ಹಿಮದ ಮೇಲೆ ಜಾರಿಕೊಂಡು ಪಾಕಿಸ್ತಾನ ತಲುಪಿದ ಭಾರತೀಯ ಸೈನಿಕ
Recommended Video
ಶ್ರೀನಗರ, ಜನವರಿ 15: ಗಡಿ ರಕ್ಷಣೆ ಕಾರ್ಯದಲ್ಲಿದ್ದಾಗ ಆಕಸ್ಮಿಕವಾಗಿ ಹಿಮದ ಮೇಲೆ ಜಾರಿಕೊಂಡು ಪಾಕಿಸ್ತಾನ ಸೇರಿಬಿಟ್ಟಿದ್ದಾನೆ ಭಾರತದ ಸೈನಿಕ.
ರಾಜೇಂದ್ರ ಸಿಂಗ್ ನೇಗಿ ಎಂಬ ಸೈನಿಕ ಜಮ್ಮು ಕಾಶ್ಮೀರದ ಗುಲ್‌ಮರ್ಗ್ ಎಂಬಲ್ಲಿ ಗಡಿ ರಕ್ಷಣೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ಎಂದಿನಂತೆ ಕರ್ತವ್ಯ ಮಾಡುತ್ತಿರುವಾಗ ಆಕಸ್ಮಿಕವಾಗಿ ಹಿಮದ ಮೇಲೆ ಕಾಲು ಜಾರಿ, ಜಾರುತ್ತಲೇ ಸಾಗಿ ಪಾಕಿಸ್ತಾನದ ಭೂ ಪ್ರದೇಶ ಸೇರಿದ್ದಾರೆ.
ರಾಜೇಂದ್ರ ಸಿಂಗ್ ನೇಗಿ ಭಾರತೀಯ ಸೈನ್ಯದೊಂದಿಗೆ ಸಂಪರ್ಕ ಕಡಿದುಕೊಂಡಿದ್ದು, ಆತನಿಗಾಗಿ ಸೇನೆಯು ಹುಡುಕಾಟ ನಡೆಸಿದೆ.

ದೆಹ್ರಾದೂನ್ ನವರಾಗಿರುವ ಸೈನಿಕ ನೇಗಿ 2002 ರಲ್ಲಿ ಸೈನ್ಯಕ್ಕೆ ಸೇರಿದ್ದರು. ಅವರನ್ನು ಭಾರತ-ಪಾಕಿಸ್ತಾನ ಗಡಿ ಪ್ರದೇಶ ಗುಲ್‌ಮರ್ಗ್ ಗೆ ಕಳೆದ ನವೆಂಬರ್ ನಲ್ಲಿ ನಿಯೋಜಿಸಲಾಗಿತ್ತು. ನೇಗಿ ತಮಗೆ ಸಿಕ್ಕಿರುವ ಬಗ್ಗೆ ಪಾಕಿಸ್ತಾನ ಸೈನ್ಯ ಯಾವುದೇ ಮಾಹಿತಿ ನೀಡಿಲ್ಲ.
2016 ರ ಸರ್ಜಿಕಲ್ ಸ್ಟ್ರೈಕ್ ವೇಳೆ ಸಹ ಒಬ್ಬ ಸೈನಿಕ ಆಕಸ್ಮಿಕವಾಗಿ ಪಾಕಿಸ್ತಾನ ಗಡಿ ಪ್ರವೇಶಿಸಿದ್ದ, ನಂತರ ಆತನನ್ನು ಬಿಡಿಸಿಕೊಂಡು ಬರಲಾಗಿತ್ತು. ನಂತರ ವಾಯುಸೇನೆಯ ಅಭಿನಂದನ್ ವರ್ದಮಾನ್ ಸಹ ಪಾಕ್ ಯುದ್ಧವಿಮಾನವನ್ನು ಹಿಮ್ಮೆಟ್ಟುವ ವೇಳೆ ಅಚಾನಕ್ಕಾಗಿ ಪಾಕಿಸ್ತಾನ ಗಡಿ ಪ್ರವೇಶಿಸಿದ್ದರು.












Click it and Unblock the Notifications