ಕೇರಳದಲ್ಲಿ ಮೊದಲ ಓಮಿಕ್ರಾನ್‌ ಪ್ರಕರಣ ದಾಖಲು: ಭಾರತದ ಸಂಖ್ಯೆ 38 ಕ್ಕೆ ಏರಿಕೆ

ತಿರುವನಂತಪುರಂ, ಡಿಸೆಂಬರ್‌ 12: ಕೇರಳಕ್ಕೆ ಯಕೆಯಿಂದ ಬಂದ ವ್ಯಕ್ತಿಯಲ್ಲಿ ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರ ಓಮಿಕ್ರಾನ್‌ ಕಾಣಿಸಿಕೊಂಡಿದೆ. ಇದು ಕೇರಳದಲ್ಲಿ ಕಾಣಿಸಿಕೊಂಡ ಮೊದಲ ಓಮಿಕ್ರಾನ್‌ ಸೋಂಕು ಪ್ರಕರಣ ಆಗಿದೆ.

ಭಾನುವಾರ ಎರ್ನಾಂಕುಲಂನಲ್ಲಿ ವ್ಯಕ್ತಿಯಲ್ಲಿ ಕೋವಿಡ್‌ ಹೊಸ ರೂಪಾಂತರ ಕಾಣಿಸಿಕೊಂಡಿದೆ. ಆತ ಡಿಸೆಂಬರ್ 6 ರಂದು ಅಬುಧಾಬಿಯಲ್ಲಿ ಇದ್ದು ಬಳಿಕ ಯುಕೆಯಿಂದ ಕೊಚ್ಚಿಗೆ ಬಂದಿದ್ದರು. ಡಿಸೆಂಬರ್ 8 ರಂದು ಪಾಸಿಟಿವ್‌ ಬಂದಿದ್ದು, ಬಳಿಕ ಜಿನೋಮ್ ಸಿಕ್ವೆಂನ್ಸಿ‌ಗ್‌ನಲ್ಲಿ ಓಮಿಕ್ರಾನ್‌ ಕಾಣಿಸಿಕೊಂಡಿದೆ.

ಆತನ ಪತ್ನಿ ಹಾಗೂ ತಾಯಿಗೂ ಕೂಡಾ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ. ಅವರನ್ನು ಐಸೋಲೇಶನ್‌ನಲ್ಲಿ ಇರಿಸಲಾಗಿದೆ ಎಂದು ಆರೋ‌ಗ್ಯ ಸಚಿವ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ. "ಆರೋಗ್ಯ ಪರಿಸ್ಥಿತಿಯು ಸ್ಥಿರವಾಗಿದ್ದು, ಎಲ್ಲಾ ಸಂಪರ್ಕ ಮೂಲಗಳನ್ನು ಪತ್ತೆ ಹಚ್ಚಲಾಗುತ್ತಿದೆ," ಎಂದು ಹೇಳಿದರು. "ಆತನ ಸಮೀಪದಲ್ಲೇ ಕೂತಿದ್ದವರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಎಲ್ಲಾ 149 ಪ್ರಯಾಣಿಕರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ," ಎಂದು ಕೂಡಾ ಹೇಳಿದ್ದಾರೆ.

Kerala Reports First Case of Omicron, Indias Tally Rises to 38

ಭಾರತದಲ್ಲಿ ಇಂದು ಚಂಡೀಗಢ, ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಕೇರಳದಲ್ಲಿ ಓಮಿಕ್ರಾನ್‌ ಪ್ರಕರಣಗಳು ಕಾಣಿಸಿಕೊಂಡಿದೆ. ಈ ಪೈಕಿ ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕೇರಳದಲ್ಲಿ ಮೊದಲ ಓಮಿಕ್ರಾನ್‌ ಪ್ರಕರಣ ಇದಾಗಿದೆ. ದೇಶದಲ್ಲಿ ಒಟ್ಟು ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆಯು 38 ಕ್ಕೆ ಏರಿಕೆ ಆಗಿದೆ.

