ವೈರಲ್ ವಿಡಿಯೋ : ಡ್ರೋಣ್ ನೋಡುತ್ತಿದ್ದಂತೆ ಎದ್ದು ಬಿದ್ದು ಓಡಿದ ಜನ
ತಿರುವನಂತಪುರಂ, ಏಪ್ರಿಲ್ 08 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆದರೆ, ಜನರು ನಿಯಮ ಉಲ್ಲಂಘನೆ ಮಾಡಿ ಹೊರಗೆ ತಿರುಗಾಡುತ್ತಾರೆ. ಇದನ್ನು ತಡೆಯಲು ಪೊಲೀಸರು ಹಲವು ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.
ಕೇರಳ ಪೊಲೀಸರು ಹೊರಗೆ ತಿರುಗಾಡುವ ಜನರನ್ನು ಪತ್ತೆ ಹಚ್ಚಲು ಡ್ರೋಣ್ ಕ್ಯಾಮರಾ ಮೊರೆ ಹೋಗಿದ್ದಾರೆ. ಡ್ರೋಣ್ ಮೂಲಕ ಯಾರು, ಎಲ್ಲಿ ಸುಮ್ಮನೆ ಸುತ್ತಾಡುತ್ತಿದ್ದಾರೆ? ಎಂಬ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ಹೀಗೆ ಕಾರ್ಯಾಚೆಣೆ ಕೈಗೊಂಡಿರುವ ಪೊಲೀಸರು ಟ್ವೀಟರ್‌ನಲ್ಲಿ ಹಾಕಿರುವ ವಿಡಿಯೋಯೊಂದು ವೈರಲ್ ಆಗಿದೆ. ಡ್ರೋಣ್ ನೋಡುತ್ತಿದ್ದಂತೆ ಜನರು ಎದ್ದು ಬಿದ್ದು ಓಡಿ ಹೋಗಿದ್ದಾರೆ. ಡ್ರೋಣ್‌ನಿಂದ ಗುಂಡು ಹಾರಿಸಬಹುದು ಎಂಬಂತೆ ಓಡುತ್ತಿದ್ದಾರೆ.

ಕೇರಳ ಪೊಲೀಸರು ಜನರು ಓಡುವ ವಿಡಿಯೋಗೆ ಕ್ರಿಕೆಟ್ ಕಾಮೆಂಟರ್ ಟಚ್ ಕೊಟ್ಟು ಟ್ವಿಟರ್‌ನಲ್ಲಿ ಹಾಕಿದ್ದಾರೆ. ಈ ಟ್ವೀಟ್ ಈಗ ವೈರಲ್ ಆಗಿದೆ. 159.3 ಸಾವಿರ ಜನರು ಇದುವರೆಗೂ ವಿಡಿಯೋವನ್ನು ನೋಡಿದ್ದಾರೆ.
2.7 ಜನರು ರಿ ಟ್ವೀಟ್ ಮಾಡಿದ್ದು, 265 ಜನರು ಕಮೆಂಟ್ ಮಾಡಿದ್ದಾರೆ. 7.7 ಸಾವಿರ ಜನರು ಪೊಲೀಸರ ಕಾರ್ಯ ವೈಖರಿ ಮತ್ತು ವಿಡಿಯೋವನ್ನು ಮೆಚ್ಚಿದ್ದಾರೆ.
ಡ್ರೋಣ್ ನೋಡುತ್ತಿದ್ದಂತೆ ಹೊಲದಲ್ಲಿದ್ದ, ಸಮುದ್ರ ತೀರದಲ್ಲಿದ್ದ ಜನರು ಓಡಿದ್ದಾರೆ. ಡ್ರೋಣ್ ಕಣ್ಣಿನಿಂದ ತಪ್ಪಿಸಿಕೊಳ್ಳಲು ಜಾಗವನ್ನು ಹುಡುಕಿದ್ದಾರೆ. ಕೆಲವರು ಟವಲ್ ಮೂಲಕ ಮುಖ ಮುಚ್ಚಿಕೊಳ್ಳಲು ಪ್ರಯತ್ನ ನಡೆಸಿದರೆ, ಕೆಲವರು ಮರಗಳ ಅಡಿ ನಿಂತಿದ್ದಾರೆ.
ಸೋಮವಾರ ಕೇರಳ ಪೊಲೀಸರು ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡುವವರನ್ನು ಪತ್ತೆ ಹಚ್ಚಲು ಡ್ರೋಣ್ ಬಳಕೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಇದುವರೆಗೂ ಕೇರಳದಲ್ಲಿ 327 ಕೊರೊನಾ ಪ್ರಕರಣ ದಾಖಲಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ವೈರಲ್ ಆಗಿರುವ ವಿಡಿಯೋ
Drone sightings during lockdown... pic.twitter.com/kN3a4YCJ5D
— Kerala Police (@TheKeralaPolice) April 7, 2020












Click it and Unblock the Notifications