ಉಗ್ರರಿಗೆ ದೇಣಿಗೆ ಆರೋಪ : ಗಿಲಾನಿ ಪುತ್ರನಿಗೆ ಸಮನ್ಸ್ ನೀಡಿದ ಎನ್ಐಎ

ಶ್ರೀನಗರ, ಮಾರ್ಚ್ 10: ಪಾಕಿಸ್ತಾನದ ಪರ, ಪ್ರತ್ಯೇಕತವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರ ಪುತ್ರ, ಮಿರ್ವಾಜ್ ಉಮರ್ ಫರೂಖ್ ಅವರಿಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ವು ಸಮನ್ಸ್ ಕಳಿಸಿದೆ.

ಹುರಿಯತ್ ಸಂಘಟನೆಯ ಮುಖ್ಯಸ್ಥರು ಆಗಿರುವ ಉಮರ್ ಫರೂಕ್ ಹಾಗೂ ನಸೀಮ್ ಗಿಲಾನಿ ಅವರನ್ನು ನವದೆಹಲಿಯ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಕೇಂದ್ರ ಕಚೇರಿಯಲ್ಲಿ ಸೋಮವಾರದಂದು ವಿಚಾರಣೆಗೆ ಹಾಜರಾಗಬೇಕಿದೆ.

ಫೆಬ್ರವರಿ 26ರಂದು ಪ್ರತ್ಯೇಕತಾವಾದಿಗಳ ನಾಯಕರ ಮನೆ, ಕಚೇರಿಗಳ ಮೇಲೆ ತನಿಖಾ ಸಂಸ್ಥೆಯಿಂದ ದಾಳಿ ನಡೆಸಲಾಗಿತ್ತು. ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಆರೋಪವನ್ನು ಹುರಿಯತ್ ನಾಯಕರ ಮೇಲೆ ಹೊರೆಸಲಾಗಿದೆ.

NIA summons Geelani’s son, Mirwaiz in terror funding case

ಎನ್ಐಎ ತಂಡ, ಸ್ಥಳೀಯ ಪೊಲೀಸರು ಹಾಗೂ ಸಿಆರ್ ಪಿಎಫ್ ಸಿಬ್ಬಂದಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಿರಾವೈಜ್, ನಸೀಮ್ ಗಿಲಾನಿ, ತೆಹ್ರಿಕ್ ಎ ಹುರಿಯತ್ ನ ಮುಖ್ಯಸ್ಥ ಅಶ್ರಫ್ ಸೆಹ್ರಾಯಿ ಮನೆ ಮೇಲೆ ದಾಳಿ ನಡೆಸಲಾಗಿತ್ತು.

ಜಮ್ಮು ಮತ್ತು ಕಾಶ್ಮೀರದ ವಿಮೋಚನಾ ಫ್ರಂಟ್ (ಜೆಕೆಎಲ್ ಎಫ್) ನ ಮುಖಂಡರಾದ ಯಾಸೀನ್ ಮಲೀಕ್, ಶಬೀರ್ ಶಾ, ಜಫಾರ್ ಭಟ್, ಮಸಾರಾತ್ ಅಲಂ ಅವರ ಮನೆ ಮೇಲೆ ದಾಳಿಯಾಗಿತ್ತು.

ಮಿರಾವೆಜ್ ನ ಸೋದರ ಮಾವ ಮೌಲ್ವಿ ಮನ್ಜೂರ್ ಹಾಗೂ ಮೌಲ್ವಿ ಶಾಫತ್ ಹಾಗೂ ಸಹಚರರನ್ನು ಕಳೆದ ವರ್ಷ ವಿಚಾರಣೆಗೊಳಪಡಿಸಲಾಗಿದೆ.

ಲಷ್ಕರ್ ಎ ತೋಯ್ಬಾ ಬೆಂಬಲಿತ ಜಮಾತ್ ಉದ್ ದವಾ, ಹುರಿಯತ್ ಕಾನ್ಫರೆನ್ಸ್, ಹಿಜ್ಬುಲ್ ಮುಜಾಹಿದ್ದೀನ್ ಹಾಗೂ ದುಖ್ತ್ರಾರನ್ ಎ ಮಿಲ್ಲಾತ್ ಗೆ ಈ ಇಬ್ಬರು ನಿವೃತ್ತ ಸರ್ಕಾರಿ ಅಧಿಕಾರಿಗಳಾದ ಮೌಲ್ವಿಗಳು ನೆರವಾಗಿರುವ ಆರೋಪವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+