ಪಾಲಿಕೆ ಚುನಾವಣೆ: ಮತದಾರರ ಪಟ್ಟಿಯಲ್ಲಿ ಸ್ಟಾರ್ ನಟನ ಹೆಸರೇ ಇಲ್ಲ

ಕೊಚ್ಚಿ, ಡಿ. 11: ಕೇರಳದಲ್ಲೀಗ ಪಾಲಿಕೆ ಚುನಾವಣೆಗಳಿಗೆ ವಿವಿಧ ಹಂತದಲ್ಲಿ ಮತದಾನ ನಡೆಯುತ್ತಿವೆ. ಕೊಚ್ಚಿಯಲ್ಲಿ ಎರಡನೇ ಹಂತದ ಮತದಾನ ಗುರುವಾರ ಮುಕ್ತಾಯ ಕಂಡಿದ್ದು, ಶೇ 76ಕ್ಕೂ ಅಧಿಕ ಮತದಾನ ದಾಖಲಾಗಿದೆ. ಆದರೆ, ಕೊಚ್ಚಿ ಕಾರ್ಪೊರೇಷನ್ ಚುನಾವಣೆಯಲ್ಲಿ ಮತದಾನ ಮಾಡಲು ಸ್ಟಾರ್ ನಟರೊಬ್ಬರಿಗೆ ಸಾಧ್ಯವಾಗಿಲ್ಲ ಎಂಬ ಸುದ್ದಿ ಬಂದಿದೆ.

ಕೊರೊನಾವೈರಸ್ ಸಾಂಕ್ರಾಮಿಕದ ನಡುವೆ ಪಾಲಿಕೆ ಚುನಾವಣೆಯನ್ನು ಆಯೋಜಿಸಲಾಗಿದೆ. ಗುರುವಾರದಂದು ಕೊಟ್ಟಾಯಂ, ಎರ್ನಾಕುಲಂ, ತ್ರಿಶ್ಶೂರ್, ಪಾಲಕ್ಕಾಡ್ ಹಾಗೂ ವಯನಾಡು ಜಿಲ್ಲೆಗಳಲ್ಲಿ ಪಾಲಿಕೆ ಚುನಾವಣೆಗೆ ಮತದಾನ ನಡೆಸಲಾಯಿತು. ಒಟ್ಟಾರೆ, 2ನೇ ಹಂತದಲ್ಲಿ ಶೇ 76.38ರಷ್ಟು ಮತದಾನ ದಾಖಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ಈ ನಡುವೆ ಸೂಪರ್ ಸ್ಟಾರ್ ಮಮ್ಮೂಟಿ ಅವರಿಗೆ ಕೊಚ್ಚಿ ಕಾರ್ಪೊರೇಷನ್ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಾಗಿಲ್ಲ. ಕೊಚ್ಚಿಯ ಪನಂಪಿಲ್ಲಿ ನಗರದ ನಿವಾಸಿಯಾಗಿರುವ ಮಮ್ಮೂಟಿ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇನ್ನೂ ಅಪ್ಡೇಟ್ ಆಗಿರದ ಕಾರಣ ವೋಟರ್ಸ್ ಪಟ್ಟಿಯಲ್ಲಿ ಮಮ್ಮೂಟಿ ಹೆಸರು ನಾಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Kerala Local Body Polls: Actor Mammoty Goes Missing On Voter List

ಈ ಬಗ್ಗೆ ಬುಧವಾರವೇ ತಿಳಿದು ಬಂದಿದ್ದರಿಂದ ಮಮ್ಮೂಟಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಅಗತ್ಯ ದಾಖಲೆ ಒದಗಿಸಿದ್ದಾರೆ. ಆದರೆ, ಮತದಾನ ಸಾಧ್ಯವಾಗಿಲ್ಲ. ಇತ್ತೀಚೆಗೆ ಕಡವಂಥರ ಪ್ರದೇಶದಲ್ಲಿ ಹೊಸ ಮನೆಗೆ ಮಮ್ಮೂಟಿ ಶಿಫ್ಟ್ ಆಗಿದ್ದಾರೆ. ಹೀಗಾಗಿ ಪನಂಪಿಲ್ಲಿ ನಗರದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿಲ್ಲದಿರಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಎಷ್ಟೇ ಕಾರ್ಯನಿರತರಾದರೂ ಎಲ್ಲಾ ಚುನಾವಣೆಗಳಲ್ಲಿ ಮತದಾನ ಮಾಡುತ್ತಾ ಬಂದಿರುವ ನಟ ಮಮ್ಮೂಟಿ ಅವರಿಗೆ ತಾವು ವಾಸಿಸುವ ಪ್ರದೇಶದಲ್ಲೆ ಮತದಾನ ಮಾಡಲು ಸಾಧ್ಯವಾಗಿಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+