ಶೋಪಿಯಾನ್‌ನಲ್ಲಿ ಎರಡು ಎನ್‌ಕೌಂಟರ್‌: 5 ಭಯೋತ್ಪಾದಕರನ್ನು ಸದೆಬಡಿದ ಭದ್ರತಾ ಪಡೆ

ಜಮ್ಮು ಮತ್ತು ಕಾಶ್ಮೀರ ಅಕ್ಟೋಬರ್ 12 : ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)-ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನೊಂದಿಗೆ ಸಂಪರ್ಕ ಹೊಂದಿದ ಒಟ್ಟು ಐದು ಭಯೋತ್ಪಾದಕರು ಮಂಗಳವಾರ ಜಮ್ಮು & ಕಾಶ್ಮೀರದ ಶೋಪಿಯಾನ್‌ನಲ್ಲಿ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ ಹತ್ಯೆಗೀಡಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ತುಲ್ರಾನ್ ಗ್ರಾಮದಲ್ಲಿ ಸೋಮವಾರ ರಾತ್ರಿ ಭಯೋತ್ಪಾದಕರು ಶೋಧ ಕೂಟದಲ್ಲಿ ಗುಂಡಿನ ದಾಳಿ ನಡೆಸಿದ ಬೆನ್ನಲ್ಲೆ ಮೊದಲ ಎನ್‌ಕೌಂಟರ್‌ ಸಂಭವಿಸಿದೆ. ಆ ಸಮಯದಲ್ಲಿ ಸೇನೆಯ ಜಂಟಿ ತಂಡವಾದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಎಫ್) 178 ಬೆಟಾಲಿಯನ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಹತ್ಯೆಗೀಡಾದ ಮೂವರು ಭಯೋತ್ಪಾದಕರ ಪೈಕಿ ಒಬ್ಬ ಭಯೋತ್ಪಾದಕನನ್ನು ಗಂದರ್ಬಾಲ್‌ನ ಮುಖ್ತಾರ್ ಶಾ ಎಂದು ಗುರುತಿಸಲಾಗಿದೆ. ಈತ ಬಿಹಾರದ ಬೀದಿ ವ್ಯಾಪಾರಿ ವೀರೇಂದ್ರ ಪಾಸ್ವಾನ್ ಅವರನ್ನು ಕೊಂದ ಆರೋಪಿಯಾಗಿದ್ದಾನೆ" ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.

Security forces gun down 5 terrorists in two back-to-back encounters in J&Ks Shopian

ಇತರ ಇಬ್ಬರು ಉಗ್ರರನ್ನು ರಾಯ್ ಕಪ್ರಾನಿನ ಡ್ಯಾನಿಶ್ ಅಹ್ಮದ್ ಮತ್ತು ಪೆಹ್ಲಿಪೊರಾ ಶೋಪಿಯಾನ್ ಅಹ್ಮದ್ ಎಂದು ಗುರುತಿಸಲಾಗಿದೆ.

ರಕ್ಷಣಾ ಸಚಿವಾಲಯದ (MoD) ಪತ್ರಿಕಾ ಹೇಳಿಕೆ ಪ್ರಕಾರ, ಭಯೋತ್ಪಾದಕರು ಭದ್ರತಾ ಪಡೆಗಳಿಂದ ಅವರಿಗೆ ನೀಡಲಾದ ಶರಣಾಗತಿಯ ಪ್ರಸ್ತಾಪವನ್ನು ತಿರಸ್ಕರಿಸಿದ ಬಳಿಕ ಎನ್‌ಕೌಂಟರ್‌ ನಡೆದಿದೆ. ಎನ್‌ಕೌಂಟರ್‌ ಬಳಿಕ ಭಯೋತ್ಪಾದಕರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಯುದ್ಧೋಚಿತ ಮಳಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ಶೋಪಿಯಾನ್ ಫೆರಿ ಪೋರಾ ಪ್ರದೇಶದ ಶೋಧನ ತಂಡದ ಮೇಲೆ ಗುಂಡು ಹಾರಿಸಿ ಮತ್ತಿಬ್ಬರು ಉಗ್ರರನ್ನು ಭದ್ರತಾ ಪಡೆಗಳು ಎರಡನೇ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿವೆ. ಕಳೆದ 30 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಐದನೇ ಎನ್‌ಕೌಂಟರ್‌ ಇದಾಗಿದೆ.

ಸೋಮವಾರ ಮುಂಜಾನೆ ಬಂಡಿಪೋರಾ ಜಿಲ್ಲೆಯ ಗುಂಡ್ಜಹಾಂಗೀರ್ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು & ಕಾಶ್ಮೀರ ಪೋಲಿಸ್ ಜಂಟಿ ಕಾರ್ಯಾಚರಣೆಯ ಬಗ್ಗೆ ಹೇಳಿಕೆಯನ್ನು ಸಹ ಬಿಡುಗಡೆ ಮಾಡಿದೆ.

"ಕತ್ತಲೆ ಮತ್ತು ಭಾರೀ ಮಳೆಯ ಪರಿಸ್ಥಿತಿಗಳನ್ನು ಬಳಸಿಕೊಂಡು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಭಯೋತ್ಪಾದಕರು ಜಂಟಿ ಶೋಧ ಪಡೆಯ ಮೇಲೆ ಗುಂಡು ಹಾರಿಸಿದರು. ಗುಂಡಿನ ದಾಳಿಗೆ ಪ್ರತಿದಾಳಿ ಮಾಡಿದ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಈತನನ್ನು ಹೊಸದಾಗಿ ನೇಮಕಗೊಂಡ ಭಯೋತ್ಪಾದಕ ಎಂದು ಗುರುತಿಸಲಾಯಿತು. ಈತನ್ನು ಇಮ್ತಿಯಾಜ್ ಅಹಮದ್ ದಾರ್ ಶಹಗುಂಡದ ಭಗತ್ ಮೊಹಲ್ಲಾ ನಿವಾಸಿ ಎಂದು ಗುರುತಿಸಲಾಗಿದೆ. ಇಮ್ತಿಯಾಜ್ ಅಹ್ಮದ್ ದಾರ್ ಮತ್ತು ಇತರ ನಾಲ್ಕು ಭಯೋತ್ಪಾದಕ ಸಹಚರರು ಪಾಕಿಸ್ತಾನದ ಭಯೋತ್ಪಾದಕ ನಿರ್ವಾಹಕರಾದ ಲಾಲಾ ಒಮರ್ ನಿಂದ ಸ್ಥಳೀಯರಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸುವ ಉದ್ದೇಶದಿಂದ ಸಂಚಲನಕಾರಿ ದಾಳಿಗಳನ್ನು ನಡೆಸಿದ್ದರು. 05 ಅಕ್ಟೋಬರ್ 21 ರಂದು ಕಣಿವೆಯಲ್ಲಿ ನಾಗರಿಕರ ಮೇಲೆ ಸರಣಿ ದಾಳಿ ನಡೆಸಲು ಸಂಚು ರೂಪಿಸಿದ್ದರು" ಎಂದು ಭದ್ರತಾ ತಂಡ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+