ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಂಬನ್ ಸುರಂಗ ಕುಸಿತ: ರಕ್ಷಣಾ ಕಾರ್ಯಾಚರಣೆ ಪುನರಾರಂಭ

|
Google Oneindia Kannada News

ಶ್ರೀನಗರ ಮೇ 21: ಕಾಶ್ಮೀರದ ರಾಂಬನ್ ಜಿಲ್ಲೆಯ ಮೇಕರ್‌ಕೋಟೆ ಪ್ರದೇಶದ ಖೂನಿ ನಾಲಾದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗ (ಮೇ 20) ಕುಸಿದುಬಿದ್ದ ಪರಿಣಾಮ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಒಂಬತ್ತು ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಶನಿವಾರ (ಮೇ 21) ಮುಂಜಾನೆ ಪುನರಾರಂಭವಾಯಿತು.

ಸುರಂಗ ಕುಸಿದು ಬಿದ್ದ ಸ್ಥಳದಲ್ಲಿಯೇ ಹೊಸ ಭೂಕುಸಿತದ ನಂತರ ತ್ವರಿತ ರಕ್ಷಣೆ ನಡೆದಿಲ್ಲವೆಂದು ಸ್ಥಳೀಯರು ಅಧಿಕಾರಿಗಳನ್ನು ಅಮಾನತ್ತಿಗೆ ಒತ್ತಾಯಿಸಿದ್ದಾರೆ. ಆದರೆ ನಿನ್ನೆ ಸಂಜೆ ಪ್ರಕ್ರಿಯೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ramban tunnel collapse: restarting rescue operations

ಗುರುವಾರ (ಮೇ 19) ರಾತ್ರಿ 10.15ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಖೂನಿನಲ್ಲ ಸಮೀಪ ಹೆದ್ದಾರಿಯಲ್ಲಿ ಟಿ 3 ನ ಆಡಿಟ್ ಸುರಂಗವು ಕಾಮಗಾರಿಯ ಪ್ರಾರಂಭದಲ್ಲಿ ಕುಸಿದುಬಿದ್ದು ಒಬ್ಬ ಕಾರ್ಮಿಕ ಮೃತಪಟ್ಟು ಇತರ ಮೂವರನ್ನು ರಕ್ಷಿಸಲಾಗಿದೆ. ಮೃತ ಕಾರ್ಮಿಕನನ್ನು ಪಶ್ಚಿಮ ಬಂಗಾಳ ಮೂಲದ ಸುಧೀರ್ ರಾಯ್ (31) ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಆದರೆ ಇದರಲ್ಲಿ ಇನ್ನೂ ಕೆಲ ಕಾರ್ಮಿಕರು ಸಿಲುಕಿದ್ದಾರೆನ್ನುವ ಶಂಕೆ ಮೇರೆಗೆ ರಕ್ಷಣೆ ಕಾರ್ಯಚರಣೆ ನಡೆದಿತ್ತು. ಆದರೆ ಈ ವೇಳೆ ಮತ್ತೆ ಸುರಂಗ ಕುಸಿದ ಕಾರಣ ಕಾರ್ಯಚರಣೆಗೆ ಅಡ್ಡಿಯಾಗಿತ್ತು. ರಕ್ಷಣಾ ಸಿಬ್ಬಂದಿಗಳು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಹೀಗಾಗಿ ನಿನ್ನೆ ರಕ್ಷಣಾ ಕಾರ್ಯಚರಣೆಯನ್ನು ನಿಲ್ಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ramban tunnel collapse: restarting rescue operations

"ಖೂನಿ ನಲ್ಲಾ ಅದಿತ್ ಸುರಂಗದ ಸ್ಥಳದಲ್ಲಿ ನಾಪತ್ತೆಯಾದ 09 ವ್ಯಕ್ತಿಗಳ ಪತ್ತೆ ಕಾರ್ಯಾಚರಣೆಯು ಅವಶೇಷಗಳೊಳಗೆ ಸಿಲುಕಿರುವ ಭಯದಿಂದ ಇಂದು (ಶನಿವಾರ) ಮುಂಜಾನೆ 5.30 ರಿಂದ ಪ್ರಾರಂಭವಾಯಿತು. ಇದು ನಿನ್ನೆಯಿಂದಲೂ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಕಾರ್ಯಾಚರಣೆಯ ಭಾಗವಾಗಿ ಮುಂದುವರೆದಿದೆ" ಎಂದು ರಾಂಬನ್‌ನ ಡೆಪ್ಯೂಟಿ ಕಮಿಷನರ್ ಮುಸ್ಸರತ್ ಇಸ್ಲಾಂ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ದುರಂತದ ಬಗ್ಗೆ ಇನ್ನಷ್ಟು ತಿಳಿಯಿರಿ:

ಶುಕ್ರವಾರ (ಮೇ 20) ಸಂಜೆ ರಾಮ್ಸು ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ನಯೀಮ್-ಉಲ್-ಹಕ್ ಸೇರಿದಂತೆ 15 ಕ್ಕೂ ಹೆಚ್ಚು ರಕ್ಷಕರು ಹೊಸ ಭೂಕುಸಿತದ ಸಮಯದಲ್ಲಿ ಸ್ವಲ್ಪಮಟ್ಟಿಗೆ ಪಾರಾಗಿದ್ದಾರೆ. ಇದು ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಪ್ರೇರೇಪಿಸಿತು. ಗುಡ್ಡದ ಮೇಲಿನ ಗುಂಡು ಕಲ್ಲುಗಳು, ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಇಂದು ಬೆಳಗ್ಗೆ ತನಕ ಅದನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸುರಂಗದಲ್ಲಿ ಬದುಕುಳಿಯುವ ಸಾಧ್ಯತೆಗಳು ಮಂಕಾಗಿವೆ.

English summary
operation to rescue nine workers who were trapped under the rubble of the tunnel (May 20) under construction in Khooni Nala in Makerkote area of ​​Kashmir's Ramban district resumed early on Saturday (May 21).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X