ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಕೋಪ, ದ್ವೇಷ ತುಂಬಿದ್ದರೇ ಗುರಿ ಸಾಧಿಸಲು ಸಾಧ್ಯವಿಲ್ಲ; ರಾಹುಲ್ ಗಾಂಧಿ

|
Google Oneindia Kannada News

ತಿರುವನಂತಪುರಂ, ಸೆ.12: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ರಾಷ್ಟ್ರವನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿರುವ ಅಭಿಯಾನದ ಅಗತ್ಯತೆಯ ಬಗ್ಗೆ ತಿರುವನಂತಪುರಂನಲ್ಲಿ ಮಾತನಾಡಿದ್ದಾರೆ.

ಕೋಟ್ಯಂತರ ಬಡವರ ಕಷ್ಟಗಳನ್ನು ಕಡಿಮೆ ಮಾಡುವುದು ಸೇರಿದಂತೆ ಭಾರತವು ಸಾಧಿಸಲು ಹಲವು ನಿರ್ಣಾಯಕ ಗುರಿಗಳನ್ನು ಹೊಂದಿದೆ. ಆದರೆ, ದೇಶವು ವಿಭಜನೆಯಾಗಿ, ಕೋಪದಿಂದ ಮತ್ತು ದ್ವೇಷದಿಂದ ತುಂಬಿದ್ದರೆ ಅದು ತನ್ನ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ಭಾರತ್‌ ಜೋಡೋ ಯಾತ್ರೆ: ಡಿಕೆಶಿ ಸಭೆಯ ಫ್ಲೆಕ್ಸ್‌ನಲ್ಲಿ ಸಿದ್ದು ಭಾವಚಿತ್ರಕ್ಕೆ ಕೊಕ್‌ಭಾರತ್‌ ಜೋಡೋ ಯಾತ್ರೆ: ಡಿಕೆಶಿ ಸಭೆಯ ಫ್ಲೆಕ್ಸ್‌ನಲ್ಲಿ ಸಿದ್ದು ಭಾವಚಿತ್ರಕ್ಕೆ ಕೊಕ್‌

ಅಭಿಯಾನದ ಭಾಗವಾಗಿ ತಿರುವನಂತಪುರಂ ಹೊರವಲಯದಲ್ಲಿ ಪಕ್ಷದ ಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡುತ್ತಿದ್ದರು.

Congress leader Rahul Gandhi spoke about the Bharat Jodo Yatra

ಸೋಮವಾರ ಕೇರಳದಲ್ಲಿ ಎರಡನೇ ದಿನಕ್ಕೆ ಅಭಿಯಾನ ಕಾಲಿಟ್ಟಿದೆ. 3,500 ಕಿಮೀ ಕನ್ಯಾಕುಮಾರಿ-ಕಾಶ್ಮೀರ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಸಂಸದರಿಗೆ ಬೆಂಬಲ ನೀಡಲು ಬೀದಿಗಳಲ್ಲಿ ಸಾವಿರಾರು ಜನರು ಸಾಲುಗಟ್ಟಿ ನಿಂತಿದ್ದರಿಂದ ಭಾರೀ ಕಾಲ್ತುಳಿತ ಕೂಡ ಉಂಟಾಗಿದೆ.

"ಕೆಲವರು 'ಭಾರತ್ ಜೋಡೋ' ಅಗತ್ಯದ ಬಗ್ಗೆ ಕೇಳಿದ್ದಾರೆ. ಭಾರತವು ಸಾಧಿಸಲು ಹಲವು ನಿರ್ಣಾಯಕ ಗುರಿಗಳನ್ನು ಹೊಂದಿದೆ. ನಾವು ಲಕ್ಷಾಂತರ ಬಡವರ ದುಃಖವನ್ನು ಕಡಿಮೆ ಮಾಡಬೇಕು. ಇದು ಸುಲಭವಲ್ಲ. ಭಾರತವು ವಿಭಜನೆಗೊಂಡರೆ, ಕೋಪಗೊಂಡಿದ್ದರೆ, ತನ್ನ ಬಗ್ಗೆ ದ್ವೇಷದಿಂದ ತುಂಬಿದ್ದರೆ ಅದು ಸಾಧ್ಯವಿಲ್ಲ" ಎಂದು ಗಾಂಧಿ ಹೇಳಿದರು.

ದೇಶದಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಯಾರಾದರೂ ದ್ವೇಷಿಸಿದರೆ ಆ ವ್ಯಕ್ತಿ ಭಾರತದ ಕಲ್ಪನೆಯನ್ನೇ ದ್ವೇಷಿಸುತ್ತಾನೆ ಎಂದು ಹೇಳಿದರು. ದೇಶದಲ್ಲಿ ಒಂದು ನಿರ್ದಿಷ್ಟ ಸಿದ್ಧಾಂತದಿಂದ ದ್ವೇಷದ ವಾತಾವರಣವಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

Congress leader Rahul Gandhi spoke about the Bharat Jodo Yatra

"ಈ ದೇಶದ ಪ್ರತಿಯೊಬ್ಬ ವ್ಯಕ್ತಿಯು ಭಾರತೀಯ ಮತ್ತು ಯಾರಾದರೂ ಯಾವುದೇ ಭಾರತೀಯನನ್ನು ದ್ವೇಷಿಸಿದರೆ, ಅವನು ಭಾರತದ ಕಲ್ಪನೆಯನ್ನೇ ದ್ವೇಷಿಸುತ್ತಾನೆ. ಇಂದು, ನಾವು ಒಂದು ನಿರ್ದಿಷ್ಟ ಸಿದ್ಧಾಂತದಿಂದ ಉಂಟಾಗುತ್ತಿರುವ ಕೋಪ ಮತ್ತು ದ್ವೇಷದ ವಾತಾವರಣವನ್ನು ಹೊಂದಿದ್ದೇವೆ" ಎಂದು ವಯನಾಡಿನ ಕಾಂಗ್ರೆಸ್ ಸಂಸದ ಹೇಳಿದರು.

2024ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರು ಪಕ್ಷದ ಬೃಹತ್ ಜನ ಸಂಪರ್ಕ ಕಾರ್ಯಕ್ರಮವಾದ 'ಭಾರತ್ ಜೋಡೋ ಯಾತ್ರೆ'ಗೆ ಸೆಪ್ಟೆಂಬರ್‌ 07 ರಂದು ಕನ್ಯಾಕುಮಾರಿಯಿಂದ ಚಾಲನೆ ನೀಡಲಾಗಿದೆ. ಈ ಪಾದಯಾತ್ರೆಯು 150 ದಿನಗಳಲ್ಲಿ 3,500 ಕಿ.ಮೀ ಸಾಗಲಿದೆ.

ಕಾಂಗ್ರೆಸ್‌ನಿಂದ ದೇಶದಲ್ಲೇ ಅತಿ ಉದ್ದದ ನಡಿಗೆ ಎಂದು ಕರೆಸಿಕೊಂಡ ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಲ್ಲಿ ರ್‍ಯಾಲಿಯೊಂದಿಗೆ ಪ್ರಾರಂಭಿಸಲಾಗಿದೆ. ಪಾದಯಾತ್ರೆಗೆ ಕಾಂಗ್ರೆಸ್ ನಾಯಕರು ಯಾವುದೇ ರಾಜಕೀಯ ಕೋನವನ್ನು ನಿರಾಕರಿಸಿದ್ದು, ಈ ಯಾತ್ರೆಯು ದೇಶವನ್ನು ಒಂದುಗೂಡಿಸುವ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

English summary
Congress leader Rahul Gandhi spoke about the Bharat Jodo Yatra campaign, he says aims to united the nation. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X