೋಡಿಯಾಗಿದ್ದಾರೆ. ಇದಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಬಸ್ ಬಾಡಿಗೆಗೆ ನೀಡಲು ಪ್ರೋತ್ಸಾಹ ನೀಡಿದೆ.

 KSRTC Double Decker Buses For Rent To Photoshoots

"ಅಕ್ಟೋಬರ್ 21ರಂದು ಮೊದಲ ಫೋಟೋ ಶೂಟ್ ನಡೆಯಿತು. ಬಳಿಕ ಜನರು ಬಸ್‌ ಬಾಡಿಗೆ ವಿಚಾರವಾಗಿ ಕರೆ ಮಾಡುತ್ತಿದ್ದಾರೆ" ಎಂದು ಕೆಎಸ್ಆರ್‌ಟಿಸಿ ಹೆಚ್ಚುವರಿ ನಿರ್ದೇಶಕ ಜಿ. ಅನಿಲ್ ಕುಮಾರ್ ಹೇಳಿದ್ದಾರೆ.

ಪ್ರಸ್ತುತ ರಾಜ್ಯ ರಾಜಧಾನಿಯಲ್ಲಿ 8 ಗಂಟೆಗಳ ಕಾಲ, 50 ಕಿ. ಮೀ. ಸಂಚಾರ ನಡೆಸಿ ಫೋಟೋ ಶೂಟ್ ನಡೆಸಲು ಬಸ್ ಬಾಡಿಗೆಗೆ ಲಭ್ಯವಿದೆ. ದರ 4 ಸಾವಿರ ರೂ. ಎಂದು ನಿಗದಿ ಮಾಡಲಾಗಿದೆ.

ಫೋಟೋ ಶೂಟ್‌ಗಾಗಿ ಬಸ್‌ನಲ್ಲಿ ಕೆಲವು ಬದಲಾವಣೆ ಮಾಡಲು ಒಪ್ಪಿಗೆ ನೀಡಲಾಗಿದೆ. ಡಿಸೆಂಬರ್‌ನಲ್ಲಿ ಬಸ್ ಬುಕ್ ಮಾಡಿದವರಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಫೋಟೋ ಶೂಟ್ ನಡೆಸಲು ಬಸ್ ಬುಕ್ ಮಾಡಲು ಆರ್ಡರ್ ತರುವ ಏಜೆಂಟರಿಗೆ ಕಮೀಷನ್ ಕೊಡಲಾಗುತ್ತಿದೆ.

ಪ್ರೀ ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಮಾತ್ರವಲ್ಲ ಹುಟ್ಟು ಹಬ್ಬದ ಪಾರ್ಟಿಗಳಿಗೆ ಬಸ್ ಬಾಡಿಗೆ ನೀಡಲು ಸಹ ತೀರ್ಮಾನಿಸಲಾಗಿದೆ. ಜನರಿಂದ ಬರುವ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+