Coronavirus Scare: ಇಟಲಿಯಲ್ಲಿ ಇರುವ ಹಾಗಿಲ್ಲ, ಭಾರತಕ್ಕೆ ಬರುವ ಹಾಗಿಲ್ಲ!

ತಿರುವನಂತಪುರಂ, ಮಾರ್ಚ್.11: ಕೊರೊನಾ ವೈರಸ್ ಕಾಟದಿಂದಾಗಿ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ವದೇಶಕ್ಕೆ ವಾಪಸ್ ಬರುವುದಕ್ಕೂ ಸಾಧ್ಯವಾಗದೇ ಇಟಲಿಯ ವಿಮಾನ ನಿಲ್ದಾಣಗಳಲ್ಲಿಯೇ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇಟಲಿಯ ಏರ್ ಪೋರ್ಟ್ ಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ನೆರೆವಿಗೆ ಧಾವಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರ ಬರೆದಿದ್ದಾರೆ. ಭಾರತಕ್ಕೆ ಆಗಮಿಸಲು ಅಲ್ಲಿನ ದೇಶದಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕಿದೆ.
ಇಟಲಿ ಮತ್ತು ರಿಪಬ್ಲಿಕ್ ಆಫ್ ಕೊರಿಯಾ ದೇಶಕ್ಕೆ ತೆರಳಿದ್ದ ಭಾರತೀಯರು ವಾಪಸ್ ಆಗಮಿಸಬೇಕಿದ್ದಲ್ಲಿ ಕೆಲವು ನಿಯಮಗಳನ್ನು ಅನುಸರಿಸಬೇಕಾಗಿದೆ.

Coronavirus: Many Indians Are Stranded In Italy Airports

ಕೊರೊನಾ ವೈರಸ್ ತಪಾಸಣೆ ಬಳಿಕ ಅಧಿಕೃತ ಲ್ಯಾಬೋರೇಟರಿ ಪ್ರಾಧಿಕಾರದಿಂದ ಪಡೆದ ವೈದ್ಯಕೀಯ ಪ್ರಯಾಣ ಪತ್ರದಲ್ಲಿ ಸೋಂಕು ಪತ್ತೆಯಾಗಿಲ್ಲ ಎಂಬುದು ಸ್ಪಷ್ಟವಾದ ನಂತರವಷ್ಟೇ ಅವರಿಗೆ ಭಾರತಕ್ಕೆ ತೆರಳಲು ಅವಕಾಶ ನೀಡಲಾಗುತ್ತಿದೆ.

Coronavirus: Many Indians Are Stranded In Italy Airports

ಭಾರತೀಯರನ್ನು ವಾಪಸ್ ಕರೆ ತರುವಂತೆ ಪತ್ರ:
ಭಾರತಕ್ಕೆ ವಾಪಸ್ ಆಗಲು ಹವಣಿಸುತ್ತಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆ ತರಲು ಕೇಂದ್ರ ಸರ್ಕಾರವು ಕ್ರಮ ತೆಗೆದುಕೊಳ್ಳಬೇಕು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಒಂದು ವೇಳೆ ಭಾರತೀಯರಲ್ಲಿ ಸೋಂಕು ಪತ್ತೆಯಾಗಿದ್ದೇ ನಿಜವಾದಲ್ಲಿ ಈಗಾಗಲೇ ದೇಶದಲ್ಲಿ ವ್ಯವಸ್ಥಿತಗೊಳಿಸಿದ ಶಿಬಿರಗಳಲ್ಲಿ ಅಂಥವರನ್ನು ಇರಿಸಿ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+