ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಭೀತಿಯ ನಡುವೆ ಕೇರಳದಲ್ಲಿ ಹಕ್ಕಿ ಜ್ವರ!

|
Google Oneindia Kannada News

ಕೇರಳ, ಮಾರ್ಚ್ 07: ಚೀನಾದಲ್ಲಿ ಹುಟ್ಟಿಕೊಂಡ ನೋವಲ್ ಕೊರೊನಾ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ಮಾರಣಾಂತಿಕ ಕೊರೊನಾ ವೈರಸ್ ನಿಂದ ಎಲ್ಲರೂ ಬೆಚ್ಚಿ ಬಿದ್ದಿರುವಾಗಲೇ, ಕೇರಳದಲ್ಲಿ ಹಕ್ಕಿ ಜ್ವರ ಪತ್ತೆ ಆಗಿದೆ.

ಕೇರಳದ ಕೋಯಿಕ್ಕೋಡ್ ನಲ್ಲಿರುವ ಒಂದು ಕೋಳಿ ಫಾರಂ ಮತ್ತು ಒಂದು ಖಾಸಗಿ ನರ್ಸರಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಇದರಿಂದಾಗಿ ಕೇರಳ ರಾಜ್ಯದ ಪಶುಸಂಗೋಪನಾ ಇಲಾಖೆ ತುರ್ತು ಸಭೆ ಕರೆದಿದೆ.

ಕೊರೊನಾ ಜೊತೆ ಎಚ್‌1ಎನ್‌1 ಸೋಂಕು: ಟೆಕ್ಕಿಗಳಿಗೆ ಆತಂಕ ಕೊರೊನಾ ಜೊತೆ ಎಚ್‌1ಎನ್‌1 ಸೋಂಕು: ಟೆಕ್ಕಿಗಳಿಗೆ ಆತಂಕ

200 ಕೋಳಿಗಳು ಪ್ರತಿದಿನ ಸಾವನ್ನಪ್ಪುತ್ತಿರುವುದರಿಂದ ಅನುಮಾನಗೊಂಡು ಕಣ್ಣೂರು ಲ್ಯಾಬ್ ಮತ್ತು ಭೋಪಾಲ್ ಲ್ಯಾಬ್ ಗಳಿಗೆ ಪರೀಕ್ಷಾ ಸ್ಯಾಂಪಲ್ ಗಳನ್ನು ಕಳುಹಿಸಿಕೊಡಲಾಗಿತ್ತು. ಸ್ಯಾಂಪಲ್ ಗಳಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ. ಆದ್ರೆ, ಆತಂಕ ಪಡುವ ಅಗತ್ಯ ಇಲ್ಲ ಎಂದು ಸಚಿವ ಕೆ.ರಾಜು ತಿರುವನಂತಪುರಂನಲ್ಲಿ ತಿಳಿಸಿದ್ದಾರೆ.

Bird Flu Confirmed In Kerala, State On High Alert

ಕೋಳಿ ಫಾರಂ ಸುತ್ತ ಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ. ಹಕ್ಕಿ ಜ್ವರ ಮತ್ತು ಹಕ್ಕಿ ಜ್ವರಕ್ಕೆ ಕಾರಣವಾಗುವ H5N1 ವೈರಾಣುವನ್ನು ತಡೆಗಟ್ಟಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಕ್ಕಿ ಜ್ವರ ಸೋಂಕು ತಗುಲಿರುವ ಎಲ್ಲಾ ಕೋಳಿಗಳನ್ನು ಸಂಹಾರ ಮಾಡಲು ಆದೇಶಿಸಲಾಗಿದೆ.

English summary
Bird Flu confirmed in Kerala, State on High Alert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X