• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಣ ವಂಚನೆ ಆರೋಪ; ಕೊಚ್ಚಿ ಪೊಲೀಸರಿಂದ ಸನ್ನಿ ಲಿಯೋನ್ ವಿಚಾರಣೆ

|

ಕೊಚ್ಚಿ, ಫೆಬ್ರುವರಿ 06: ಲಕ್ಷಾಂತರ ಹಣ ಪಡೆದುಕೊಂಡು ಕಾರ್ಯಕ್ರಮಕ್ಕೆ ಬರದೇ ವಂಚಿಸಿದ ಆರೋಪದಲ್ಲಿ ಕೇರಳದ ಕೊಚ್ಚಿ ಅಪರಾಧ ವಿಭಾಗದ ಪೊಲೀಸರು ನಟಿ ಸನ್ನಿ ಲಿಯೋನ್ ಅವರನ್ನು ವಿಚಾರಣೆ ನಡೆಸಿರುವುದಾಗಿ ತಿಳಿದುಬಂದಿದೆ.

ಸಿನಿಮಾ ಚಿತ್ರೀಕರಣಕ್ಕೆಂದು ಕೇರಳಕ್ಕೆ ಬಂದಿದ್ದ ಸನ್ನಿ ಲಿಯೋನ್ ಅವರನ್ನು ಶುಕ್ರವಾರ ರಾತ್ರಿ ಪೊಲೀಸರು ವಿಚಾರಣೆ ನಡೆಸಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಕಾಲೇಜಿನ ಮೆರಿಟ್ ಪಟ್ಟಿಯಲ್ಲಿ ಸನ್ನಿ ಲಿಯೋನ್ ಟಾಪರ್!

"ನಾವು ಆಯೋಜಿಸಿದ್ದ ಎರಡು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಬರುವುದಾಗಿ ಭರವಸೆ ನೀಡಿ ಸನ್ನಿ ಲಿಯೋನ್ ಅವರು 29 ಲಕ್ಷ ರೂಪಾಯಿಯನ್ನು ಪಡೆದಿದ್ದರು. ಆದರೆ ಕಾರ್ಯಕ್ರಮಕ್ಕೆ ಬರದೇ ವಂಚನೆ ಮಾಡಿದ್ದಾರೆ" ಎಂದು ಪೆರುಂಬವೋರ್ ನ ಆರ್. ಶಿಯಾಸ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಪರಾಧ ವಿಭಾಗದ ತಂಡ ಸನ್ನಿ ಲಿಯೋನ್ ಅವರ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ತಿರುವನಂತಪುರಂನ ಪೂವಾರ್ ಎಂಬಲ್ಲಿ ಹೋಗಿ ಹೇಳಿಕೆ ಪಡೆದಿರುವುದಾಗಿ ತಿಳಿಸಿದೆ.

"ಕೊರೊನಾ ಕಾರಣದಿಂದಾಗಿ ಐದು ಬಾರಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಸರಿಯಾದ ಸಮಯಕ್ಕೆ ಕಾರ್ಯಕ್ರಮ ನಡೆದಿಲ್ಲ. ಹೀಗಾಗಿಯೇ ನಾನು ಹೋಗಲು ಸಾಧ್ಯವಾಗಿಲ್ಲ" ಎಂದು ಅಪರಾಧ ವಿಭಾಗದ ಪೊಲೀಸರಿಗೆ ಸನ್ನಿ ಲಿಯೋನ್ ತಿಳಿಸಿದ್ದಾರೆ.

ಆದರೆ ಸರಿಯಾದ ದಿನಾಂಕ ನಿಗದಿ ಮಾಡಿದರೆ ಖಂಡಿತ ಬರುತ್ತೇನೆ ಎಂದು ಅವರು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.

English summary
Kerala kochi crime branch police questioned sunny leone in a complaint related to financial fraud,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X