Get Updates
Get notified of breaking news, exclusive insights, and must-see stories!

ಕಾಶ್ಮೀರದಲ್ಲಿ ಜೀವಕ್ಕೆ ಬೆಲೆ ಇಲ್ಲ: ಹತ್ಯೆಯಾದ ಶಿಕ್ಷಕಿ ಸಂಬಂಧಿಕರು

ಶ್ರೀನಗರ, ಜೂ. 1: ಮಂಗಳವಾರ ಕಾಶ್ಮೀರದಲ್ಲಿ36 ವರ್ಷದ ಶಿಕ್ಷಕಿಯನ್ನು ಹತ್ಯೆ ಮಾಡಲಾಗಿದ್ದು, ಅವರ ಮೃತದೇಹವು ಸಾಂಬಾ ಜಿಲ್ಲೆಯ ಸುಪ್ವಾಲ್‌ ಪ್ರದೇಶದ ನಂಕೆಚಕ್‌ ಗ್ರಾಮದಲ್ಲಿರುವ ಆಕೆಯ ಅತ್ತೆಯ ಮನೆಗೆ ಬರುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಸೇರಿದಂತೆ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಹಿನ್ನೆಲೆಯಲ್ಲಿ ನಾಗರಿಕರ ಮೇಲೆ ಹಚ್ಚುತ್ತಿರುವ ದಾಳಿಯ ಬಗ್ಗೆ ಭಯದ ಭಾವನೆ ಇನ್ನೂ ಹೆಚ್ಚಾಯಿತು.

ಈ ಆತಂಕ ಸ್ಥಿತಿಯಲ್ಲಿ ನಮಗೆ ಏನಾಯಿತು ಎಂದು ತಿಳಿಯುತ್ತಿಲ್ಲ. ನಾವು ಇನ್ನೂ ಆಘಾತದ ಸ್ಥಿತಿಯಲ್ಲಿ ಇದ್ದೇವೆ. ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಹೆಚ್ಚುತ್ತಿರುವ ದಾಳಿಯಿಂದಾಗಿ ನಮಗೆ ಇನ್ನೂ ಜೀವನದ ಮೇಲೆ ನಂಬಿಕೆ ಕ್ಷೀಣಿಸುತ್ತಿದೆ. ಕುಲ್ಗಾಮ್‌ ಜಿಲ್ಲೆಯ ಗೋಪಾಲ್‌ ಪುರ ಪ್ರದೇಶದ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಬಾಲಾ ಅವರನ್ನು ಮಂಗಳವಾರ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಕೇಂದ್ರಾಡಳಿತ ಪ್ರದೇಶದಲ್ಲಿ ವಲಸೆ ಕಾರ್ಮಿಕರು ಮತ್ತು ಹಿಂದೂಗಳ ಮೇಲೆ ದಾಳಿ ಹೆಚ್ಚಾಗುತ್ತಿದೆ. ಈ ವರ್ಷ ಸರಣಿ ದಾಳಿ ಇನ್ನೂ ಹೆಚ್ಚಾಗಿದೆ ಎಂದು ಮೃತ ಶಿಕ್ಷಕಿ ಬಾಲಾ ಅವರ ಸೋದರ ಮಾವ ಸುರೀಂದರ್ ಕುಮಾರ್‌ ಅವರು ದುಃಖದಿಂದ ಹೇಳಿದರು.

10 ಮಂದಿಗೆ ಗಾಯ

10 ಮಂದಿಗೆ ಗಾಯ

ನನ್ನ ಸಂಬಂಧಿ ಬಾಲಾ, ನನ್ನ ಸಹೋದರ ಮತ್ತು ಅವರ ಪುಟ್ಟ ಮಗಳು ಒಟ್ಟಿಗೆ ವಾಸ ಮಾಡುತ್ತಿದ್ದರು. ಅವರ ಮರಣ ನಮ್ಮಗೆ ನಿಜಕ್ಕೂ ಸಹಿಸಲಾಗುತ್ತಿಲ್ಲ. ಇದು ಸರಕಾರಕ್ಕೆ ನಾಚಿಕೆಗೇಡಿನ ಸಂಗತಿ, ಕಾಶ್ಮೀರದಲ್ಲಿ ಸಾಮಾನ್ಯರ ಜೀವಕ್ಕೆ ಗ್ಯಾರಂಟಿ ಇಲ್ಲ, ಪ್ರತಿದಿನ ಒಬ್ಬ ಸಾಮಾನ್ಯ ವ್ಯಕ್ತಿ ಕೊಲ್ಲಲ್ಪಡುತ್ತಿದ್ದಾನೆ. ಮತ್ತು ಸರಕಾರವು ಕೇವಲ ಬಾಯಿಯಿಂದ ಜನರ ಕಾಪಾಡುತ್ತಿದೆ. ಕಾಶ್ಮೀರದಲ್ಲಿ ಜನರಿಗೆ ಬದುಕುವ ಯಾವ ಆಶಯಗಳು ಇಲ್ಲಿಲ್ಲ ಎಂದು ಕುಮಾರ್‌ ಅವರು ಹೇಳಿದರು. ಕಳೆದ ಐದು ತಿಂಗಳಲ್ಲಿ ಶಂಕಿತ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 13 ಜನರು ಹತರಾಗಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ. ಹತ್ಯೆಯಾದವರಲ್ಲಿ ಪಂಚರು, ಸರಪಂಚರು, ಟಿವಿ ಕಲಾವಿದೆ, ನಾಲ್ವರು ಭದ್ರತಾ ಸಿಬ್ಬಂದಿ, ಮೂವರು ಹಿಂದೂಗಳು ಮತ್ತು ಆರು ಸ್ಥಳೀಯ ಮುಸ್ಲಿಮರು ಸೇರಿದ್ದಾರೆ.

