• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳದಲ್ಲಿ ಒಬ್ಬರಿಗೆ 2-3 ವೋಟರ್ ಐಡಿ; ಆಯೋಗ ಸಿಡಿಮಿಡಿ

|

ತಿರುವನಂತಪುರಂ, ಮಾರ್ಚ್ 23: ಕೇರಳ ವಿಧಾನಸಭಾ ಚುನಾವಣೆ ನಡುವೆ ರಾಜ್ಯದ ಮತದಾರರ ಪಟ್ಟಿಯಲ್ಲಿ ಲೋಪದೋಷಗಳು ಕಂಡು ಬಂದಿವೆ. ಹಲವು ಜಿಲ್ಲೆಗಳಲ್ಲಿ ಒಬ್ಬೊಬ್ಬರ ಹೆಸರಿನಲ್ಲಿ ಎರಡರಿಂದ ಮೂರು ಮತದಾರರ ಗುರುತಿನ ಚೀಟಿ ಹೊಂದಿರುವುದು ಗೊತ್ತಾಗಿದೆ.

ಕೇರಳದ ವಿರೋಧ ಪಕ್ಷದ ಮುಖಂಡ ರಮೇಶ್ ಚೆನ್ನಿತಲ ನೀಡಿದ ದೂರಿನ ಅನ್ವಯ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ವಿಷಯ ಬೆಳಕಿಗೆ ಬಂದಿದೆ. ಮತದಾರರ ಗುರುತಿನ ಚೀಟಿ ಅಕ್ರಮಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಚುನಾವಣಾ ಮುಖ್ಯಾಧಿಕಾರಿ ಟೀಕಾರಾಮ್ ಮೀನಾ ತಿಳಿಸಿದ್ದಾರೆ.

ಹೊಸ ಬಾಂಬ್ ಸಿಡಿಸಿದ ವಿರೋಧ ಪಕ್ಷದ ನಾಯಕ ರಮೇಶ್ !

ರಾಜ್ಯದಲ್ಲಿ ಸರಿ ಸುಮಾರು ನಾಲ್ಕು ಲಕ್ಷ ಜನರು ಎರಡು ವೋಟರ್ ಐಡಿಗಳನ್ನು ಹೊಂದಿದ್ದಾರೆ. ಇದು ಅಕ್ರಮ ಮತದಾನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ವಿರೋಧ ಪಕ್ಷದ ಮುಖಂಡ ರಮೇಶ್ ಚೆನ್ನಿತಲ ತಮ್ಮ ದೂರಿನಲ್ಲಿ ಆರೋಪಿಸಿದ್ದರು.

ಕೇರಳದ ಹಲವು ಜಿಲ್ಲೆಗಳಲ್ಲಿ ಅಕ್ರಮ

ಕೇರಳದ ಹಲವು ಜಿಲ್ಲೆಗಳಲ್ಲಿ ಅಕ್ರಮ

ಕೇರಳದಲ್ಲಿ ಒಬ್ಬರು ಎರಡು ಅಥವಾ ಎರಡಕ್ಕಿಂತ ಹೆಚ್ಚು ವೋಟರ್ ಐಡಿಗಳನ್ನು ಹೊಂದಿರುವ ಹಲವು ಪ್ರಕರಣಗಳು ವರದಿಯಾಗಿವೆ. ರಾಜ್ಯದ ಜಿಲ್ಲಾಧಿಕಾರಿಗಳು ನೀಡಿರುವ ಪ್ರಾಥಮಿಕ ವರದಿಯ ಪ್ರಕಾರ, ಕೊಟ್ಟಾಯಂ ಜಿಲ್ಲೆಯಲ್ಲಿ 1600 ಪ್ರಕರಣಗಳನ್ನು ತನಿಖೆ ನಡೆಸಿದ್ದು, 590 ಪ್ರಕರಣಗಳಲ್ಲಿ ಅಕ್ರಮ ಬೆಳಕಿಗೆ ಬಂದಿದೆ. ತ್ರಿಶ್ಶೂರ್ ಜಿಲ್ಲೆಯಲ್ಲಿ ಎಲ್ಲ 570 ಪ್ರಕರಣಗಳಲ್ಲಿ ಎರಡು ಬಾರಿ ಹೆಸರು ನಮೂದಿಸಿರುವುದು ಗೊತ್ತಾಗಿದೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ಪರಿಶೀಲಿಸಿದ 2004 ದಾಖಲಾತಿಗಳಲ್ಲಿ 800 ಪ್ರಕರಣಗಳು ಒಂದಕ್ಕಿಂತ ಹೆಚ್ಚು ಬಾರಿ ನಮೂದಾಗಿರುವುದು ತಿಳಿದು ಬಂದಿದೆ.

