'ಜಮ್ಮು ಕಾಶ್ಮೀರದಲ್ಲಿ ಆಸ್ತಿ ಖರೀದಿಗೆ ಅವಕಾಶ: ಅತ್ಯಾಚಾರ ಪ್ರಕರಣ ಹೆಚ್ಚುತ್ತೆ'
ಜಮ್ಮು, ಅಕ್ಟೋಬರ್ 28: ಒಂದೊಮ್ಮೆ ಭಾರತೀಯರು ಜಮ್ಮು ಕಾಶ್ಮೀರದಲ್ಲಿ ನೆಲೆಸಿದರೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲಿವೆ ಎಂದು ಜಮ್ಮು ಕಾಶ್ಮೀರ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ ಮುಖಂಡ ಹೇಳಿಕೆ ನೀಡಿದ್ದಾರೆ.
ಜಮ್ಮು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಭಾರತೀಯ ಇನ್ನುಮುಂದೆ ಜಮೀನು ಖರೀದಿಸಬಹುದು, ಏಕ್ ಭಾರತ್ ಶ್ರೇಷ್ಠ ಭಾರತ ಎಂಬ ಪರಿಕಲಪನೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಪಿಡಿಪಿ ಮುಖಂಡ ಈ ಕುರಿತು ವ್ಯಗ್ಯಂವಾಡಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ನೀಡಿದ್ದ ಸ್ಥಾನಮಾನವನ್ನು ಈ ಹಿಂದೆ ಕೇಂದ್ರ ಸರ್ಕಾರ ರದ್ದುಪಡಿಸಿತ್ತು, ಇದರ ಮುಂದುವರೆದ ಭಾಗವಾಗಿ ಆಸ್ತಿ ಖರೀದಿಗೆ ಇದ್ದ ಅಡ್ಡಿ ನಿವಾರಿಸಿ ಅಧಿಸೂಚನೆ ಹೊರಡಿಸಿದೆ. ಇದರಿಂದ ದೇಶದ ಇತರೆ ಪ್ರದೇಶಗಳಲ್ಲಿ ಇರುವಂತಹ ಯಾರೂ ಕೂಡ ಜಮ್ಮು ಕಾಶ್ಮೀರದಲ್ಲಿ ಆಸ್ತಿ ಖರೀದಿಸಬಹುದು ಎಂದು ಹೇಳಲಾಗಿದೆ.

ಈ ಹಿಂದೆ ಜಮ್ಮು ಕಾಶ್ಮೀರದಲ್ಲಿ ಆಸ್ತಿ ಖರೀದಿಗೆ ಭಾರತದ ಇತರೆ ರಾಜ್ಯಗಳ ಜನರಿಗೆ ಅವಕಾಶವಿರಲಿಲ್ಲ.ಇದೀಗ ಪಿಡಿಪಿ ಮುಖಂಡ ಸುರಿಂದರ್ ಚೌಧರಿ ಈ ಕುರಿತು ಅಪಸ್ವರ ಎತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದ ಬಂದ ಜನರು ಇಲ್ಲಿ ನೆಲೆಸಿದರೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತವೆ.
ಜಮ್ಮುವಿನ ಪ್ರದೇಶ ಈಗ ಶಾಂತಿಯುತವಾಗಿದೆ. ಬೇರೆ ಬೇರೆ ಹಳ್ಳಿಗಳಿಂದ ಹೆಣ್ಣುಮಕ್ಕಳು ಇಲ್ಲಿಗೆ ಓದುವುದಕ್ಕೆಂದು ಬರುತ್ತಾರೆ. ಫರೀದಾಬಾದಿನಲ್ಲಿ ಏನಾಯಿತು ಎಂದು ನೀವೇ ನೋಡಿದ್ದೀರಿ, ಹಾಗೆಯೇ ಹತ್ರಾಸ್ ಘಟನೆಯೂ ನಮ್ಮ ಮುಂದಿದೆ. ಈಗಾಗಲೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ.
ಇದೀಗ ಜಮ್ಮು ಕಾಶ್ಮೀರದಲ್ಲೇ ಬೇರೆ ರಾಜ್ಯಗಳಿಂದ ಬಂದ ಜನರಿಗೆ ಉಳಿದುಕೊಳ್ಳಲು ಅವಕಾಶ ನೀಡಿದರೆ ಅತ್ಯಾಚಾರ ಸೇರಿದಂತೆ ಇತರೆ ಅಪರಾಧ ಪ್ರಕರಣಗಳು ಹೆಚ್ಚಾಗಲಿವೆ ಎಂದು ಹೇಳಿದರು.












Click it and Unblock the Notifications