ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಉಗ್ರರನ್ನು ಹತ್ಯೆಗೈದ ಸೇನೆ

ಶ್ರೀನಗರ, ಸೆಪ್ಟೆಂಬರ್ 11: ಮನಬಂದಂತೆ ಸೈನಿಕರ ಮೇಲೆ ಗುಂಡು ಹಾರಿಸಿ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ಉಗ್ರನನ್ನು ಭಾರತೀಯ ಸೇನೆ ಸದೆಬಡಿದಿದೆ.

ಇದೀಗ ಹತ್ಯೆಯಾದ ಉಗ್ರನ ಮೃತದೇಹವನ್ನು ವಶಕ್ಕೆ ಪಡೆದಿರುವ ಭದ್ರತಾಪಡೆಗಳು ತನಿಖೆ ಆರಂಭಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಕವೂಸಾ ಖಾಲಿಸಾ ಎಂಬ ಪ್ರದೇಶದಲ್ಲಿ ಸೆಪ್ಟೆಂಬರ್ 7 ರಂದು ಉಗ್ರನೋರ್ವ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಸೇನಾಪಡೆ ಉಗ್ರನ ಕುತ್ತಿಗೆಗೆ ಗುಂಡು ಹಾರಿಸಿ ಹತ್ಯೆ ಮಾಡಿತ್ತು.

One Terrorist Killed By Security Forces In Jammu And Kashmirs Budgam

ಇದರೊಂದಿಗೆ ಸೆಪ್ಟೆಂಬರ್ ತಿಂಗಳೊಂದರಲ್ಲಿಯೇ ಭದ್ರತಾ ಪಡೆಗಳು ಒಟ್ಟು ನಾಲ್ವರು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಭಯೋತ್ಪಾದಕರನ್ನು ಹತ್ಯೆ ಮಾಡಿದೆ.

ಈ ನಡುವೆ ಕುಪ್ವಾರ ಜಿಲ್ಲೆಯ ಡ್ರುಗ್ಮುಲ್ಲಾ ಎಂಬ ಪ್ರದೇಶದಲ್ಲಿ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಬಂಧನಕ್ಕೊಳಪಡಿಸುವಲ್ಲಿ ಭದ್ರತಾಪಡೆಗಳು ಯಶಸ್ವಿಯಾಗಿದೆ.

ಹತ್ಯೆಯಾದ ಉಗ್ರರನ್ನು ಶಕೀಲ್ ಅಹ್ಮದ್ ವಾನಿ, ಶೋಕತ್ ಅಹ್ಮದ್, ಅಕಿಬ್ ಮಕ್ಬೂಲ್ ಖಾನ್, ಮತ್ತು ಅಜಾಜ್ ಅಹ್ಮದ್ ದಾರ್ ಎಂದು ಗುರ್ತಿಸಲಾಗಿದೆ.

ಬಂಧನಕ್ಕೊಳಗಾಗಿರುವ ಇಬ್ಬರು ಉಗ್ರರು ಕಾರಿನಲ್ಲಿ ತೆರಳಲುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಭದ್ರತಾಪಡೆಗಳು ಚೆಕ್ ಪೋಸ್ಟ್ ಬಳಿ ವಾಹನವನ್ನು ತಡೆಹಿಡಿದು ಪರಿಶೀಲನೆ ನಡೆಸಿದ್ದಾರೆ. ಇದರಂತೆ ಉಗ್ರರಿಬ್ಬರನ್ನು ಬಂಧಿಸಿಸಿದ್ದಾರೆಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+