ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ಉಗ್ರದಾಳಿ: ಮತ್ತೆ 18 ಪ್ರತ್ಯೇಕತಾವಾದಿಗಳಿಗೆ ಆಘಾತ ನೀಡಿದ ಸರ್ಕಾರ

|
Google Oneindia Kannada News

Recommended Video

Pulwama : ಮತ್ತೆ 18 ಪ್ರತ್ಯೇಕತಾವಾದಿಗಳಿಗೆ ಆಘಾತ ನೀಡಿದ ಸರ್ಕಾರ | Oneindia Kannada

ಶ್ರೀನಗರ, ಫೆಬ್ರವರಿ 21: ಇತ್ತೀಚೆಗಷ್ಟೇ ಐವರು ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆಯನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ವಾಪಸ್ ಪಡೆದ ನಂತರ ಮತ್ತೀಗ 18 ಹುರಿಯತ್ ನಾಯಕರಿಗೆ ನೀಡಿದ್ದ ಭದ್ರತೆಯನ್ನೂ ವಾಪಸ್ ಪಡೆದಿದೆ.

ಜೊತೆಗೆ 155 ರಾಜಕಾರಣಿಗಳಿಗೆ ನೀಡಿದ್ದ ಭದ್ರತೆಯನ್ನೂ ವಾಪಸ್ ಪಡೆದಿದ್ದು, ಪಿಡಿಪಿ ಮುಖಂಡ ವಹೀದ್ ಪರ್ರಾ ಮತ್ತು ಐಎಎಸ್ ಅಧಿಕಾರಿ ಶಾ ಫೈಸರ್ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ.

ಪ್ರತ್ಯೇಕತಾವಾದಿ ನಾಯಕರ ಭದ್ರತೆಗೆ ಕೋಟಿ ಕೋಟಿ ಖರ್ಚುಪ್ರತ್ಯೇಕತಾವಾದಿ ನಾಯಕರ ಭದ್ರತೆಗೆ ಕೋಟಿ ಕೋಟಿ ಖರ್ಚು

Pulwama terror attack: JK administration withdraws security of 18 separatists

ಪ್ರತ್ಯೇಕತಾವಾದಿಗಳ ಭದ್ರತೆಗೆಂದೇ ಈಗಾಗಲೇ ಕೋಟಿ ಕೋಟಿ ರೂ ಖರ್ಚು ಮಾಡಲಾಗುತ್ತಿದೆ. ಅವರಿಗೆ ಭದ್ರತೆಯ ಅಗತ್ಯವಿಲ್ಲ. ಅಂದಮೇಲೆ ಈ ಹಣವನ್ನು ವ್ಯರ್ಥಮಾಡುವ ಅಗತ್ಯವಿಲ್ಲ ಎಂದು ಜಮ್ಮು-ಕಾಶ್ಮೀರ ಸರ್ಕಾರ ಅಭಿಪ್ರಾಯಪಟ್ಟಿದೆ.

ಭಾರತದಿಂದ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಪಾಕಿಸ್ತಾನಭಾರತದಿಂದ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಪಾಕಿಸ್ತಾನ

ಇತ್ತೀಚೆಗಷ್ಟೇ ಹುರಿಯತ್ ಮುಖಂಡರಾದ ಮೀರ್‌ವೈಜ್‌ ಉಮರ್ ಫಾರೂಕ್, ಪ್ರೊ. ಅಬ್ದುಲ್ ಗನಿ ಭಟ್, ಬಿಲಾಲ್ ಲೋನ್, ಜೆಕೆಎಲ್‌ಎಫ್ ನಾಯಕ ಹಾಶಿಮ್ ಖುರೇಷಿ ಮತ್ತು ಶಬೀರ್ ಶಾ ಅವರಿಗೆ ನೀಡಲಾಗಿದ್ದ ಭದ್ರತಾ ಸಿಬ್ಬಂದಿ ಮತ್ತು ವಾಹನಗಳನ್ನುಸರ್ಕಾರ ವಾಪಸ್ ಪಡೆದಿತ್ತು.

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಸಂಘಟನೆಯ ಭಯೋತ್ಪಾದಕ ಆದಿಲ್ ದಾರ್ ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಸಿಆರ್ ಪಿಎಫ್ ನ 44 ಯೋಧರು ಹುತಾತ್ಮರಾಗಿದ್ದರು. ಈ ಘಟನೆಯ ನಂತರ ಭಾರತ ಪ್ರತ್ಯೇಕತಾವಾದಿಗಳಿಗೂ ಬಿಸಿಮುಟ್ಟಿಸಿದೆ.

English summary
Pulwama terror attack: Jammu and Kashmir administration on Wednesday withdrew the security of 18 separatists and 155 political persons
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X