• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

370 ನೇ ವಿಧಿ ರದ್ದು: ಸರ್ಕಾರದ್ದು ದಿಟ್ಟ ಹೆಜ್ಜೆ ಎಂದ ಆರೆಸ್ಸೆಸ್

|

ಶ್ರೀನಗರ, ಆಗಸ್ಟ್ 05: ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಡೆಯನ್ನು ದಿಟ್ಟ ಹೆಜ್ಜೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಬಣ್ಣಿಸಿದೆ.

ಅಮಿತ್ ಶಾ ಮಂಡಿಸಿದ ವಿಧೇಯಕಕ್ಕೆ ಮಾಯಾವತಿಯ ಬಿಎಸ್ಪಿ ಬೆಂಬಲಅಮಿತ್ ಶಾ ಮಂಡಿಸಿದ ವಿಧೇಯಕಕ್ಕೆ ಮಾಯಾವತಿಯ ಬಿಎಸ್ಪಿ ಬೆಂಬಲ

"ಇದು ಜಮ್ಮು ಮತ್ತು ಕಾಶ್ಮೀರದ ಜನರ ಹಿತಾಸಕ್ತಿ ಮತ್ತು ಇಡೀ ದೇಶದ ಒಳಿತಿನ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಸ್ವಾರ್ಥ ಉದ್ದೇಶ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನೆಲ್ಲ ಬದಿಗಿಟ್ಟು ಎಲ್ಲರೂ ಈ ನಡೆಯನ್ನು ಬೆಂಬಲಿಸಬೇಕಿದೆ" ಎಂದು ಆರೆಸ್ಸೆಸ್ ಹೇಳಿದೆ.

ಇದೆಂಥ ಪುಂಡಾಟ? ಸಂಸತ್ತಿನಲ್ಲೇ ಸಂವಿಧಾನದ ಪ್ರತಿ ಹರಿದ ಸಂಸದರು!ಇದೆಂಥ ಪುಂಡಾಟ? ಸಂಸತ್ತಿನಲ್ಲೇ ಸಂವಿಧಾನದ ಪ್ರತಿ ಹರಿದ ಸಂಸದರು!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದು, ಈ ಮಸೂದೆಯನ್ನು ಗೃಹಸಚಿವ ಅಮಿತ್ ಶಾ ಮಂಡಿಸಿದರು. ಇದಕ್ಕೆ ರಾಷ್ಟ್ರಪತಿಗಳ ಅಂಕಿತವೂ ದೊರಕಿದ್ದು, ಸಾಕಷ್ಟು ಪರವಿರೋಧದ ಚರ್ಚೆ ಎದ್ದಿದೆ.

ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ

ಕೇಂದ್ರ ಸರ್ಕಾರದ ನಡೆಯನ್ನು ಅಚ್ಚರಿಯ ರೀತಿಯಲ್ಲಿ ಕೆಲವು ವಿಪಕ್ಷ ನಾಯಕರೇ ಬೆಂಬಲಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅವರವಿಂದ್ ಕೇಜ್ರಿವಾಲ್, ಬಿಎಸ್ಪಿ ನಾಯಕಿ ಮಾಯಾವತಿ ಮತ್ತು ಬಿಜೆಡಿ ನಾಯಕರು ಈ ನಡೆಯನ್ನು ಬೆಂಬಲಿಸಿದ್ದು ಈ ನಿರ್ಧಾರದಲ್ಲಿ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ.

English summary
Rashtriya Swayamsevak Sangh on resolution revoking Article 370 from J&K: We welcome the courageous step by govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X