ಕೇರಳ, ಆಂಧ್ರಪ್ರದೇಶ, ಚಂಡೀಗಢದಲ್ಲಿ ಮೊದಲ ಓಮಿಕ್ರಾನ್‌ ಪ್ರಕರಣ

ಕೇರಳದ ಎರ್ನಾಕುಲಂನಲ್ಲಿ ಮೊದಲ ಓಮಿಕ್ರಾನ್‌ ಪ್ರಕರಣ ಕಾಣಿಸಿಕೊಂಡಿದೆ. ಅಬುಧಾಬಿಯಿಂದ ಯುಕೆಗೆ ಹೋಗಿ ಬಂದ ವ್ಯಕ್ತಿಯಲ್ಲಿ ಈ ಓಮಿಕ್ರಾನ್‌ ಕಾಣಿಸಿಕೊಂಡಿದೆ. ಆಂಧ್ರ ಪ್ರದೇಶದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ದಾಖಲು ಆಗಿದೆ ಎಂದು ಆಂಧ್ರ ಪ್ರದೇಶ ಸರ್ಕಾರವು ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. 34 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್‌ ಸೋಂಕು ಕಾಣಿಸಿಕೊಂಡಿದೆ. ಈ ವ್ಯಕ್ತಿಯು ಮುಂಬೈನ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಆತನ ಕೋವಿಡ್‌ ವರದಿಯು ನೆಗೆಟಿ‌ವ್‌ ಆಗಿದ್ದವು. ಈ ನಿಟ್ಟಿನಲ್ಲಿ ಈ ವ್ಯಕ್ತಿಗೆ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. 27 ರಂದು ಆತ ವಿಶಾಖಪಟ್ಟಣಕ್ಕೆ ತೆರಳಿದ್ದಾನೆ. ಆ ಬಳಿಕ ಆತನ ಕೋವಿಡ್‌ ವರದಿ ಪಾಸಿಟಿವ್‌ ಬಂದಿದೆ. ಜಿನೋಮ್‌ ಸಿಕ್ವೆಂನ್ಸಿಗ್‌ಗೆ ಕಳುಹಿಸಿದಾಗ ಓಮಿಕ್ರಾನ್‌ ಇರುವುದು ದೃಢಪಟ್ಟಿದೆ. ಆತನಲ್ಲಿ ಯಾವುದೇ ಕೋವಿಡ್‌ ಲಕ್ಷಣಗಳು ಇಲ್ಲ. 11 ರಂದು ಮತ್ತೊಮ್ಮೆ ಕೋವಿಡ್‌ ಪರೀಕ್ಷೆ ಮಾಡಿಸಲಾಗಿದ್ದು, ವರದಿ ನೆಗೆಟಿವ್‌ ಆಗಿದೆ. ಆಂಧ್ರ ಪ್ರದೇಶದಲ್ಲಿ ಈ ಒಂದು ಪ್ರಕರಣ ಹೊರತುಪಡಿಸಿ ಬೇರೆ ಯಾವುದೇ ಓಮಿಕ್ರಾನ್‌ ಪ್ರಕರಣ ವರದಿ ಆಗಿಲ್ಲ. ಇದು ಆಂಧ್ರ ಪ್ರದೇಶದ ಮೊದಲ ಓಮಿಕ್ರಾನ್‌ ಪ್ರಕರಣವಾಗಿದೆ. ಈಗಾಗಲೇ 15 ಮಂದಿಯ ಕೋವಿಡ್‌ ವರದಿ ಪಾಸಿಟಿವ್‌ ಬಂದಿದ್ದು, ಈ ಹಿನ್ನೆಲೆ ಜಿನೋಮ್‌ ಸಿಕ್ವೆಂನ್ಸಿಂಗ್‌ಗೆ ಕಳುಹಿಸಲಾಗಿದೆ. ಪಂಜಾಬ್‌ನ ಚಂಡೀಗಢದಲ್ಲಿಯೂ ಮೊದಲ ಓಮಿಕ್ರಾನ್‌ ಪ್ರಕರಣ ದಾಖಲಾಗಿದೆ. ಚಂಡೀಗಢದಲ್ಲಿ ತನ್ನ ಸಂಬಂಧಿಕರನ್ನು ಭೇಟಿ ಆಗಲು ಇಟಲಿಯಿಂದ ಬಂದ 20 ವರ್ಷದ ಯುವಕನಲ್ಲಿ ಓಮಿಕ್ರಾನ್‌ ದೃಢಪಟ್ಟಿದೆ. ನವೆಂಬರ್‌ 22 ರಂದು ಇಟಲಿಯಿಂದ ಬಂದ ಬಳಿಕ, ಆತ ಹೋಮ್‌ ಕ್ವಾರಂಟೈನ್‌ನಲ್ಲಿ ಇದ್ದ, ಬಳಿಕ ಡಿಸೆಂಬರ್‌ 1 ರಂದು ಕೋವಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದೆ. ಜಿನೋಮ್‌ ಸಿಕ್ವೆಂನ್ಸಿಂಗ್‌ನಲ್ಲಿ ಓಮಿಕ್ರಾನ್‌ ದೃಢಪಟ್ಟಿದೆ. ಈತನಲ್ಲಿ ಯಾವುದೇ ಕೋವಿಡ್‌ ಲಕ್ಷಣಗಳು ಕಂಡು ಬಂದಿಲ್ಲ. ಹಾಗೆಯೇ ಸಂಪೂರ್ಣವಾಗಿ ಕೋವಿಡ್‌ ಲಸಿಕೆಯನ್ನು ಪಡೆದಿಲ್ಲ. ಪ್ರಸ್ತುತ ಆತ ಇನ್ಸಿಟ್ಯೂಟಿಷನಲ್‌ ಕ್ವಾರಂಟೈನ್‌ನಲ್ಲಿ ಇದ್ದಾನೆ. ಆತನ ಏಳು ಮಂದಿ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡಲಾಗಿದೆ. ಎಲ್ಲರಿಗೂ ಕೋವಿಡ್‌ ನೆಗೆಟಿವ್‌ ಬಂದಿದೆ. ಇಂದು ಮತ್ತೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಭಾರತದಲ್ಲಿ ಓಮಿಕ್ರಾನ್‌ ಪ್ರಕರಣ

