ಅರೆ ನಗ್ನ ದೇಹದ ಮೇಲೆ ಚಿತ್ರಕಲೆ: ರೆಹನಾ ಫಾತಿಮಾಗೆ ಜಾಮೀನಿಲ್ಲ
ತಿರುವನಂತಪುರಂ, ಆ.7: ಶಬರಿಮಲೆ ಅಯ್ಯಪ್ಪ ಸನ್ನಿಧಿಗೆ ತೆರಳಲು ಯತ್ನಿಸಿ ವಿಫಲರಾಗಿದ್ದ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಅರೆ ನಗ್ನ ದೇಹದ ಮೇಲೆ ಪೇಂಟ್ ಮಾಡಲು ಅಪ್ರಾಪ್ತ ಮಕ್ಕಳನ್ನು ಬಳಸಿಕೊಂಡ ಆರೋಪ ಹೊತ್ತುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಹನಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ತಿರಸ್ಕೃತಗೊಂಡಿದೆ.
Recommended Video
ರೆಹನಾ ಫಾತಿಮಾಗೆ ನಿರೀಕ್ಷಣಾ ಜಾಮೀನು ನೀಡದಿರುವಂತೆ ಕೇರಳ ಹೈಕೋರ್ಟ್ ಆದೇಶ ನೀಡಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ರೆಹನಾ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಆ ವಿಡಿಯೋದಲ್ಲಿ ನಗ್ನತೆ ಇದ್ದರೂ ಅದು ಮಕ್ಕಳಿಗೆ ಶಿಕ್ಷಣ ನೀಡುವಂತೆ ಇದೆ, ಅದರಲ್ಲಿ ಯಾವುದೇ ಅಶ್ಲೀಲ, ಅನೈತಿಕವಾದ ದೃಶ್ಯಗಳಿಲ್ಲ. ಪುರುಷರಿಗೆ ಸ್ತ್ರೀಯರು ಸಮಾನವಾಗಿ ದೇಹದ ಮೇಲೆ ಈ ರೀತಿ ಚಿತ್ರಕಲೆ ಬಿಡಿಸಿಕೊಳ್ಳುವುದರಲ್ಲಿ ಏನು ತಪ್ಪಿದೆ ಎಂದು ರೆಹನಾ ಪರ ವಕೀಲರು ವಾದಿಸಿದರು.

ಆದರೆ, ವಾದವನ್ನು ತಿರಸ್ಕರಿಸಿದ ಜಡ್ಜ್ ಅರುಣ್ ಮಿಶ್ರಾ, ಲೈಂಗಿಕ ಶಿಕ್ಷಣ ಹೇಳಿ ಕೊಡಲು ಬೇರೆ ವಿಧಾನಗಳಿವೆ. ಈ ವಿಡಿಯೋ ಅಸಭ್ಯ ಎಂದು ಪರಿಗಣಿಸಲಾಗಿದೆ ಎಂದಿದ್ದಾರೆ.
ಅಯ್ಯಪ್ಪ ದೇಗುಲ ಪ್ರವೇಶ, ಅವಹೇಳನಕಾರಿ ಫೇಸ್ಬುಕ್ ಪೋಸ್ಟ್ ನಿಂದಾಗಿ ಪೊಲೀಸರಿಂದ ಬಂಧನ, ವಿಚಾರಣೆ ಎದುರಿಸಿದ್ದ ಫಾತಿಮಾರನ್ನು ಉದ್ಯೋಗದಿಂದ ಅಮಾನತು ಮಾಡಲಾಗಿತ್ತು. ಆದರೆ, ಹುದ್ದೆಯಲ್ಲಿ ಉಳಿಸಿಕೊಳ್ಳಲಾಗಿತ್ತು. ಆದರೆ, ಈಗ ಕೊರೊನಾವೈರಸ್ ಲಾಕ್ಡೌನ್ ನಡುವೆ ಉದ್ಯೋಗದಿಂದ ಪರೋಕ್ಷವಾಗಿ ತೆಗೆದು ಹಾಕಲಾಗಿದೆ. ಇದು ರಾಜಕೀಯ ಮುಖಂಡರ ಕೈವಾಡದಿಂದ ನಡೆದಿರುವ ಕಾನೂನು ಉಲ್ಲಂಘನೆ ಕ್ರಮವಾಗಿದ್ದು, ಕಡ್ಡಾಯ ನಿವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ, ನಾನು ಈ ಆದೇಶದ ವಿರುದ್ಧ ಹೋರಾಡುತ್ತೇನೆ ಎಂದು ಫಾತಿಮಾ ಸುದ್ದಿಗಾರರೊಂದಿಗೆ ಹೇಳಿದ್ದಾರೆ.












Click it and Unblock the Notifications