ಯೂಟ್ಯೂಬ್ ಚಾನೆಲ್ ಅನ್ನು 25 ಸಾವಿರ ಕೋಟಿಯ ಕಂಪೆನಿಯಾಗಿ ಪರಿವರ್ತಿಸಿದ ಯುವಕ!
ನವದೆಹಲಿ, ಮಾರ್ಚ್ 7: ಬಹಳಷ್ಟು ಯುವಕರು ತಮ್ಮದೇ ಆದ ಉದ್ಯಮ ಹುಟ್ಟುಹಾಕಲು ಬಯಸುತ್ತಾರೆ. ಇದೇ ರೀತಿ ಕನಸು ಕಂಡವರು ಗೌರವ್ ಮುಂಜಾಲ್. ದೂರದೃಷ್ಟಿಯುಳ್ಳ ಗೌರವ್ ಓರ್ವ ಶಿಕ್ಷಣತಜ್ಞ ಮತ್ತು ವಾಣಿಜ್ಯೋದ್ಯಮಿ.
ಗೌರವ್ ಅವರ ನವೀನ ಯೋಚನೆ ಮತ್ತು ತಂತ್ರಜ್ಞಾನದ ಪ್ರೀತಿಯು ಎಜ್ಯು- ಟೆಕ್ (ed-tech) ಪ್ಲಾಟ್ ಆಗಿರುವ "ಅನಾಕಾಡೆಮಿ"ಯನ್ನು ಪ್ರಾರಂಭಿಸಲು ಸಹಾಯ ಮಾಡಿತು. ತನ್ನದೇ ಆದ ಕಂಪನಿಯನ್ನು ಪ್ರಾರಂಭಿಸಲು ಕನಸು ಕಾಣುತ್ತಿದ್ದ ಗೌರವ್ ತನ್ನ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ನಂತರ 'ಫ್ಲಾಟ್‌ಚಾಟ್ ' ಅನ್ನು ಸ್ಥಾಪಿಸಿದರು.

ಇದೇ ವೇಳೆ ಅವರು ಸಾಫ್ಟ್‌ವೇರ್ ಇಂಜಿನಿಯರ್ ಆಗಿ "ಡೈರೆಕ್ಟಿ"ಯಲ್ಲಿ ಕೆಲಸ ಮಾಡುತ್ತಿದ್ದರು. ಡೈರೆಕ್ಟಿ ಮತ್ತು ಫ್ಲಾಟ್‌ಚಾಟ್ ಎರಡರಲ್ಲೂ ಕೆಲಸ ಮಾಡುತ್ತಿದ್ದಂತೆಯೇ ಗೌರವ್ ಅನಾಕಾಡೆಮಿ ಯೂಟ್ಯೂಬ್ ಚಾನೆಲ್ ಆರಂಭಿಸಿ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾರಂಭಿಸಿದರು. ಅವರು ಈ ವಿಡಿಯೋಗಳನ್ನು ತಮ್ಮ ಸ್ನೇಹಿತರಿಗೆ ತೋರಿಸಿದ್ದು, ಅವರ ಸ್ನೇಹಿತರು, ಪರಿಚಯದವರು ಅವರ ಪ್ರಯತ್ನಗಳಿಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದರು.
ಕೆಲವು ವರ್ಷಗಳ ಕಾಲ ತನ್ನ ಸ್ನೇಹಿತರಾಗಿದ್ದ ರೋಮನ್ ಸೈನಿಯೊಂದಿಗೆ ಕೆಲಸ ಮಾಡಿದ ನಂತರ ಗೌರವ್ ಅವರು ಯೂಟ್ಯೂಬ್ ಚಾನೆಲ್ ಅನ್ನು ಶೈಕ್ಷಣಿಕ ವೇದಿಕೆಯನ್ನಾಗಿ ಪರಿವರ್ತಿಸಲು ನಿರ್ಧರಿಸಿದರು. 2015 ರಲ್ಲಿ, ಹೇಮೇಶ್ ಸಿಂಗ್, ರೋಮನ್ ಸೈನಿ ಮತ್ತು ಸಚಿನ್ ಗುಪ್ತಾ ಅವರ ಜೊತೆ ಸೇರಿಕೊಂಡು ಗೌರವ್ ಅವರು "ಅನಾಕಾಡೆಮಿ" ಯನ್ನು ಸಹ-ಸ್ಥಾಪಿಸಿದರು ಈ ವೇದಿಕೆ ಮೂಲಕ ಅವರು UPSC, NEET, JEE ಮತ್ತು ಗೇಟ್‌ನಂತಹ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಅತ್ಯುತ್ತಮ ವಿಷಯಗಳ ಮಾಹಿತಿಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು.
1991 ರಲ್ಲಿ ಭಾರತದ ಮುಂಬೈನಲ್ಲಿ ಜನಿಸಿದ ಗೌರವ್ ಮುಂಜಾಲ್, NMIMS ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆಯುವ ಮೊದಲು ಜಮ್ನಾಬಾಯಿ ನರ್ಸೀ ಶಾಲೆಯಲ್ಲಿ ವ್ಯಾಸಂಗ ಮಾಡಿದರು. 12 ನೇ ತರಗತಿಯಲ್ಲಿ, ಅವರು ಕೋಡಿಂಗ್ ಕಲಿಕೆ ಆರಂಭಿಸಿದರು. ಜಾವಾ ಪ್ರೋಗ್ರಾಮಿಂಗ್ ಮತ್ತು ಇತರ ತಾಂತ್ರಿಕ ವಿಷಯಗಳಲ್ಲಿ ಬಗ್ಗೆ ಇತರರಿಗೆ ಮಾಹಿತಿ ಹಂಚಿಕೊಳ್ಳಲು ತಮ್ಮ ಮೊದಲ ಯೂಟ್ಯೂಬ್ ಚಾನೆಲ್ "ಅನಾಕಾಡೆಮಿ"ಯನ್ನು ರಚಿಸಿದರು. ಈ ಯೂಟ್ಯೂಬ್ ಚಾನೆಲ್ ವಿದ್ಯಾರ್ಥಿಗಳ ಸಮುದಾಯದಲ್ಲಿ ಶೀಘ್ರವಾಗಿ ಜನಪ್ರಿಯತೆಯನ್ನು ಗಳಿಸಿತು.
ಕ್ಷಿಪ್ರ ಬೆಳವಣಿಗೆಯೊಂದಿಗೆ, ಅನಾಕಾಡೆಮಿಯು ತಿಂಗಳುಗಳಲ್ಲಿಯೇ ಹೆಚ್ಚಿನ ಸಂಖ್ಯೆಯ ಬೋಧಕರು, ಶಿಕ್ಷಕರು, ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಅವರು 2022 ರಲ್ಲಿ ಅನಾಕಾಡೆಮಿ ಸಿಇಒ ಮುಂಜಾಲ್ ಅವರಿಗೆ 1.58 ಕೋಟಿ ರೂ. ಸಂಭಾವನೆ ಇದ್ದು ಅನಾಕಾಡೆಮಿಯ ಮೌಲ್ಯ 28000 ಕೋಟಿ ರೂ. ಹೆಚ್ಚಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications