ಕೇರಳ ಸಿಎಂ ಪಿಣರಾಯಿ ವಿಜಯನ್ ಮುಂದೆ ಏಳು ಪ್ರಶ್ನೆಗಳನ್ನು ಇರಿಸಿದ ಅಮಿತ್ ಶಾ
ತಿರುವನಂತಪುರಂ, ಮಾರ್ಚ್ 8: ಕೇರಳದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ರಾಜಕೀಯ ಉದ್ದೇಶದೊಂದಿಗೆ ಕಾರ್ಯಾಚರಣೆ ನಡೆಸುತ್ತಿವೆ ಎಂಬ ಸಿಪಿಎಂ ಆರೋಪಕ್ಕೆ ತಿರುಗೇಟು ನೀಡಿರುವ ಗೃಹ ಸಚಿವ ಅಮಿತ್ ಶಾ, ಚಿನ್ನ ಹಾಗೂ ಡಾಲರ್ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಹಲವು ಪ್ರಶ್ನೆಗಳನ್ನು ಎಸೆದಿದ್ದಾರೆ.
ಕೇರಳದಲ್ಲಿ ಬಿಜೆಪಿ ಆಯೋಜಿಸಿದ್ದ 'ವಿಜಯ ಯಾತ್ರೆ'ಯ ಸಮಾರೋಪದಲ್ಲಿ ಮಾತನಾಡಿದ ಅವರು, 'ಕೇರಳ ಮುಖ್ಯಮಂತ್ರಿಗೆ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸಿದ್ದೇನೆ. ಆ ಪ್ರಶ್ನೆಗಳಿಗೆ ಅವರು ಸಾರ್ವಜನಿಕವಾಗಿ ಉತ್ತರ ನೀಡಲು ಸಿದ್ಧರಿದ್ದಾರೆಯೇ? ಡಾಲರ್ ಮತ್ತು ಚಿನ್ನ ಕಳ್ಳಸಾಗಣೆಯ ಪ್ರಮುಖ ಆರೋಪಿಯು ನಿಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೇ? ಆಕೆಗೆ ನಿಮ್ಮ ಸರ್ಕಾರ ತಿಂಗಳು 3 ಲಕ್ಷ ಸಂಬಳ ನೀಡುತ್ತಿತ್ತೇ?' ಎಂದು ಕೇಳಿದರು.
'ನಕಲಿ ಪ್ರಮಾಣಪತ್ರಗಳನ್ನು ಹೊಂದಿದ್ದ ಆರೋಪಿಯನ್ನು ಉನ್ನತ ಹುದ್ದೆಗೆ ನಿಮ್ಮ ಮುಖ್ಯ ಕಾರ್ಯದರ್ಶಿ ನೇಮಕ ಮಾಡಿದ್ದು ಸತ್ಯವೇ? ಸರ್ಕಾರದ ವೆಚ್ಚದಲ್ಲಿಯೇ ಆ ಮಹಿಳೆಯನ್ನು ನೀವು ಹಾಗೂ ನಿಮ್ಮ ಮುಖ್ಯ ಕಾರ್ಯದರ್ಶಿ ವಿದೇಶ ಪ್ರಯಾಣಕ್ಕೆ ಕರೆದೊಯ್ದಿದ್ದೀರಾ? ಆರೋಪಿ ಮಹಿಳೆಯು ಮುಖ್ಯಮಂತ್ರಿ ನಿವಾಸದಲ್ಲಿ ಆಗಾಗ ನಿಮ್ಮನ್ನು ಭೇಟಿಯಾಗುತ್ತಿದ್ದರೇ? ಕಳ್ಳಸಾಗಣೆಯ ಚಿನ್ನವನ್ನು ವಶಪಡಿಸಿಕೊಂಡಾಗ ಕಸ್ಟಮ್ಸ್ ಅಧಿಕಾರಿಗಳ ಮೇಲೆ ನಿಮ್ಮ ಕಚೇರಿ ಒತ್ತಡ ಹೇರಿರಲಿಲ್ಲವೇ? ಈ ಎಲ್ಲ ವಿವರಗಳೂ ಇಡಿ ಮತ್ತು ಕಸ್ಟಮ್ಸ್ ತನಿಖೆಯಿಂದ ಬಹಿರಂಗವಾಗಿಲ್ಲವೇ? ಈ ಪ್ರಕರಣದಲ್ಲಿ ಉಂಟಾದ ನಿಗೂಢ ಸಾವನ್ನು ನೀವು ತನಿಖೆ ಮಾಡಿದ್ದಿರಾ?' ಎಂದು ಅಮಿತ್ ಶಾ ಪ್ರಶ್ನಿಸಿದರು.