ಎಲ್ಲ ಕ್ಷೇತ್ರಗಳಲ್ಲೂ ವೋಟರ್ ಐಡಿ ಮರುಪರಿಶೀಲನೆ

ಎಲ್ಲ ಕ್ಷೇತ್ರಗಳಲ್ಲೂ ವೋಟರ್ ಐಡಿ ಮರುಪರಿಶೀಲನೆ

ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾರರ ಗುರುತಿನ ಚೀಟಿ ಬಗ್ಗೆ ಮರುಪರಿಶೀಲನೆ ನಡೆಸಬೇಕು. ಅಕ್ರಮ ಕಂಡು ಬಂದಲ್ಲಿ ಕಾರಣೀಕರ್ತರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಕ್ಕೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಟೀಕಾರಾಮ್ ಮೀನಾ ಆದೇಶಿಸಿದ್ದಾರೆ.

ಮಾತೃಭೂಮಿ-ಸಿ ವೋಟರ್ ಸಮೀಕ್ಷೆ: ಕೇರಳದಲ್ಲಿ ಮತ್ತೆ ಪಿಣರಾಯಿ 'ವಿಜಯ'ನ್

ಮತದಾನದಲ್ಲಿ ಅಕ್ರಮ ತಡೆಯಲು ಆಯೋಗದ ಕ್ರಮ

ಮತದಾನದಲ್ಲಿ ಅಕ್ರಮ ತಡೆಯಲು ಆಯೋಗದ ಕ್ರಮ

ರಾಜ್ಯದ ಮತದಾರರ ಪಟ್ಟಿಯಲ್ಲಿ ಒಂದು ವೇಳೆ ಎರಡು ಎರಡು ಬಾರಿ ಹೆಸರು ನಮೂದಾಗಿದ್ದರೂ ಚುನಾವಣಾ ಸಂಹಿತೆಯು ಅದನ್ನು ತೆಗೆದು ಹಾಕುವುದಕ್ಕೆ ಅನುಮತಿಸುವುದಿಲ್ಲ. ಈ ಹಿನ್ನೆಲೆ ಮತದಾನದಲ್ಲಿ ಅಕ್ರಮ ತಡೆಯಲು ಚುನಾವಣಾ ಆಯೋಗವು ಎರಡು ರೀತಿ ಕ್ರಮಗಳನ್ನು ತಗೆದುಕೊಂಡಿದೆ.

- ಎರಡು ಕಡೆ ಮತದಾರರ ಚೀಟಿ ಹೊಂದಿರುವವರ ಪಟ್ಟಿಯನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ನೀಡಲಾಗುವುದು. ಕ್ಷೇತ್ರದಲ್ಲಿ ಎರಡು ವೋಟರ್ ಐಡಿ ಹೊಂದಿರುವ, ವರ್ಗಾವಣೆಗೊಂಡ ಹಾಗೂ ಮೃತಪಟ್ಟ ಮತದಾರರ ಪಟ್ಟಿಯೊಂದಿಗೆ ಅದನ್ನು ಹೋಲಿಕೆ ಮಾಡಲಾಗುವುದು.

