ತಂದೆಯ ಕೊಂದವರ ಕುಟುಂಬಕ್ಕೆ ಆಸ್ತಿ ಬರೆದುಕೊಟ್ಟ ಕೇರಳ ಮಹಿಳೆ: ಕಾರಣವೇನು?

ತಿರುವನಂತಪುರಂ, ಫೆಬ್ರವರಿ 15: ಮ್ಯಾಥ್ಯೂ ಮೃತಪಟ್ಟು ಸಾಕಷ್ಟು ವರ್ಷಗಳು ಕಳೆದಿವೆ. ಅವರು ಕಾಣೆಯಾದ ದಿನದಿಂದ ಲೆಕ್ಕಹಿಡಿಯುವುದಾದರೆ 12 ವರ್ಷಗಳು.

ಆದರೆ ಕಳೆದ ಮೂರು ವರ್ಷಗಳ ಹಿಂದೆ ಸರ್ಕಲ್ ಇನ್‌ಸ್ಪೆಕ್ಟರ್ ಎಎಸ್ ನವಾಸ್ ಅವರಿಗೆ ಕೇರಳದ ಥಲಯೋಳಪರಂಬುವಿನಲ್ಲಿರುವ ಕಟ್ಟಡವೊಂದರ ಬಳಿ ಮೃತದೇಹ ಒಂದು ದೊರೆತಿದ್ದು, ಕೊನೆಗೆ ಅದು ಮ್ಯಾಥ್ಯೂ ಅವರ ದೇಹವೇ ಎಂದು ದೃಢಪಟ್ಟಿತ್ತು.

ನೈಸಿ ಬೆಂಗಳೂರಿನಲ್ಲಿ ಕೆಲಸ ಪಡೆದರು ಮತ್ತು ತಾಯಿ ಮತ್ತು ಇಬ್ಬರು ಕಿರಿಯ ಸಹೋದರರನ್ನು ನೋಡಿಕೊಳ್ಳಲು ಪ್ರಾರಂಭಿಸಿದರು.

ತನ್ನ ತಂದೆಯನ್ನು ಕೊಂದ ವ್ಯಕ್ತಿಯ ಕುಟುಂಬಕ್ಕೆ ಸಹಾಯ ಮಾಡಲು ಅವಳು ನಿರ್ಧರಿಸಿದ್ದು ಇನ್ನೂ ಆಶ್ಚರ್ಯಕರವಾಗಿದೆ.

ಅನೀಶ್ ಮಾಡಿದ್ದಕ್ಕಾಗಿ ಕುಟುಂಬಕ್ಕೆ ಶಿಕ್ಷೆಯಾಗಬಾರದು. ನಾನು ಅವರ ಪರಿಸ್ಥಿತಿಯನ್ನು ನೋಡಿದೆ ತುಂಬಾ ಕೆಟ್ಟದಾಗಿತ್ತು. ಅವರ ಆಸ್ತಿ ದಾಖಲೆಗಳನ್ನು ಹಿಂದಿರುಗಿಸಲು ನಿರ್ಧರಿಸಿದೆ ಎಂದು ನೈಸಿ ಹೇಳುತ್ತಾರೆ.

ಮ್ಯಾಥ್ಯೂ ಅವರ ಮಗಳ ಈ ಕಾರ್ಯಕ್ಕೆ ಶ್ಲಾಘನೆ

ಮ್ಯಾಥ್ಯೂ ಅವರ ಮಗಳ ಈ ಕಾರ್ಯಕ್ಕೆ ಶ್ಲಾಘನೆ

ಆದರೆ ಶುಕ್ರವಾರ ಮ್ಯಾಥ್ಯೂ ಅವರ ಮಗಳು ನೈಸಿ ಅವರು ಮಾಡಿರುವ ಈ ಕಾರ್ಯದಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ತಂದೆಯನ್ನು ಕೊಂದಿದ್ದ ವಾಸು ಅವರ ಕುಟುಂಬಕ್ಕೆ ಐದು ಗುಂಟೆ ಜಮೀನು ಹಾಗೂ ಮನೆಯನ್ನು ನೀಡಿದ್ದಾರೆ.

ತಂದೆಕೊಂದವರಿಗೆ ಜಮೀನು ಕೊಟ್ಟಿದ್ದು ಯಾಕೆ?

