ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲಪ್ರಳಯ: 100 ವರ್ಷದ ಮಳೆಗೆ ತತ್ತರಿಸಿದ ಆಸಿಸ್, ಜೀವ ಉಳಿಸಿಕೊಳ್ಳಲು ಜನರ ಹರಸಾಹಸ

|
Google Oneindia Kannada News

ಹವಾಮಾನ ವೈಪರಿತ್ಯದ ತೂಗುಗತ್ತಿ ಶ್ರೀಮಂತ ರಾಷ್ಟ್ರಗಳ ಮೇಲೂ ನೇತಾಡುತ್ತಿದೆ. ಅದರಲ್ಲೂ ಆಸ್ಟ್ರೇಲಿಯಾ ಪರಿಸ್ಥಿತಿ ರಣಭೀಕರ. ಕಳೆದವರ್ಷ ಭೀಕರ ಕಾಡ್ಗಿಚ್ಚು ಹಬ್ಬಿದ್ದರಿಂದ ತತ್ತರಿಸಿ ಹೋಗಿದ್ದ ಆಸ್ಟ್ರೇಲಿಯಾದಲ್ಲಿ ಈಗ ಭೀಕರ ಪ್ರವಾಹ ಸೃಷ್ಟಿಯಾಗಿದೆ. ಆಸ್ಟ್ರೇಲಿಯಾದ ಆಗ್ನೇಯ ಪ್ರದೇಶದಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಸಿಡ್ನಿ 100 ವರ್ಷಗಳಲ್ಲೇ ಅತ್ಯಂತ ದೊಡ್ಡ ಪ್ರವಾಹ ಸ್ಥಿತಿ ಎದುರಿಸುತ್ತಿದೆ.

ರಸ್ತೆ, ಮನೆ ಹೀಗೆ ಎಲ್ಲವೂ ನೀರಿನಲ್ಲಿ ಮುಳುಗಿ ಹೋಗಿವೆ. ಈಗಾಗಲೇ 20 ಸಾವಿರಕ್ಕೂ ಹೆಚ್ಚು ಜನರನ್ನ ಸ್ಥಳಾಂತರ ಮಾಡಲಾಗಿದೆ. 200ಕ್ಕೂ ಹೆಚ್ಚು ಶಾಲೆಗಳಿಗೆ ಬೀಗ ಹಾಕಿರುವ ಸ್ಥಳೀಯ ಸರ್ಕಾರ ಜನರ ಜೀವ ಕಾಪಾಡಲು ಹಗಲಿರುಳು ಶ್ರಮಿಸುತ್ತಿದೆ.

2044ರ ವೇಳೆಗೆ ಭೂಮಿ ಮುಳುಗಿ ಹೋಗುತ್ತಾ..? ವಿಜ್ಞಾನಿಗಳು ಕೊಟ್ಟಿದ್ದಾರೆ ವಾರ್ನಿಂಗ್..!2044ರ ವೇಳೆಗೆ ಭೂಮಿ ಮುಳುಗಿ ಹೋಗುತ್ತಾ..? ವಿಜ್ಞಾನಿಗಳು ಕೊಟ್ಟಿದ್ದಾರೆ ವಾರ್ನಿಂಗ್..!

ಆದರೆ ಮಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ, ಹೀಗಾಗಿ ಜನರನ್ನ ಸ್ಥಳಾಂತರ ಮಾಡುವುದೇ ಉತ್ತಮವೆಂದು ಆಸ್ಟ್ರೇಲಿಯಾ ಸರ್ಕಾರ ನಿರ್ಧರಿಸಿದೆ. ಆಸ್ಟ್ರೇಲಿಯಾದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನ್ಯೂಸೌತ್ ವೇಲ್ಸ್‌ ಸ್ಟೇಟ್‌ಗೆ ಇಂತಹ ಸ್ಥಿತಿ ಬಂದಿರುವುದು ಕೊರೊನಾ ನಡುವೆ ಬರೆ ಎಳೆದಂತಾಗಿದೆ. ಅದರಲ್ಲೂ ಪಶ್ಚಿಮ ಸಿಡ್ನಿ ಭಾಗದಲ್ಲಿನ ವರಗಾಂಬ ಡ್ಯಾಂ ತುಂಬಿ ಹರಿದಿದ್ದು ಜಲಪ್ರಳಯದ ಮುನ್ಸೂಚನೆ ಸಿಕ್ಕಿದೆ.

100 ವರ್ಷಕ್ಕೊಮ್ಮೆ ಹೀಗೆ ಆಗುತ್ತೆ..!

100 ವರ್ಷಕ್ಕೊಮ್ಮೆ ಹೀಗೆ ಆಗುತ್ತೆ..!

ದ್ವೀಪರಾಷ್ಟ್ರ ಆಸ್ಟ್ರೇಲಿಯಾದಲ್ಲಿ ಪ್ರತಿ 100 ವರ್ಷಗಳಿಗೊಮ್ಮೆ ಇಂತಹ ಪ್ರವಾಹ ಮಾಮೂಲಿಯಂತೆ. ತಜ್ಞರು ಹೇಳುವಂತೆ, 100 ವರ್ಷಗಳಿಗೊಮ್ಮೆ ಆಸ್ಟ್ರೇಲಿಯಾ ಇಂತಹ ಭೀಕರ ಪ್ರವಾಹ ಎದುರಿಸುತ್ತದೆ. ಆದರೆ ಸದ್ಯಕ್ಕೆ ಪರಿಸ್ಥಿತಿ ಕೈಮೀರಿ ಹೋಗಿದೆ. ಹಿಂದೆಂದೂ ಕಾಣದಂತಹ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದೆ ಎನ್ನುತ್ತಿದ್ದಾರೆ ತಜ್ಞರು. ಅದರಲ್ಲೂ ಪಶ್ಚಿಮ ಸಿಡ್ನಿಯ ಕೆಲ ಭಾಗಗಳಲ್ಲಿ ಪ್ರತಿ 50 ವರ್ಷಕ್ಕೊಮ್ಮೆ ಹವಾಮಾನದಲ್ಲಿ ಏರುಪೇರು ಗ್ಯಾರಂಟಿ ಎಂಬಂತಾಗಿದೆ. ಸಿಡ್ನಿಯ ಕೆಲವು ಸ್ಥಳಗಳಲ್ಲಿ 300 ಮಿಲಿ ಮೀಟರ್ ಮಳೆಯಾಗಿದ್ದು ಮಹಾಮಳೆಯ ಅಬ್ಬರಕ್ಕೆ ಹಿಂದಿನ ದಾಖಲೆಗಳು ಅಳಿಸಿ ಹೋಗಿವೆ.

ಕೊಳಕು ಮಂಡಲ ಹಾವಿನ ಕಾಟ..!

ಕೊಳಕು ಮಂಡಲ ಹಾವಿನ ಕಾಟ..!

ದ್ವೀಪರಾಷ್ಟ್ರ ಆಸ್ಟ್ರೇಲಿಯಾದ ಸಾಕಷ್ಟು ಪ್ರದೇಶ ಮರುಭೂಮಿಯನ್ನೇ ಹೊಂದಿದೆ. ಹೀಗಾಗಿ ವಿಷ ಜಂತುಗಳ ಕಾಟ ಹೇಳತೀರದು. ಅದರಲ್ಲೂ ಕೊಳಕ ಮಂಡಲ ಜಾತಿಗೆ ಸೇರುವ ವೈಪರ್ ಸ್ನೇಕ್‌ಗಳ ಅಬ್ಬರ ಜೋರಾಗೇ ಇರುತ್ತದೆ. ಒಂದು ಲೆಕ್ಕದಲ್ಲಿ ವೈಪರ್ ಸ್ನೇಕ್‌ಗಳ ಅಡ್ಡೆಯಾಗಿದೆ ಆಸ್ಟ್ರೇಲಿಯಾ. ಆದರೆ ಇದೀಗ ಎಡಬಿಡದೆ ಮಳೆ ಸುರಿದು ಪ್ರವಾಹ ಉಂಟಾಗಿರುವ ಕಾರಣ ಹಾವುಗಳು ಮನೆಗೆ ನುಗ್ಗುತ್ತಿವೆ. ಅದರಲ್ಲೂ ಜಗತ್ತಿ ಮಹಾನ್ ವಿಷಕಾರ ಎಂದು ಹೆಸರು ಪಡೆದಿರುವ ವೈಪರ್ ಸ್ನೇಕ್‌ಗಳು ಮನೆಯೊಳಗೆ ನುಗ್ಗುತ್ತಿವೆ. ಜನ ವಾಪಸ್ ಬಂದ ನಂತರ ಕೂಡ ಮನೆಯಲ್ಲಿ ಹರಸಾಹಸ ಗ್ಯಾರಂಟಿ.