ಉತ್ತರ ನೀಡಲು ಸಿದ್ಧರಾಗಿ
'ಕೇಂದ್ರದ ಮೇಲೆ ಆರೋಪ ಮಾಡುವ ಬದಲು ಮುಖ್ಯಮಂತ್ರಿ ಈ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಲಿ. ಇತರೆ ಭ್ರಷ್ಟಾಚಾರ ವಿಚಾರಗಳ ಬಗ್ಗೆಯೂ ನನಗೆ ಮಾಹಿತಿ ಬಂದಿದೆ. ಆದರೆ ನಾನು ಮುಖ್ಯಮಂತ್ರಿಯವರನ್ನು ಗೊಂದಲಕ್ಕೊಳಪಡಿಸಲು ಬಯಸುವುದಿಲ್ಲ. ಈ ಪ್ರಶ್ನೆಗಳಿಗೆ ಉತ್ತರ ಬೇಕು' ಎಂದು ಹೇಳಿದರು.

ಕಾಂಗ್ರೆಸ್ ನೀತಿಯೇ ಅರ್ಥವಾಗುತ್ತಿಲ್ಲ
'ಎಲ್‌ಡಿಎಫ್ ಮತ್ತು ಯುಡಿಎಫ್ ಕೇವಲ ತಮ್ಮ ಮತ ಬ್ಯಾಂಕ್‌ಗಳ ಬಗ್ಗೆ ಚಿಂತೆಗೊಳಗಾಗಿವೆ. ಸಿಪಿಐ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಎಸ್‌ಡಿಪಿಐ ಜತೆ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜತೆ ಒಪ್ಪಂದ ಮಾಡಿಕೊಂಡಿದೆ. ಆದರೆ ಕೇರಳದಲ್ಲಿ ಕಾಂಗ್ರೆಸ್, ಸಿಪಿಎಂ ವಿರುದ್ಧ ಇದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಈ ಎರಡೂ ಜತೆಗೂಡಿ ಸ್ಪರ್ಧಿಸುತ್ತಿವೆ. ಕೇರಳದಲ್ಲಿ ಕಾಂಗ್ರೆಸ್, ಐಯುಎಂಎಲ್ ಜತೆಗಿದೆ. ಬಂಗಾಳದಲ್ಲಿ ಅವರು ಮುಸ್ಲಿಂ ಮುಖಂಡ ಅಬ್ಬಾಸ್ ಸಿದ್ದಿಕಿ ಜತೆ ಸೆರಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಶಿವಸೇನಾ ಜತೆಗೆ ಇದೆ. ನಂಗೆ ಕಾಂಗ್ರೆಸ್‌ನ ನೀತಿ ಏನು ಎಂಬುದು ನಿಜಕ್ಕೂ ಅರ್ಥವಾಗುತ್ತಿಲ್ಲ' ಎಂದು ಟೀಕಿಸಿದರು.

ಭಕ್ತರಿಗೆ ಸರ್ಕಾರದಿಂದ ಕಿರುಕುಳ
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಸುತ್ತ ಇರುವ ವಿವಾದ ಉಲ್ಲೇಖಿಸಿದ ಅವರು, ಕಮ್ಯುನಿಸ್ಟ್ ಸರ್ಕಾರವು ಭಕ್ತರಿಗೆ ಕಿರುಕುಳ ನೀಡಿದೆ. ಕಾಂಗ್ರೆಸ್ ಈ ಬಗ್ಗೆ ಮೌನವಾಗಿಯೇ ಇದೆ. ಭಕ್ತರ ಹಿತಾಸಕ್ತಿಗೆ ಅನುಗುಣವಾಗಿ ದೇವಸ್ಥಾನ ನಡೆಯಬೇಕು ಎಂದು ಬಿಜೆಪಿ ಬಯಸಿದೆ' ಎಂದರು.

ಎನ್‌ಡಿಎ- ನ್ಯೂ ಕೇರಳ ವಿತ್ ಮೋದಿ
'ಎನ್‌ಡಿಎ- ನ್ಯೂ ಕೇರಳ ವಿತ್ ಮೋದಿ' ಎಂಬ ಚುನಾವಣಾ ಪ್ರಚಾರ ಘೋಷ ವಾಕ್ಯವನ್ನು ಅಮಿತ್ ಶಾ ಬಿಡುಗಡೆ ಮಾಡಿದರು. ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದ 'ಮೆಟ್ರೋ ಮ್ಯಾನ್' ಇ. ಶ್ರೀಧರನ್ ಈ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. 'ಮೂಲಸೌಕರ್ಯ ಅಭಿವೃದ್ಧಿಕಾರ, ನಮ್ಮ ಮೆಟ್ರೋಮ್ಯಾನ್, ದೇಶದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಆಯ್ಕೆಮಾಡಿಕೊಂಡಿದ್ದಾರೆ' ಎಂದು ಅಮಿತ್ ಶಾ ಶ್ಲಾಘಿಸಿದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications