ಕೇರಳದಲ್ಲಿ 67 ಹೊಸ ಪ್ರಕರಣ, ಆಕ್ಟಿವ್ ಕೇಸ್‌ ಸಂಖ್ಯೆ 415ಕ್ಕೆ ಏರಿಕೆ

ತಿರುವನಂತಪುರಂ, ಮೇ 26: ಕೇರಳದಲ್ಲಿ ಹೊಸದಾಗಿ 67 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಸಂಜೆ ಮಾಹಿತಿ ನೀಡಿದ್ದಾರೆ.

Recommended Video

      ಸ್ವದೇಶಕ್ಕೆ ವಾಪಸಾದ ಪೃಥ್ವಿರಾಜ್ ಮತ್ತು ಚಿತ್ರತಂಡ | Prutviraj | Oneindia Kannada

      67 ಕೇಸ್‌ಗಳ ಪೈಕಿ ಪಾಲಕ್ಕಾಡ್‌ನಲ್ಲಿ 29 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಕಣ್ಣೂರಿನಲ್ಲಿ 8 ಮಂದಿ, ಕೊಟ್ಟಾಯಂನಲ್ಲಿ 6 ಕೇಸ್, ಮಲಪ್ಪುರಂ ಮತ್ತು ಎರ್ನಾಕುಲಂನಲ್ಲಿ ತಲಾ 5 ಪ್ರಕರಣ, ತ್ರಿಶೂರ್ ಮತ್ತು ಕೊಲ್ಲಂನಲ್ಲಿ ತಲಾ 3 ಕೇಸ್ ಕಾಸರಗೂಡು ಮತ್ತು ಆಲಪ್ಪುಳದಲ್ಲಿ ತಲಾ 3 ಜನರಿಗೆ ಕೊರೊನಾ ಅಂಟಿಕೊಂಡಿದೆ.

      ಹೊಸದಾಗಿ ವರದಿಯಾದ ಸೋಂಕಿತ ವ್ಯಕ್ತಿಗಳಲ್ಲಿ 27 ಮಂದಿ ವಿದೇಶದಿಂದ ಹಿಂತಿರುಗಿದ್ದಾರೆ. 33 ಮಂದಿ ವಿವಿಧ ರಾಜ್ಯಗಳಿಂದ ಮರಳಿದ್ದಾರೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಈ ಪೈಕಿ ಮಹಾರಾಷ್ಟ್ರ-15, ತಮಿಳುನಾಡು-9, ಗುಜರಾತ್-5, ಕರ್ನಾಟಕ -2, ಪಾಂಡಿಚೆರಿ-1, ದೆಹಲಿ -1 ರಾಜ್ಯಕ್ಕೆ ಬಂದಿದ್ದಾರೆ.

      67 New Covid-19 Cases Reported In Kerala Today

      ಪ್ರಸ್ತುತ ರಾಜ್ಯದಲ್ಲಿ 415 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 532 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಒಟ್ಟು 6 ಜನರು ಮೃತಪಟ್ಟಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+