- ಒಂದಕ್ಕಿಂತ ಹೆಚ್ಚು ಮತದಾರ ಚೀಟಿ ಹೊಂದಿರುವವರ ಸಂಖ್ಯೆ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಬಿಗಿಗೊಳಿಸಲಾಗುತ್ತದೆ. ಗ್ರಾಮಗಳಲ್ಲಿ ಪಕ್ಷದ ಚುನಾವಣಾ ಏಜೆಂಟ್ ನೇಮಿಸದಿದ್ದಲ್ಲಿ ಮತದಾರರನ್ನು ಕರೆ ತರುವ ವ್ಯವಸ್ಥೆ ಮಾಡಲಾಗುವುದು. ಅಕ್ರಮ ಮತದಾನ ನಡೆಯುವುದನ್ನು ತಡೆಯಲು ಮಲಬಾರ್ ಪ್ರದೇಶದ ಐದು ಜಿಲ್ಲೆಗಳಲ್ಲಿ ಕೇಂದ್ರ ಭದ್ರತಾ ಪಡೆಯನ್ನು ನಿಯೋಜನೆ ಮಾಡಲಾಗುತ್ತದೆ.

ರಾಜ್ಯದಲ್ಲಿ ಅಕ್ರಮ ಮತದಾನದ ಸಾಧ್ಯತೆ

ರಾಜ್ಯದಲ್ಲಿ ಅಕ್ರಮ ಮತದಾನದ ಸಾಧ್ಯತೆ

  • ಹೊಸ ಅರ್ಜಿಗಳು ಬಂದಿದ್ದಲ್ಲಿ ಬೂತ್ ಹಂತದ ಅಧಿಕಾರಿಗಳು ಕೊರೊನಾವೈರಸ್ ಸೋಂಕಿನ ಹಿನ್ನೆಲೆ ದೈಹಿಕ ಪರೀಕ್ಷೆ ನಡೆಸುವುದಕ್ಕೆ ಮುಂದಾಗುವುದಿಲ್ಲ
  • ಕಂಪ್ಯೂಟರ್ ಅಸಮರ್ಪಕ ಕ್ರಿಯೆಯಿಂದ ಅಕ್ರಮ ಮತದಾನ
  • ಒಂದೇ ಹೆಸರಿನ ಮತ್ತು ಒಂದೇ ಮತದಾರರ ಗುರುತಿನ ಚೀಟಿಯನ್ನು ಪತ್ತೆ ಮಾಡುವಂತಾ ಆಂತರಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸದೇ ಇರುವುದು
  • ನಿರ್ದಿಷ್ಟವಲ್ಲದ ವೇದಿಕೆಗಳಲ್ಲಿ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಈ ರೀತಿ ಆಗುತ್ತದೆ
  • ಮತದಾರರು ವಿವಿಧ ಕ್ಷೇತ್ರಗಳಲ್ಲಿ ಉದ್ದೇಶಪೂರ್ವಕವಾಗಿ ವೋಟರ್ ಐಡಿಗಾಗಿ ಅರ್ಜಿ ಸಲ್ಲಿಸಿದಾಗ ಹೀಗೆ ಆಗುತ್ತದೆ
ರಾಜ್ಯದ 140 ಕ್ಷೇತ್ರಗಳಿಗೆ ಚುನಾವಣೆ

ರಾಜ್ಯದ 140 ಕ್ಷೇತ್ರಗಳಿಗೆ ಚುನಾವಣೆ

ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಿಸಲಾಗಿದೆ. 2,74,46,039 ಮತದಾರನ್ನು ಹೊಂದಿರುವ ರಾಜ್ಯದಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 2ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಜೊತೆಗೆ ಕೇರಳ ವಿಧಾನಸಭಾ ಚುನಾವಣೆ ಭವಿಷ್ಯ ಹೊರ ಬೀಳಲಿದೆ.

English summary
Double Votes Confirms In Kerala; Election Commission Order To Detailed Inspection In 140 Constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X