• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು ಮತ್ತು ಕಾಶ್ಮೀರ; ಬಿಜೆಪಿ ನಾಯಕನ ಮೇಲೆ ಗುಂಡಿನ ದಾಳಿ

|
Google Oneindia Kannada News

ಶ್ರೀನಗರ, ಆಗಸ್ಟ್ 09: ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ನಾಯಕನ ಮೇಲೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ನಾಯಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬುದ್ಗಂ ಜಿಲ್ಲೆಯಲ್ಲಿ ಅಬ್ದುಲ್ ಹಮೀದ್ ನಜರ್ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ನಜರ್ ಬುದ್ಗಂನ ಒಬಿಸಿ ಮೋರ್ಚಾದ ಅಧ್ಯಕ್ಷರು ಎಂದು ತಿಳಿದುಬಂದಿದೆ.

ಜಮ್ಮು-ಕಾಶ್ಮೀರ ಲೆ.ಗವರ್ನರ್ ಗಿರೀಶ್ ಚಂದ್ರ ಮುರ್ಮು ರಾಜೀನಾಮೆ ಜಮ್ಮು-ಕಾಶ್ಮೀರ ಲೆ.ಗವರ್ನರ್ ಗಿರೀಶ್ ಚಂದ್ರ ಮುರ್ಮು ರಾಜೀನಾಮೆ

"ಅಬ್ದುಲ್ ಹಮೀದ್ ನಜರ್ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಭಯೋತ್ಪಾದಕರು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ" ಎಂದು ಬುದ್ಗಂ ಪೊಲೀಸರು ಹೇಳಿದ್ದಾರೆ.

ರಾಮನ ಕುರಿತು ಪ್ರಿಯಾಂಕಾ ಹೇಳಿಕೆ 'ಐತಿಹಾಸಿಕ ಯೂಟರ್ನ್' ಎಂದ ಬಿಜೆಪಿರಾಮನ ಕುರಿತು ಪ್ರಿಯಾಂಕಾ ಹೇಳಿಕೆ 'ಐತಿಹಾಸಿಕ ಯೂಟರ್ನ್' ಎಂದ ಬಿಜೆಪಿ

ಗುಂಡಿನ ದಾಳಿಯಿಂದ ಗಾಯಗೊಂಡಿರುವ ಅಬ್ದುಲ್ ಹಮೀದ್ ನಜರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಅಯೋಧ್ಯೆ ಭೂಮಿ ಪೂಜೆಗೆ ಹೋಗಲ್ಲ: ಬಿಜೆಪಿ ನಾಯಕಿ ಉಮಾ ಭಾರತಿ ಅಯೋಧ್ಯೆ ಭೂಮಿ ಪೂಜೆಗೆ ಹೋಗಲ್ಲ: ಬಿಜೆಪಿ ನಾಯಕಿ ಉಮಾ ಭಾರತಿ

3ನೇ ದಾಳಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ನಾಯಕರ ಮೇಲೆ ನಡೆಯುತ್ತಿರುವ 3ನೇ ಗುಂಡಿನ ದಾಳಿ ಇದಾಗಿದೆ.

ಕುಲಗಾಮ್ ಜಿಲ್ಲೆಯಲ್ಲಿ ಗುರುವಾರ ಬಿಜೆಪಿ ನಾಯಕರೊಬ್ಬರ ಮೇಲೆ ಗುಂಡಿನ ದಾಳಿ ನಡೆದಿತ್ತು. ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ ಮತ್ತು ಗ್ರಾಮದ ಸರ್ ಪಂಚ್ ಸಾಜದ್ ಅವರು ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದರು.

ಮಂಗಳವಾರ ಕುಲಗಾಮ್ ಗ್ರಾಮದ ಬಿಜೆಪಿ ನಾಯಕ ಅರಿಫ್ ಅಹ್ಮದ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

English summary
Unknown persons fired upon BJP Other Backward Class (OBC) Morcha president Abdul Hamid Najar at Budgam district, Jammu And Kashmir. He has been shifted to a hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X