'ನೀವು ವಿಡಿಯೋ ನೋಡುವ ವೇಳೆ ನಾನು ಸ್ವರ್ಗದಲ್ಲಿ ಸಂಭ್ರಮಿಸುತ್ತಿರುತ್ತೇನೆ' ಎಂದಿದ್ದ ಉಗ್ರ!

Recommended Video

      Pulwama : ಯೋಧರ ಮೇಲಿನ ದಾಳಿಗೂ ಮುನ್ನ ಉಗ್ರ ಹೇಳಿದ್ದೇನು ಗೊತ್ತಾ? | Oneindia Kannada

      ನವದೆಹಲಿ, ಫೆಬ್ರವರಿ 15: ಪುಲ್ವಾಮಾದಲ್ಲಿ ಸೈನಿಕರ ಮೇಲೆ ದಾಳಿ ನಡೆಸಿದ ಉಗ್ರ ತಾನು ಆತ್ಮಾಹುತಿ ದಾಳಿಕೋರನಾಗಲು ಅಫ್ಘಾನಿಸ್ತಾನದಿಂದ ಅಮೆರಿಕವು ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಾಗ ತಾಲಿಬಾನ್ ತನ್ನ ಗೆಲುವೆಂದು ಕರೆದುಕೊಂಡಿದ್ದೇ ಪ್ರೇರಣೆ ಎಂದು ಹೇಳಿಕೊಂಡಿದ್ದ.

      ಪುಲ್ವಾಮಾ ದಾಳಿಗೂ ಕೆಲವು ನಿಮಿಷಗಳ ಮೊದಲು ಟೆಲಿಗ್ರಾಂ ಚಾನೆಲ್‌ಗಳಲ್ಲಿ ಹರಿದಾಡುತ್ತಿದ್ದ ಎರಡು ವಿಡಿಯೋಗಳಲ್ಲಿ ಆದಿಲ್ ಅಹ್ಮದ್ ದಾರ್ ಎಂಬ ಯುವಕ ದಾಳಿಯ ಹೊಣೆ ಹೊತ್ತುಕೊಂಡು ಮಾತನಾಡಿದ್ದ. ಕಾಶ್ಮೀರಿ ಭಾಷೆಯಲ್ಲಿನ ಏಳು ನಿಮಿಷದ ವಿಡಿಯೋ ಮತ್ತು ಉರ್ದುವಿನಲ್ಲಿರುವ ಹತ್ತು ನಿಮಿಷದ ವಿಡಿಯೋಗಳಲ್ಲಿ ಆದಿಲ್ ತಾನು 'ಹುತಾತ್ಮ'ನಾಗುವ ವಿಷಯವನ್ನು ಹಂಚಿಕೊಂಡಿದ್ದ. ಈ ವಿಡಿಯೋಗಳನ್ನು ಜೈಶ್, ದಾಳಿಗೆ ಮುನ್ನವಷ್ಟೇ ಚಿತ್ರಿಸಿಕೊಂಡಂತೆ ಕಾಣಿಸುತ್ತದೆ.

      ಪುಲ್ವಾಮಾ ಜಿಲ್ಲೆಯ ಕಕಪೊರಾ ಪ್ರದೇಶದ ಗಂಡಿಭಾಗ್ ಎಂಬಲ್ಲಿಯವನಾದ ಆದಿಲ್ ಅಲಿಯಾಸ್ ವಕಾಸ್ ಕಮಾಂಡರ್ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕಗಳನ್ನು ತುಂಬಿಕೊಂಡು ಬಂದು ಸಿಆರ್‌ಪಿಎಫ್ ಸೈನಿಕರಿದ್ದ ಬಸ್‌ಗೆ ಗುದ್ದಿಸಿ ಸ್ಫೋಟಿಸಿದ್ದ.

      pulwama suicide bomber video on crpf jawans i will be enjoying in heaven

      ಒಂದು ವರ್ಷದ ಹಿಂದಷ್ಟೇ ಜೈಶ್ ಎ ಮೊಹಮ್ಮದ್ ಸಂಘಟನೆಯನ್ನು ಸೇರಿಕೊಂಡಿದ್ದಾಗಿ ಆತ ವಿಡಿಯೋದಲ್ಲಿ ತಿಳಿಸಿದ್ದ. ಒಂದು ಇಡೀ ವರ್ಷದ ಕಾಯುವಿಕೆ ಬಳಿಕ ಜೈಶ್‌ಗೆ ನಾನು ಯಾವ ಉದ್ದೇಶಕ್ಕಾಗಿ ಸೇರಿಕೊಂಡೆನೋ ಆ ಅವಕಾಶ ಲಭ್ಯವಾಗಿದೆ ಎಂದು ಹೇಳಿಕೊಂಡಿದ್ದಾನೆ.

