Breaking; ಜಮ್ಮು & ಕಾಶ್ಮೀರದಲ್ಲಿ 3 ದಿನದಲ್ಲಿ 10 ಉಗ್ರರ ಹತ್ಯೆ
ಶ್ರೀನಗರ, ಮೇ 27; ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್ ಎ ತೋಯ್ಬಾ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಳೆದ 3 ದಿನಗಳಲ್ಲಿ 10 ಉಗ್ರರನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ.
ಗುರುವಾರ ರಾತ್ರಿ ಶ್ರೀನಗರದ ಸೌರ್ ಪ್ರದೇಶ ಮತ್ತಯ ಅವಂತಿಪುರ್‌ನಲ್ಲಿ ಎರಡು ಪ್ರತ್ಯೇಕ ಎನ್‌ಕೌಂಟರ್ ನಡೆಸಿದೆ. ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಸೇನೆ ದಾಳಿ ಮಾಡಿದೆ. ಈ ಎನ್‌ಕೌಂಟರ್‌ನಲ್ಲಿ ಲಷ್ಕರ್ ಎ ತೋಯ್ಬಾದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.
"ಹತ್ಯೆಯಾದ ಲಷ್ಕರ್ ಎ ತೋಯ್ಬಾ ಉಗ್ರರು ಕಿರುತರೆ ನಟಿ ಅಮ್ರಿನ್ ಭಟ್ ಹತ್ಯೆ ಮಾಡಿದ್ದರು. ಎನ್‌ಕೌಂಟರ್ ಬಳಿಕ ಉಗ್ರರಿಂದ ಎಕೆ 47 ಬಂದೂಕು, ಪಿಸ್ತೂಲ್ ಸೇರಿದಂತೆ ಅನೇಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ" ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.

"ಗುರುವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಮೂರು ದಿನದಲ್ಲಿ 10 ಉಗ್ರರನ್ನು ಹತ್ಯೆ ಮಾಡಲಾಗಿದೆ. ಇವರಲ್ಲಿ ಲಷ್ಕರ್ ಎ ತೋಯ್ಬಾದ 7 ಮತ್ತು ಜೈಷ್-ಎ-ಮೊಹಮ್ಮದ್‌ನ 3 ಉಗ್ರರು ಸೇರಿದ್ದಾರೆ" ಎಂದು ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.











Click it and Unblock the Notifications