98% ಅಂಕ ಪಡೆದಿದ್ದ ಅಜ್ಜಿ ಈಗ ಕಂಪ್ಯೂಟರ್ ಕಲಿಯುತ್ತಿದ್ದಾರೆ!
ತಿರುವನಂತಪುರ, ನವೆಂಬರ್ 09: ಕೆಲವು ದಿನಗಳ ಹಿಂದೆಯಷ್ಟೆ ಕೇರಳದ ಸಾಕ್ಷರತೆ ಪರೀಕ್ಷೆಯಲ್ಲಿ 98% ಅಂಕ ಪಡೆದಿದ್ದ 98 ರ ವೃದ್ಧೆ ಈಗ ಹೊಸ ಕಲಿಕೆಗೆ ಮುಂದಾಗಿದ್ದಾರೆ.
ಅಲಪ್ಪುಳದ 96 ವರ್ಷದ ವೃದ್ಧೆ ಕಾರ್ತಿಯಾನಿ ಅವರು 'ಅಕ್ಷರಲಕ್ಷಮ್' ಸಾಕ್ಷರತೆ ಯೋಜನೆಯಡಿ ಪರೀಕ್ಷೆ ಬರೆದು 98% ಪ್ರತಿಶತ ಅಂಕ ಗಳಿಸಿದ್ದರು, ಆ ನಂತರ ಅವರಿಗೆ ಕಂಪ್ಯೂಟರ್ ಕಲಿಯುವ ಆಸಕ್ತಿ ಮೂಡಿತ್ತು.
ಈಗ ವೃದ್ಧೆ ಕಾರ್ತಿಯಾನಿ ಅವರು ಕಂಪ್ಯೂಟರ್ ಕಲಿಕೆಯಲ್ಲಿ ನಿರತರಾಗಿದ್ದಾರೆ. ಅವರಿಗೆ ಕಾಲೂಜು ಉಪನ್ಯಾಸಕರೊಬ್ಬರು ಕಂಪ್ಯೂಟರ್ ಕಲಿಯಲು ನೆರವಾಗುತ್ತಿದ್ದಾರೆ.

ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಕೇರಳದಲ್ಲಿ ಅಸಾಕ್ಷರತೆ ನಿವಾರಿಸಲೆಂದು ಸರ್ಕಾರದ 'ಅಕ್ಷರಲಕ್ಷಮ್' ಸಾಖ್ಷರತೆ ಕಾರ್ಯಕ್ರಮದಲ್ಲಿ ವೃದ್ಧೆ ಕಾರ್ತಿಯಾನಿ 98% ಅಂಕ ಪಡೆದುಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಇದೀಗ ಕಂಪ್ಯೂಟರ್ ಕಲಿಯುತ್ತಿರುವ ಅವರು ಯುವಜನರಿಗೆ ಮಾದರಿಯಾಗಿದ್ದಾರೆ.












Click it and Unblock the Notifications