ತಿರುವನಂತಪುರಂ ಕಾರ್ಪೊರೇಷನ್ ಉಳಿಸಿಕೊಂಡ ಎಲ್‌ಡಿಎಫ್

ತಿರುವನಂತಪುರಂ, ಡಿ. 15: ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು, ತಿರುವನಂತಪುರಂ ಪಾಲಿಕೆಯನ್ನು ಎಲ್‌ಡಿಎಫ್ ಉಳಿಸಿಕೊಂಡಿದೆ.

ತಿರುವನಂತಪುರಂ ಕಾರ್ಪೊರೇಷನ್ ಚುನಾವಣೆಯ ಮತ ಎಣಿಕೆಯಲ್ಲಿ ಎಲ್ ಡಿಎಫ್ ಆರಂಭಿಕ ಹಿನ್ನಡೆ ಅನುಭವಿಸಿತ್ತು. ಜೊತೆಗೆ ತಿರುವನಂತಪುರಂ ಮೇಯರ್ ಕೆ ಶ್ರೀಕುಮಾರ್ (ಎಲ್ ಡಿ ಎಫ್) ಅವರಿಗೆ ಸೋಲುಂಟಾಗಿತ್ತು. ಆದರೆ, ಅಂತಿಮವಾಗಿ ಎಲ್ ಡಿ ಎಫ್ ಗೆಲುವು ದಾಖಲಿಸಿದೆ. ತಿರುವನಂತಪುರಂ ಪಾಲಿಕೆಯಲ್ಲಿ ಎಲ್‌ಡಿಎಫ್ 50 ಸ್ಥಾನ ಗಳಿಸಿದ್ದರೆ, ಎನ್ಡಿಎ 32 ಸ್ಥಾನಗಳಿವೆ.

ತಿರುವನಂತಪುರಂ ಮೇಯರ್ ಕೆ ಶ್ರೀಕುಮಾರ್ ಅವರನ್ನು ಬಿಜೆಪಿ ಅಭ್ಯರ್ಥಿ ಡಿಜಿ ಕುಮಾರನ್ ಸೋಲಿಸಿದ್ದಾರೆ. ಕಾರಿಕ್ಕಾಕೊಂ ವಾರ್ಡ್ ನಲ್ಲಿ ನಡೆದ ಬಿರುಸಿನ ಸ್ಪರ್ಧೆಯಲ್ಲಿ ಎನ್ಡಿಎ ಅಭ್ಯರ್ಥಿ ಕುಮಾರನ್ ಅವರು 116 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

Kerala Civic Polls results: LDF retains Thiruvananthapuram corporation

2015ರಲ್ಲಿ ಗಳಿಸಿದ್ದಕ್ಕಿಂತ ಕಡಿಮೆ ಸಂಖ್ಯೆಗೆ ಕುಸಿದಿದೆ. ಕಳೆದ ಬಾರಿ 34 ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ 30 ಸ್ಥಾನಗಳಲ್ಲಿ ಮುನ್ನಡೆ ಪಡೆದಿತ್ತು. ಕೊನೆಗೆ 32 ಸ್ಥಾನ ಗಳಿಸಿದೆ. ಹೈದರಾಬಾದ್ ಪಾಲಿಕೆ ಚುನಾವಣೆಯಿಂದ ಪ್ರೇರಿತರಾಗಿ ಈ ಪಾಲಿಕೆ ಗೆಲ್ಲಲು ಜಿಲ್ಲಾ ಬಿಜೆಪಿ ಅಧ್ಯಕ್ಷ ವಿವಿ ರಾಜೇಶ್ ರನ್ನು ಉಸ್ತುವಾರಿವಾಗಿ ನೇಮಿಸಲಾಗಿತ್ತು.

ಆದರೆ, ಎಲ್ ಡಿಎಫ್ 50 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಅಷ್ಟೇ ಸ್ಥಾನ ಗಳಿಸಿದೆ. ಯುಡಿಎಫ್ 9ರಲ್ಲಿ ಮುನ್ನಡೆ ಪಡೆದರೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.

ತಿರುವನಂತಪುರಂನಲ್ಲಿ ವರ್ಕಲ(33 ಸ್ಥಾನ), ಅಟ್ಟಿಂಗಳ್(31), ನೆಡುಮಂಗಾಡ್(39) ಹಾಗೂ ನೆಯಾಂಟಿಂಗರ(44) ಮುನ್ಸಿಪಾಲಿಟಿ ಸೇರಿ ಒಟ್ಟು 147 ಸ್ಥಾನಗಳಿವೆ.

ಸ್ಥಳೀಯ ಸಂಸ್ಥೆ ಚುನಾವಣೆ: 941 ಗ್ರಾಮ ಪಂಚಾಯಿತಿಯ 15,962ವಾರ್ಡ್, 152 ಬ್ಲಾಕ್ ಪಂಚಾಯಿತಿಯ 2080 ವಾರ್ಡು, 14 ಜಿಲ್ಲಾ ಪಂಚಾಯಿತಿಯ 331 ಡಿವಿಷನ್, 86 ಮುನ್ಸಿಪಾಲಿಟಿಯ 3078 ವಾರ್ಡು, 6 ಮುನ್ಸಿಪಲ್ ಕಾರ್ಪೊರೇಷನ್ ನ 414 ವಾರ್ಡುಗಳಿಗೆ ಡಿಸೆಂಬರ್ 8, 10 ಹಾಗೂ 14ರಂದು ಮತದಾನ ನಡೆಸಲಾಗಿದ್ದು, ಒಟ್ಟಾರೆ, 76% ಮತದಾನ ದಾಖಲಾಗಿದೆ. ಡಿಸೆಂಬರ್ 16ರಂದು ಫಲಿತಾಂಶ ಹೊರ ಬರಲಿದೆ.

ಮುಂಬರುವ ವಿಧಾನಸಭಾ ಚುನಾವಣೆ ಹಿತದೃಷ್ಟಿಯಿಂದ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಲ್ಲದೆ ಬಿಜೆಪಿ ನೇತೃತ್ವದ ಎನ್ಡಿಎ ಸೆಣಸಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+