ತುಂಬಿ ಹರಿಯುತ್ತಿವೆ ನದಿಗಳು..!

ಹೌದು, ಮೊದಲೇ ಹೇಳಿದಂತೆ ಆಸ್ಟ್ರೇಲಿಯಾ ಮರುಭೂಮಿ ಪ್ರದೇಶವನ್ನು ಹೆಚ್ಚಾಗಿ ಹೊಂದಿದೆ. ಹೀಗಾಗಿ ಅಲ್ಲಿ ಹರಿಯುವ ನದಿಗಳ ಪ್ರಮಾಣ ಕಡಿಮೆ. ಅದರಲ್ಲೂ ಸಿಡ್ನಿ ಸುತ್ತ ವಿಶಾಲವಾಗಿ ಚಾಚಿಕೊಂಡಿರುವ ಹಾಕ್ಸ್‌ಬರಿ-ನೇಪಿಯನ್ ಕಣಿವೆ ಮತ್ತು ನದಿಗಳು ಸುಮಾರು 60 ವರ್ಷದಲ್ಲಿ ಕಾಣದ ನಿರನ್ನು ಕಾಣುತ್ತಿವೆ. ನದಿಗಳ ಉಕ್ಕಿ, ಉಕ್ಕಿ ಹರಿಯುತ್ತಿವೆ. ಸಿಡ್ನಿ ಸಿಟಿಗೆ ಕುಡಿಯುವ ನೀರಿನ ಮೂಲವಾದ ವರಗಾಂಬ ಡ್ಯಾಂ ತುಂಬಿ ಹರಿಯುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಮಳೆ ಮತ್ತಷ್ಟು ಹೆಚ್ಚು ಸಾಧ್ಯತೆ ಇದ್ದು, ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಆದಷ್ಟು ಬೇಗ ಖಾಲಿ ಮಾಡಿಸಬೇಕಿದೆ.

ಈ ಹಿಂದೆ ಕಾಡ್ಗಿಚ್ಚಿನ ಅಬ್ಬರ..!

2019ರಲ್ಲಿ ಆಸ್ಟ್ರೇಲಿಯಾದಲ್ಲಿ ಹೊತ್ತಿದ್ದ ಕಾಡ್ಗಿಚ್ಚು ಹಲವು ತಿಂಗಳುಗಳ ಕಾಲ ಉರಿದಿತ್ತು. ಹತ್ತಾರು ಲಕ್ಷ ಎಕರೆ ಕಾಡು ಭಸ್ಮವಾಗಿ, ಕಾಂಗರೂ ನಾಡಲ್ಲಿ ಲೆಕ್ಕವಿಲ್ಲದಷ್ಟು ಜೀವ ಸಂಕುಲ ನಾಶವಾಗಿತ್ತು. ಲಕ್ಷಾಂತರ ಜನ ಮನೆ, ಆಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇನ್ನೂ ಆ ಪರಿಸ್ಥಿತಿಯೇ ಸರಿ ಹೋಗಿಲ್ಲ. ಅಷ್ಟರಲ್ಲೇ ಮಹಾಭೀಕರ ಮಳೆ ಅಪ್ಪಳಿಸಿದೆ. ಕೊರೊನಾ ಕಾರಣಕ್ಕೂ ಸಮಸ್ಯೆಗೆ ಸಿಲುಕಿದ್ದ ಜನ ಪ್ರವಾಹದಿಂದ ಜೀವ ಉಳಿಸಿಕೊಳ್ಳೋಕೆ ದಿಕ್ಕಾಪಾಲಾಗಿ ಓಡುವಂತಾಗಿದೆ. ಸಂತ್ರಸ್ತರಿಗಾಗಿ 13 ಕಡೆಗಳಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ.

English summary
After heavy rain, Australia’s New South Wales state facing flood situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X