ಕೆಎಸ್ಆರ್‌ಟಿಸಿ ಬಸ್ ದರ ಏರಿಕೆ; ಮೇ 1ರಿಂದ ಹೊಸ ದರ ಜಾರಿ

ತಿರುವನಂತಪುರಂ, ಏಪ್ರಿಲ್ 13; ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಬಸ್ ಪ್ರಯಾಣ ದರ ಏರಿಕೆ ಮಾಡಿದೆ. ಮೇ 1 ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ರಾಜ್ಯ ಸರ್ಕಾರ ಬಸ್ ಮಾತ್ರವಲ್ಲ, ಆಟೋ, ಟ್ಯಾಕ್ಸಿಗಳ ದರಗಳನ್ನು ಸಹ ಏರಿಸಿದೆ.

ಕೇರಳದ ಸಾರಿಗೆ ಸಚಿವ ಆಂಟೋನಿ ರಾಜು ಬುಧವಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಮಾರ್ಚ್ 30ರಂದು ಏರಿಕೆ ಮಾಡಲಾದ ಬಸ್, ಆಟೋ, ಟ್ಯಾಕ್ಸಿ ದರಗಳು ಮೇ 1 ರಿಂದ ಜಾರಿಗೆ ಬರಲಿವೆ ಎಂದು ಹೇಳಿದ್ದಾರೆ.

ದರ ಏರಿಕೆ ಕುರಿತು ಅಧಿಕೃತ ಆದೇಶವನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ. ಬಸ್, ಆಟೋ, ಟ್ಯಾಕ್ಸಿ, ಮೂರು ಚಕ್ರದ ಬೈಸಿಕಲ್‌ಗಳ ಕನಿಷ್ಠ ಪ್ರಯಾಣ ದರವನ್ನು ಏರಿಕೆ ಮಾಡಲಾಗಿತ್ತು. ಇದು ಮೇ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

Kerala Govt Hikes Bus Fares Come To Effect From May 1

ವಿದ್ಯಾರ್ಥಿಗಳ ಟಿಕೆಟ್ ದರಗಳನ್ನು ಏರಿಕೆ ಮಾಡಬೇಕೆ? ಎಂದು ತೀರ್ಮಾನಿಸಲು ಸಮಿತಿ ರಚನೆ ಮಾಡಲಾಗುತ್ತದೆ. ಬಸ್‌ಗಳ ಕನಿಷ್ಠ ಪ್ರಯಾಣ ದರ 8 ರಿಂದ 10 ರೂ. ತನಕ ಏರಿಕೆಯಾಗಲಿದೆ ಎಂದು ಕೇರಳದ ಎಲ್‌ಡಿಎಫ್ ಸರ್ಕಾರ ಹೇಳಿದೆ.

ರಾಜ್ಯದ ಖಾಸಗಿ ಬಸ್‌ ಮಾಲೀಕರ ಸಂಘ ಕನಿಷ್ಠ ಪ್ರಯಾಣ ದರವನ್ನು ರೂ. 8 ರಿಂದ 12ರ ತನಕ ಏರಿಕೆ ಮಾಡಲು ಅವಕಾಶ ನೀಡಬೇಕು ಎಂದು ಬೇಡಿಕೆ ಇಟ್ಟಿತ್ತು. ವಿದ್ಯಾರ್ಥಿಗಳ ಟಿಕೆಟ್ ದರಗಳನ್ನು 6 ರೂ. ಏರಿಕೆಗೆ ಮನವಿ ಮಾಡಿತ್ತು. ಆದರೆ ವಿದ್ಯಾರ್ಥಿ ಟಿಕೆಟ್ ದರದ ವಿಚಾರದಲ್ಲಿ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿಲ್ಲ.

ಖಾಸಗಿ ಬಸ್ ಮಾಲೀಕರ ಸಂಘ ಪ್ರಯಾಣ ದರ ಏರಿಕೆ ಮಾಡಲು ಅನುಮತಿ ನೀಡಬೇಕು ಎಂದು ರಾಜ್ಯದಲ್ಲಿ ಪ್ರತಿಭಟನೆ ನಡೆಸಿತ್ತು. ಈಗ ಸರ್ಕಾರ ನಿಗದಿ ಮಾಡಿರುವ ಹೊಸ ದರಕ್ಕೆ ಸಹ ಮಾಲೀಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ದರದಲ್ಲಿ ಸಾರಿಗೆ ಸೇವೆ ಮುಂದುವರೆಸುವುದು ಕಷ್ಟ ಎಂದು ಸಹ ಹೇಳಿದ್ದಾರೆ.

ಆಟೋ ದರ ಎಷ್ಟು?; ಕೇರಳ ಸರ್ಕಾರ ಮಾರ್ಚ್ 30ರಂದು ಹೊರಡಿಸಿದ ಆದೇಶದಂತೆ ಆಟೋದಲ್ಲಿ 2 ಕಿ. ಮೀ. ಸಂಚಾರ ನಡೆಸಲು ಇದ್ದ ಕನಿಷ್ಟ ಪ್ರಯಾಣ ದರವನ್ನು 25 ರೂ. ನಿಂದ 30 ರೂ. ಗೆ ಏರಿಕೆ ಮಾಡಲಾಗಿದೆ. ಬಳಿಕ ಪ್ರತಿ ಕಿ. ಮೀ. ಗೆ ಈಗಿರುವ ದರವನ್ನು 12 ರಿಂದ 15 ರೂ. ಗೆ ಏರಿಸಲಾಗಿದೆ. ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಆಟೋ ಚಾಲಕರು ಸಹ ದರ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದರು.

auto

1500 ಸಿಸಿ ಗಿಂತ ಕಡಿಮೆ ಸಾಮರ್ಥ್ಯದ ಟ್ಯಾಕ್ಸಿಗಳಿಗೆ ಮೊದಲ 5 ಕಿ. ಮೀ.ಗಳಿಗೆ 200 ರೂ. ದರ ನಿಗದಿ ಮಾಡಲಾಗಿದೆ. ಈ ಹಿಂದಿನ ದರ 175 ರೂ. ಇತ್ತು. ಬಳಿಕ ಪ್ರತಿ ಕಿ. ಮೀ.ಗೆ 18 ರೂ. ಪಾವತಿ ಮಾಡಬೇಕಿದೆ.

1500 ಸಿಸಿ ಗಿಂತ ಹೆಚ್ಚಿನ ಸಾಮರ್ಥ್ಯದ ವಾಹನಗಳಿಗೆ ಮೊದಲ 5 ಕಿ. ಮೀ. ಗೆ 200 ರೂ. ಇದ್ದ ದರವನ್ನು 225 ರೂ.ಗೆ ಏರಿಕೆ ಮಾಡಲಾಗಿದೆ. ಬಳಿಕ ಪ್ರತಿ ಕಿ. ಮೀ.ಗೆ 20 ರೂ. ದರ ನಿಗದಿ ಮಾಡಲಾಗಿದೆ.

ಮೂರು ಚಕ್ರದ ಆಟೋಗಳಿಗೆ 30 ರೂ. ಇದ್ದ ಕನಿಷ್ಠ ಪ್ರಯಾಣ ದರವನ್ನು 35 ರೂ. ಗಳಿಗೆ ಏರಿಕೆ ಮಾಡಲಾಗಿದೆ. ಆದರೆ ವೈಟಿಂಗ್ ಚಾರ್ಜ್‌, ತಡರಾತ್ರಿಯಿಂದ ಮುಂಜಾನೆ ತನಕ ಚಾರ್ಜ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+