• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳದಲ್ಲಿ ಹೊಸದಾಗಿ 91 ಜನರಿಗೆ ಕೋವಿಡ್ ಸೋಂಕು ದೃಢ

|
Google Oneindia Kannada News

ತಿರುವನಂತಪುರಂ, ಜೂನ್ 8: ಕೇರಳದಲ್ಲಿ ಇಂದು 91 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ಟೀಚರ್ ತಿಳಿಸಿದರು. ಈ ಮೂಲಕ ರಾಜ್ಯದಲ್ಲಿ 2006ಕ್ಕೆ ಏರಿಕೆಯಾಗಿದೆ. ಇದುವರೆಗೂ 814 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, 1174 ಪ್ರಕರಣ ಸಕ್ರಿಯವಾಗಿದೆ.

ತ್ರಿಶೂರ್ ಜಿಲ್ಲೆಯಿಂದ 27 ಕೇಸ್, ಮಲಪ್ಪುರಂ ಜಿಲ್ಲೆಯಲ್ಲಿ 14 ಪ್ರಕರಣ, ಕೋಳಿಕೋಡ್ ಜಿಲ್ಲೆಯಲ್ಲಿ 13 ಕೇಸ್, ಕಾಸರ್‌ಗೋಡ್ ಜಿಲ್ಲೆಯಲ್ಲಿ 8 ಪ್ರಕರಣ ಹಾಗೂ ಕೊಲ್ಲಂ, ಆಲಪ್ಪುಳ ಜಿಲ್ಲೆಗಳಿಂದ ತಲಾ 5 ಸೇರಿದಂತೆ 91 ಕೇಸ್ ದಾಖಲಾಗಿದೆ.

ಕೊರೊನಾ ಚಕ್ರವ್ಯೂಹದಲ್ಲಿ ಸಿಲುಕಿರುವ ಮುಂಬೈಗೆ ಕೇರಳ ಸಹಾಯಹಸ್ತಕೊರೊನಾ ಚಕ್ರವ್ಯೂಹದಲ್ಲಿ ಸಿಲುಕಿರುವ ಮುಂಬೈಗೆ ಕೇರಳ ಸಹಾಯಹಸ್ತ

ಈ ಪೈಕಿ 73 ಮಂದಿ ವಿದೇಶಗಳಿಂದ ಮತ್ತು 15 ಮಂದಿ ಇತರ ರಾಜ್ಯದಿಂದ ಬಂದವರು. ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಯಲ್ಲಿದ್ದ ದಿನಿ ಚಾಕೊ (41) ಇಂದು ನಿಧನರಾದರು.

ವಿಮಾನ ನಿಲ್ದಾಣದ ಮೂಲಕ 49,065 ಜನರು, ಸೀಪೋರ್ಟ್ ಮೂಲಕ 1621 ಜನರು, ಚೆಕ್ ಪೋಸ್ಟ್ ಮೂಲಕ 1,23,029 ಜನರು ಮತ್ತು ರೈಲು ಮೂಲಕ 19,648 ಜನರು ಸೇರಿದಂತೆ ಒಟ್ಟು 1,93,363 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ 3827 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇಲ್ಲಿಯವರೆಗೆ, 85,676 ವ್ಯಕ್ತಿಗಳ ಮಾದರಿಗಳನ್ನು (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಪರಿಶೀಲನೆಗಾಗಿ ಕಳುಹಿಸಲಾಗಿದೆ.

ಇಂದು ಹೊಸದಾಗಿ 6 ಹಾಟ್ ಸ್ಪಾಟ್‌ ಸೇರಿದೆ. ಪಾಲಕ್ಕಾಡ್ ಜಿಲ್ಲೆಯ ಶೋರ್ನೂರ್, ಮಲಪ್ಪುರಂ ಜಿಲ್ಲೆಯ ಮುರುಕನಾಡು, ಕುರುವಾ, ಕಲ್ಪಕಂಚೇರಿ, ಎಡಪ್ಪಲ್ ಮತ್ತು ವಟ್ಟಂಕುಲಂ ಮುಂತಾದುವು ಹೊಸ ಹಾಟ್ ಸ್ಪಾಟ್‌ಗಳಾಗಿವೆ. ಇದರೊಂದಿಗೆ ಪ್ರಸ್ತುತ, ರಾಜ್ಯದಲ್ಲಿ ಒಟ್ಟು 150 ಹಾಟ್ ಸ್ಪಾಟ್‌ಗಳಿವೆ.

English summary
COVID 19 tally reaches 2,000 mark in Kerala with 91 new cases, active cases 1,174.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X