ದೇಶದಲ್ಲಿ ಈವರೆಗೆ ದೇಶದಲ್ಲಿ ದೆಹಲಿ, ರಾಜಸ್ಥಾನ, ಕರ್ನಾಟಕ, ಗುಜರಾತ್‌, ಮಹಾರಾಷ್ಟ್ರ, ಚಂಡೀಗಢ, ಕೇರಳ, ಆಂಧ್ರಪ್ರದೇಶದಲ್ಲಿ ಓಮಿಕ್ರಾನ್‌ ಪ್ರಕರಣ ದಾಖಲಾಗಿದೆ.ಮಹಾರಾಷ್ಟ್ರದಲ್ಲಿ 18, ರಾಜಸ್ಥಾನದಲ್ಲಿ ಒಂಬತ್ತು, ಗುಜರಾತ್‌ನಲ್ಲಿ ಮೂರು, ಕರ್ನಾಟಕದಲ್ಲಿ ಮೂರು ಮತ್ತು ದೆಹಲಿಯಲ್ಲಿ ಎರಡು ಪ್ರಕರಣ ದಾಖಲಾಗಿದೆ. ಈಗ ಆಂಧ್ರ ಪ್ರದೇಶದಲ್ಲಿ ಒಂದು, ಕೇರಳದಲ್ಲಿ ಒಂದು ಹಾಗೂ ಚಂಡೀಗಢದಲ್ಲಿ ಒಂದು ಓಮಿಕ್ರಾನ್‌ ಪ್ರಕರಣ ದಾಖಲು ಆಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್‌ ಪ್ರಕರಣ ಸಂಖ್ಯೆಯು ಸದ್ಯ 38 ಕ್ಕೆ ಏರಿಕೆ ಆಗಿದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+