• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮುವಿನಲ್ಲಿ ಆಗಸ್ಟ್ 10ರಿಂದ ಶಾಲೆ- ಕಾಲೇಜು ಆರಂಭ

|

ಜಮ್ಮು, ಆಗಸ್ಟ್ 9: ಸಿಆರ್ ಪಿಸಿ 144ರ ಅಡಿಯಲ್ಲಿ ಜಮ್ಮು ಜಿಲ್ಲಾಡಳಿತ ಹೇರಿದ್ದ ನಿರ್ಬಂಧವನ್ನು ಶುಕ್ರವಾರ ಹಿಂಪಡೆಯಲಾಗಿದೆ ಹಾಗೂ ಶನಿವಾರದಿಂದ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸುವಂತೆ ಆದೇಶ ನೀಡಲಾಗಿದೆ. ಜಮ್ಮುವಿನ ಸಬ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್/ ಡೆಪ್ಯೂಟಿ ಕಮಿಷನರ್ ಮಾತನಾಡಿ, ಸೆಕ್ಷನ್ 144ರ ಅಡಿ ನಿರ್ಬಂಧ ಹಿಂಪಡೆಯಲಾಗಿದೆ. ಆಗಸ್ಟ್ 10ರಿಂದ ಎಲ್ಲ ಶಾಲೆ- ಕಾಲೇಜು ಆರಂಭವಾಗಲಿದೆ ಎಂದಿದ್ದಾರೆ.

ಜಮ್ಮು ವಿಶ್ವವಿದ್ಯಾಲಯದ ವಕ್ತಾರ ಮಾತನಾಡಿ, ಪ್ರವೇಶಾತಿ ವಿವರ, ತರಗತಿ ಮಾಹಿತಿ ಹಾಗೂ ಪರೀಕ್ಷೆಗಳ ಬಗ್ಗೆ ವಿಚಾರಗಳನ್ನು ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದಿದ್ದಾರೆ.

ಜಮ್ಮು- ಕಾಶ್ಮೀರಲ್ಲಿ ಫೋನ್, ಇಂಟರ್ ನೆಟ್ ಸೇವೆ ಭಾಗಶಃ ಪುನರಾರಂಭ

ಆಗಸ್ಟ್ ಐದರಂದು ಜಮ್ಮು ಜಿಲ್ಲೆಯಲ್ಲಿ ಸೆಕ್ಷನ್ 144 ಹೇರಲಾಗಿತ್ತು. ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದು, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಲಾದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಸಾಂಬಾ, ಕತುವಾ, ಉಧಂಪುರ್, ರಿಯಾಸಿಯಲ್ಲಿ ಶಾಲೆಗಳು ಆರಂಭ ಆಗಲಿದೆ. ನಿರ್ಬಂಧವನ್ನು ಹಿಂಪಡೆದ ಮೇಲೆ ವಾಣಿಜ್ಯ ವಾಹನಗಳು ರಸ್ತೆಗಿಳಿಯಲಿವೆ.

English summary
Crpc section 144 will lift in Jammu and school- colleges open from August 10th. Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X