ತಂದೆಕೊಂದವರಿಗೆ ಜಮೀನು ಕೊಟ್ಟಿದ್ದು ಯಾಕೆ?

ತಂದೆಕೊಂದ ಕುಟುಂಬಕ್ಕೆ ಯಾಕೆ ಜಮೀನು ಕೊಟ್ಟಿರಬಹುದು ಎನ್ನುವ ಕುತೂಹಲ ಎಲ್ಲರಿಗೆ ಇರುವುದು ಸಹಜ. ಅದಕ್ಕೆ ಕಾರಣವೂ ಇದೆ. ಆ ಜಮೀನು ಹಾಗೂ ಮನೆ ಆರೋಪಿ ಅನಿಶ್ ಕುಟುಂಬಕ್ಕೆ ಸೇರಿದ್ದ ಕಾರಣ ನೈಸಿ ಜಮೀನನ್ನು ಹಿಂದಿರುಗಿಸಿದ್ದಾರೆ.

ಮ್ಯಾಥ್ಯೂ ಕೊಲೆಗೆ ಕಾರಣವೇನು?

ಮ್ಯಾಥ್ಯೂ ಕೊಲೆಗೆ ಕಾರಣವೇನು?

ಮ್ಯಾಥ್ಯೂ ಹಾಗೂ ಆರೋಪಿ ಅನಿಶ್ ತಂದೆ ವಾಸು ಮೊದಲು ಸ್ನೇಹಿತರಾಗಿದ್ದರು. ಅನಿಶ್‌ಆರ್ಥಿಕವಾಗಿ ದುರ್ಬಲರಾಗಿದ್ದರು. ಆಗ ಐದು ಗುಂಟೆ ಜಮೀನು ಹಾಗೂ ಮನೆಯನ್ನು ಕೇರಳ ಸ್ಟೇಟ್ ಫಿನಾನ್ಶಿಯಲ್ ಎಂಟರ್‌ಪ್ರೈಸಸ್ ಗೆ ನೀಡಿ ಸಾಲ ಪಡೆದಿದ್ದರು. ಮ್ಯಾಥ್ಯೂ ಕೂಡ ಇದರಲ್ಲಿ ಭಾಗಿಯಾಗಿದ್ದರು. ಬಳಿಕ ಅನಿಶ್ ಹಾಗೂ ಮ್ಯಾಥ್ಯೂ ನಡುವೆ ಸಂಬಂಧ ಹಳಸಿ ಹೋಗಿತ್ತು. ಒಂದು ದಿನ ಮ್ಯಾಥ್ಯೂವನ್ನು ಪಾರ್ಟಿಗೆಂದು ಅನಿಶ್ ಕರೆದಿದ್ದ, ಮರುದಿನ ಬೆಳಗ್ಗೆಯಿಂದ ಮ್ಯಾಥ್ಯೂ ನಾಪತ್ತೆಯಾಗಿದ್ದರು. 2008ರಲ್ಲಿ ಈ ಘಟನೆ ನಡೆದಿದ್ದು, 2013-2014ರಲ್ಲಿ ಪ್ರಕರಣ ಅಂತ್ಯಕಂಡಿತ್ತು.

2016ರಲ್ಲಿ ಮತ್ತೆ ಕೇಸ್ ರೀ ಓಪನ್

2016ರಲ್ಲಿ ಮತ್ತೆ ಕೇಸ್ ರೀ ಓಪನ್

ನವಾಸ್ ವೈಕಾಮ್‌ನ ಸಿಐ ಆಗಿ ನೇಮಕಗೊಂಡ ಬಳಿಕ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡರು. ಅನಿಶ್ ಹಿಡಿದು ವಿಚಾರಣೆ ಮಾಡಿದಾಗ ಮ್ಯಾಥ್ಯೂ ದೇಹವನ್ನು ಸುಟ್ಟಿದ್ದಾಗಿ ತಿಳಿಸಿದ್ದ. ಬಳಿಕ ಮೂರ್ನಾಲ್ಕುದಿನಗಳ ಕಾಲ ಹುಡುಕಿದರೂ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ನಾಲ್ಕನೇ ದಿನ ಅವಶೇಶಗಳು ದೊರೆತವು. ದೃಶ್ಯಂ ಸಿನಿಮಾದ ರೀತಿಯಲ್ಲಿ ಪ್ರಕರಣ ಅಂತ್ಯ ಕಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+