ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಕೊರೊನಾ ಪೀಡಿತನಿಗೂ ವರದಾನವಾಗುತ್ತಾ Anti-HIV ಡ್ರಗ್ಸ್?

|
Google Oneindia Kannada News

ಕೊಚ್ಚಿ, ಮಾರ್ಚ್ 17: ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳ ಅನಾರೋಗ್ಯ ಸ್ಥಿತಿಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ಕೇಸ್ ಟು ಕೇಸ್ ಆಧಾರದ ಮೇಲೆ Lopinavir ಮತ್ತು Ritonavir ಒಳಗೊಂಡ Anti-HIV ಡ್ರಗ್ ಕಾಂಬಿನೇಶನ್ ಬಳಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಶಿಫಾರಸ್ಸು ಮಾಡಿತ್ತು.

ಈ ಹಿನ್ನಲೆಯಲ್ಲಿ, ಕೇರಳದಲ್ಲಿ ಕೋವಿಡ್-19 ರೋಗಿಯ ಚಿಕಿತ್ಸೆಗಾಗಿ ವೈದ್ಯರು Lopinavir ಮತ್ತು Ritonavir ಕಾಂಬಿನೇಶನ್ ನ Anti-HIV ಡ್ರಗ್ಸ್ ನ ನೀಡುತ್ತಿದ್ದಾರೆ.

ಪ್ರಯೋಗ ಫಲಪ್ರದ: ಕೊರೊನಾ ವೈರಸ್ ವಿರುದ್ಧ ಸೆಣಸಾಡಿ ಗೆದ್ದ Anti-HIV ಡ್ರಗ್ಸ್!ಪ್ರಯೋಗ ಫಲಪ್ರದ: ಕೊರೊನಾ ವೈರಸ್ ವಿರುದ್ಧ ಸೆಣಸಾಡಿ ಗೆದ್ದ Anti-HIV ಡ್ರಗ್ಸ್!

ಜೈಪುರದಲ್ಲಿ ಇಟಲಿಯ ದಂಪತಿ ಸೇರಿದಂತೆ ಒಟ್ಟು ಮೂವರ ಮೇಲೆ ಮಾಡಲಾಗಿದ್ದ ಪ್ರಯೋಗ ಯಶಸ್ವಿಯಾಗಿರುವುದರಿಂದ, 60 ವರ್ಷ ಮೇಲ್ಪಟ್ಟ ಕೊರೊನಾ ಪೀಡಿತರಿಗೆ ಔಷಧಿಯಾಗಿ Anti-HIV ಡ್ರಗ್ಸ್ ನೀಡಬಹುದಾಗಿದೆ. ಹೀಗಾಗಿ, ಕೇರಳದ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿ, ಪ್ರತ್ಯೇಕವಾಗಿರುವ ವಿದೇಶಿ ಪ್ರಜೆಗೂ Anti-HIV ಡ್ರಗ್ಸ್ ನೀಡಲಾಗುತ್ತಿದೆ.

Anti-HIV Drug Being Tried On Covid 19 Patient In Kerala

ರೋಗಿಯ ಒಪ್ಪಿಗೆ ಪಡೆದು, Anti-HIV ಡ್ರಗ್ಸ್ ನೀಡಲಾಗಿದೆ ಎಂಬ ವಿಚಾರವನ್ನು ಎರ್ನಾಕುಲಂನ ಜಿಲ್ಲಾ ಮಾಹಿತಿ ಕೇಂದ್ರ ದೃಢಪಡಿಸಿದೆ. ಕೇರಳದ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಪ್ರಿನ್ಸಿಪಾಲ್ ಡಾ.ಥಾಮಸ್ ಮ್ಯಾಥ್ಯೂ, ಡಾ.ಜೇಕಬ್, ಡಾ.ಗಣೇಶ್ ಮೋಹನ್, ಡಾ.ಗೀತಾ ನಾಯರ್ ಸೇರಿದಂತೆ ವೈದ್ಯರ ತಂಡ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಕೊರೊನಾಗೆ Anti-HIV ಡ್ರಗ್ಸ್ ಮದ್ದು: ಆರೋಗ್ಯ ಸಚಿವಾಲಯ ಶಿಫಾರಸ್ಸು!ಕೊರೊನಾಗೆ Anti-HIV ಡ್ರಗ್ಸ್ ಮದ್ದು: ಆರೋಗ್ಯ ಸಚಿವಾಲಯ ಶಿಫಾರಸ್ಸು!

ಮಾರ್ಚ್ 17 ರಂದು ಹೊರಡಿಸಲಾಗಿದ್ದ 'ಕ್ಲಿನಿಕಲ್ ಮ್ಯಾನೇಜ್ಮೆಂಟ್ ಆಫ್ ಕೋವಿಡ್-19' ಮಾರ್ಗಸೂಚಿಯಲ್ಲಿ ಕೊರೊನಾ ಸೋಂಕು ತಗುಲಿರುವ ಡಯಾಬಿಟೀಸ್, ಮೂತ್ರಪಿಂಡ ವೈಫಲ್ಯ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟ ಹೈ-ರಿಸ್ಕ್ ಇರುವ ರೋಗಿಗಳಿಗೆ Lopinavir ಮತ್ತು Ritonavir ಒಳಗೊಂಡ Anti-HIV ಡ್ರಗ್ಸ್ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿತ್ತು.

English summary
Anti-HIV Drug being tried on Covid 19 Patient in Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X