ಗುಡ್ ನ್ಯೂಸ್: ಕೇರಳದ ಕೊರೊನಾ ಪೀಡಿತನಿಗೆ ಪರಿಣಾಮಕಾರಿಯಾದ Anti-HIV ಡ್ರಗ್ಸ್!
ಕೊಚ್ಚಿ, ಮಾರ್ಚ್ 26: ಕೇರಳದಲ್ಲಿ ಕೋವಿಡ್-19 ಪಾಸಿಟೀವ್ ನಿಂದ ಬಳಲುತ್ತಿದ್ದ ಬ್ರಿಟನ್ ಪ್ರಜೆಗೆ ಚಿಕಿತ್ಸೆಯಾಗಿ Anti-HIV ಡ್ರಗ್ಸ್ ನೀಡಲಾಗಿತ್ತು. ಬ್ರಿಟನ್ ಪ್ರಜೆ ಮೇಲೆ Anti-HIV ಡ್ರಗ್ಸ್ ಪರಿಣಾಮಕಾರಿಯಾಗಿದ್ದು, ಇದೀಗ ರಿಪೋರ್ಟ್ ನಲ್ಲಿ ಕೋವಿಡ್-19 ನೆಗೆಟಿವ್ ಬಂದಿದೆ ಎಂದು ಎರ್ನಾಕುಲಂನ ಮೆಡಿಕಲ್ ಕಾಲೇಜ್, ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
Ritonavir ಮತ್ತು Lopinavir ಕಾಂಬಿನೇಶನ್ ಒಳಗೊಂಡ Anti-HIV ಡ್ರಗ್ಸ್ ಗೆ ರೋಗಿ ಉತ್ತಮವಾಗಿ ಸ್ಪಂದಿಸಿದ್ದಾರೆ. ಏಳು ದಿನಗಳ ಕಾಲ ಬ್ರಿಟನ್ ಪ್ರಜೆ ಚಿಕಿತ್ಸೆ ಪಡೆದಿದ್ದು, Anti-HIV ಡ್ರಗ್ಸ್ ನೀಡಿದ ಮೂರು ದಿನಗಳ ಬಳಿಕ ಟೆಸ್ಟ್ ಗಾಗಿ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿತ್ತು. ಟೆಸ್ಟ್ ರಿಸಲ್ಟ್ ಈಗ ಲಭ್ಯವಾಗಿದ್ದು, ಕೋವಿಡ್-19 ನೆಗೆಟಿವ್ ಬಂದಿದೆ.
ಅಸಲಿಗೆ, ಕೇರಳದಲ್ಲಿ ಕೊರೊನಾ ಪೀಡಿತರ ಮೇಲೆ Anti-HIV ಡ್ರಗ್ಸ್ ಪ್ರಯೋಗ ಮಾಡಿದ್ದು ಇದೇ ಮೊದಲು. ಡಾ.ಥಾಮಸ್ ಮ್ಯಾಥ್ಯೂ, ಡಾ.ಜೇಕಬ್, ಡಾ.ಗಣೇಶ್ ಮೋಹನ್, ಡಾ.ಗೀತಾ ನಾಯರ್ ನೇತೃತ್ವದ ವೈದ್ಯರ ತಂಡ ಎರ್ನಾಕುಲಂನ ಮೆಡಿಕಲ್ ಕಾಲೇಜ್, ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಪತ್ನಿ ಕೂಡ ಗುಣಮುಖ
ಬ್ರಿಟನ್ ಪ್ರಜೆ ಜೊತೆ ಆತನ ಪತ್ನಿಗೂ Anti-HIV ಡ್ರಗ್ಸ್ ನೀಡಲಾಗಿದ್ದು, ಆಕೆಗೂ ಟೆಸ್ಟ್ ರಿಪೋರ್ಟ್ ನಲ್ಲೂ ಇದೀಗ ಕೋವಿಡ್-19 ನೆಗೆಟಿವ್ ಬಂದಿದೆ.

ಆರೋಗ್ಯ ಸಚಿವಾಲಯ ಶಿಫಾರಸ್ಸು ಮಾಡಿತ್ತು
ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳ ಅನಾರೋಗ್ಯ ಸ್ಥಿತಿಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ಕೇಸ್ ಟು ಕೇಸ್ ಆಧಾರದ ಮೇಲೆ Lopinavir ಮತ್ತು Ritonavir ಒಳಗೊಂಡ Anti-HIV ಡ್ರಗ್ ಕಾಂಬಿನೇಶನ್ ಬಳಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಶಿಫಾರಸ್ಸು ಮಾಡಿತ್ತು.

60 ವರ್ಷ ಮೇಲ್ಪಟ್ಟ ರೋಗಿಗಳಿಗೆ ಚಿಕಿತ್ಸೆ
'ಕ್ಲಿನಿಕಲ್ ಮ್ಯಾನೇಜ್ಮೆಂಟ್ ಆಫ್ ಕೋವಿಡ್-19' ಮಾರ್ಗಸೂಚಿಯಲ್ಲಿ ಕೊರೊನಾ ಸೋಂಕು ತಗುಲಿರುವ ಡಯಾಬಿಟೀಸ್, ಮೂತ್ರಪಿಂಡ ವೈಫಲ್ಯ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟ ಹೈ-ರಿಸ್ಕ್ ಇರುವ ರೋಗಿಗಳಿಗೆ Lopinavir ಮತ್ತು Ritonavir ಒಳಗೊಂಡ Anti-HIV ಡ್ರಗ್ಸ್ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿತ್ತು.

ಜೈಪುರದಲ್ಲೂ ಸಕ್ಸಸ್
ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಭಾರತದಲ್ಲಿರುವ ಇಟಲಿಯ ದಂಪತಿ ಮೇಲೂ Anti-HIV ಡ್ರಗ್ಸ್ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಕೊರೊನಾ ವೈರಸ್ ಸೋಂಕಿನಿಂದ ಕಂಗೆಟ್ಟಿದ್ದ ಇಟಲಿಯ ದಂಪತಿ Anti-HIV ಡ್ರಗ್ಸ್ ನಿಂದಾಗಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇಟಲಿಯ ದಂಪತಿಯ ಜೊತೆಗೆ ದುಬೈನಿಂದ ವಾಪಸ್ ಆಗಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 85 ವರ್ಷ ವಯಸ್ಸಿನ ವ್ಯಕ್ತಿಯ ಮೇಲೂ Anti-HIV ಡ್ರಗ್ಸ್ ಪ್ರಯೋಗಿಸಲಾಗಿದೆ. ಅಚ್ಚರಿ ಅಂದ್ರೆ, ಈ ವ್ಯಕ್ತಿಯೂ ಇದೀಗ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ.
-
Mangoes: ಮಾವಿನಹಣ್ಣು ಖರೀದಿ ಮಾಡುವಾಗ 3 ತಪ್ಪು ಮಾಡ್ಬೇಡಿ! ಈ 6 ಟ್ರಿಕ್ಸ್ ತಿಳ್ಕೊಂಡಿರಿ -
Vastu Tips: ಮನೆಯಲ್ಲಿ ಎರಡು ಕನ್ನಡಿಗಳು ಎದುರುಬದರಿನಲ್ಲಿ ಇದೆಯಾ? ತಕ್ಷಣ ಬದಲಿಸಿ -
Vastu vs Horoscope: ಮನೆ ವಾಸ್ತು ಪರ್ಫೆಕ್ಟ್ ಆದರೂ ಏಕೆ ಕಿರಿಕಿರಿ? ತಿಳಿಯಿರಿ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ












Click it and Unblock the Notifications