ಕೇರಳದಲ್ಲಿ ವಲಸೆ ಕಾರ್ಮಿಕರ ಗಲಾಟೆ, ಇಬ್ಬರು ಪೊಲೀಸರಿಗೆ ಗಾಯ

ತಿರುವನಂತಪುರಂ, ಮೇ 11: ಕೇರಳ ಪೊಲೀಸರು ಮೇಲೆ ವಲಸೆ ಕಾರ್ಮಿಕರು ಕಲ್ಲು ತೂರಾಟ ನಡೆಸಿರುವ ಘಟನೆ ಭಾನುವಾರ ನಡೆದಿದ್ದು, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.

ಕೇರಳದ ಒರುವತಿಲ್ಕೋಟ ಬಳಿ ಸುಮಾರು 700 ಜನ ವಲಸೆ ಕಾರ್ಮಿಕರು ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಮಾಡಿ ಎಂದು ಪ್ರತಿಭಟನೆ ನಡೆಸಿದರು. ಹೆಚ್ಚು ಜನ ಜಮಾಯಿಸಿದ್ದರಿಂದ ಪೊಲೀಸರು ಅವರನ್ನು ಶಾಂತಗೊಳಿಸಲು ಮುಂದಾದರು. ಆದರೆ, ವಲಸೆ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ವಲಸೆ ಕಾರ್ಮಿಕರ ಕಲ್ಲು ತೂರಾಟದಿಂದ ಇಬ್ಬು ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸುಮಾರು 700 ಜನರು ಸೇರಿದ್ದರು. ಇವರೆಲ್ಲರೂ ಕಟ್ಟಡ ಕಾರ್ಮಿಕರು. ಮನೆಗೆ ಹೋಗಲು ರೈಲು ವ್ಯವಸ್ಥೆ ಮಾಡಿ ಎಂದು ಒತ್ತಾಯಿಸುತ್ತಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಆದರೆ, ಪೊಲೀಸರ ಮಾತು ಕೇಳದ ಕಾರ್ಮಿಕರು ಹಲ್ಲೆಗೆ ಮುಂದಾದರು ಎಂದು ಪೊಲೀಸ್ ಅಧಿಕಾರಿ.

2 Policemen Injured After Migrant Labourers Allegedly Pelted Stones

ನಂತರ ಹೆಚ್ಚಿನ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದ್ದಾರೆ. ಬಳಿಕ, ವಲಸೆ ಕಾರ್ಮಿಕರ ಮನವಿಯನ್ನು ಪೊಲೀಸರು ಸ್ವೀಕರಿಸಿ ಸಮಾಧಾನಪಡಿಸಿದರು.

ಪ್ರಸ್ತುತ ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದು, ಒಟ್ಟು 513 ಕೇಸ್ ದಾಖಲಾಗಿದೆ. ಅದರಲ್ಲಿ ಕೇವಲ 20 ಆಕ್ಟಿವ್ ಕೇಸ್ ಮಾತ್ರ ಬಾಕಿ ಇದೆ. ಉಳಿದ 489 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈವರೆಗೂ ನಾಲ್ಕು ಮಂದಿ ಮಾತ್ರ ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+