      'ಈ ವಿಡಿಯೋ ನಿಮಗೆ ತಲುಪುವ ವೇಳೆಗೆ ನಾನು ಸ್ವರ್ಗದಲ್ಲಿ ಸಂಭ್ರಮಿಸುತ್ತಾ ಇರುತ್ತೇನೆ. ಇದು ಕಾಶ್ಮೀರದ ಜನರಿಗೆ ನನ್ನ ಕೊನೆಯ ಸಂದೇಶ. ಜೈಶ್ ಜ್ವಾಲೆಯನ್ನು ಜೀವಂತವಾಗಿರಿಸಿದೆ ಮತ್ತು ಸಂಕಷ್ಟದ ಸಂದರ್ಭಗಳನ್ನು ಎದುರಿಸಿದೆ. ಬನ್ನಿ ಸಂಘಟನೆಯನ್ನು ಸೇರಿ ಮತ್ತು ಒಂದು ಕೊನೆಯ ಹೋರಾಟಕ್ಕೆ ಸಿದ್ಧರಾಗಿ' ಎಂದು ಆತ ಉದ್ವೇಗದ ಧ್ವನಿಯಲ್ಲಿ ಹೇಳಿದ್ದಾನೆ.

      ಕಾಶ್ಮೀರಿ ಭಾಷೆಯ ವಿಡಿಯೋದಲ್ಲಿಯೂ ಬಹುತೇಕ ಅದೇ ಮಾತುಗಳನ್ನು ಪುನರಾವರ್ತಿಸಿದ್ದಾನೆ. ಮದುವೆಯಲ್ಲಿ ಸಂಭ್ರಮಿಸುವಂತೆ ತನ್ನ ಪ್ರಾಣತ್ಯಾಗವನ್ನು ಇಸ್ಲಾಂಗಾಗಿ ಸಂಭ್ರಮಿಸಿ ಎಂದು ಆತ ತನ್ನ ಕುಟುಂಬ, ಸ್ನೇಹಿತರು ಮತ್ತು ಸಂಬಂಧಿಕರಿಗೆ ಕರೆ ನೀಡಿದ್ದಾನೆ. ಅಲ್ಲದೆ, ಕಾಶ್ಮೀರದ ಯುವ ಜನರಿಗೆ ಧರ್ಮೋಪದೇಶ ಮಾಡಿದ್ದು, ಮಹಿಳೆಯರು ಮುಖಪರದೆ ಧರಿಸುವಂತೆ ಹಾಗೂ ಯುವಕರು ಪ್ರೀತಿಯಲ್ಲಿ ಬೀಳದಂತೆ ಸಲಹೆ ನೀಡಿದ್ದಾನೆ.

      ಈ ವಿಡಿಯೋದ ಪ್ರತಿ ನಿಮಿಷವೂ ಅಮೆರಿಕದ ಮಹಿಳೆಯ ಧ್ವನಿಯೊಂದು ಅಡ್ಡಿಪಡಿಸುತ್ತದೆ. 'ವಾಣಿಜ್ಯೇತರ ಬಳಕೆಗಾಗಿ ಉಚಿತ ಆವೃತ್ತಿಯೊಂದಿಗೆ ಸೃಷ್ಟಿಸಿದ್ದು' ಎಂದು ಆ ಧ್ವನಿ ಹೇಳುತ್ತದೆ. ಇದು ಜೈಶ್, ಉನ್ನತ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮ ಯಂತ್ರಗಳನ್ನು ಬಳಸುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ.

      ವಿಡಿಯೋದ ಅಂತ್ಯದಲ್ಲಿ ಆದಿಲ್, ಜಗತ್ತಿನಾದ್ಯಂತ ಇರುವ ಮುಸ್ಲಿಮರು ಬಲಿದಾನದ ಮೂಲಕ ವಿದೇಶಿ ಆಕ್ರಮಣದಿಂದ ಮುಕ್ತರಾಗಬೇಕು ಎಂದಿದ್ದಾನೆ. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೋಲು ಮತ್ತು ತಾಲಿಬಾನ್‌ ನೇತೃತ್ವದ ಜಿಹಾದಿಗಳ ಗೆಲುವು ತನ್ನ ಬಲಿದಾನಕ್ಕೆ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾನೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+