ವರ್ಗಾವಣೆ ಆದೇಶ ನೀಡಿದ್ದರೂ ಉಳಿಬಹುದಿತ್ತು

ವರ್ಗಾವಣೆ ಆದೇಶ ನೀಡಿದ್ದರೂ ಉಳಿಬಹುದಿತ್ತು

ಬಾಲಾ ಅವರ ಪತಿ ರಾಜ್‌ ಕುಮಾರ್‌ ಅವರು ಮುಖ್ಯಶಿಕ್ಷಣಾಧಿಕಾರಿಗೆ ನಾಲ್ಕು ಬಾರಿ ವರ್ಗಾವಣೆಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು. ದೂರದ ಸ್ಥಳದಲ್ಲಿ ಶಾಲೆ ಇದೆ ಎಂಬ ಕಾರಣಕ್ಕೆ ಆಕೆಯನ್ನುಸುರಕ್ಷಿತ ಶಾಲೆಗೆ ವರ್ಗಾಯಿಸುಂತೆ ಸಿಇಒಗೆ ಮನವಿ ಮಾಡಿದ್ದೆ. ನಿನ್ನೆಯೂ ನಾವು ಶಿಕ್ಷಣ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಹತ್ತಿರದ ಒಂದು ಶಾಲೆಗೆ ಸೇರಿಸುವಂತೆ ಮನವಿ ಮಾಡಿದ್ದೇವು ಎಂದು ಸ್ವತಃ ಸರ್ಕಾರಿ ಶಾಲೆ ಶಿಕ್ಷಕ ರಾಜ್‌ಕುಮಾರ್‌ ತಿಳಿಸಿದರು. ದೂರದ ಸ್ಥಳದಲ್ಲಿ ಶಾಲೆ ಇದೆ ಎಂಬ ಕಾರಣಕ್ಕೆ ಆಕೆಯನ್ನು ಸುರಕ್ಷಿತ ಶಾಲೆಗೆ ವರ್ಗಾಯಿಸುವಂತೆ ಸಿಇಒಗೆ ಮನವಿ ಮಾಡಿದ್ದೆ. ನಿನ್ನೆಯೂ ನಾವು ಶಿಕ್ಷಣ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ, ನಮ್ಮನ್ನು ಒಂದು ಶಾಲೆಗೆ ನೇಮಿಸುವಂತೆ ಮನವಿ ಮಾಡಿದ್ದೇವೆ. ಅಧಿಕಾರಿಗಳು ನಿನ್ನೆ ಸಂಜೆ ಕೂಡ ವರ್ಗಾವಣೆ ಆದೇಶ ನೀಡಿದ್ದರೂ ನಮ್ಮ ಬಾಲಾ ಅವರ ಹತ್ಯೆ ನಡೆಯುತ್ತಿರಲಿಲ್ಲ ಎಂದು ಸರ್ಕಾರಿ ಶಾಲೆಯ ಶಿಕ್ಷಕ ರಾಜ್ ಕುಮಾರ್ ಹೇಳಿದರು.

ಮನೋಜ್ ಸಿನ್ಹಾ ವಿರುದ್ಧ ಘೋಷಣೆ

ಮನೋಜ್ ಸಿನ್ಹಾ ವಿರುದ್ಧ ಘೋಷಣೆ

ಹತ್ಯೆಯಾದ ಶಿಕ್ಷಕಿಯ ಅತ್ತೆ ಮಾವ ಮಾತನಾಡಿ, ನಮ್ಮ ಸೊಸೆ ಅವಳ ಚಿಕ್ಕಮಗಳನ್ನು ಬಿಟ್ಟು ಹೋಗಿದ್ದಾಳೆ. ಅವಳನ್ನು ಇನ್ನೂ ಯಾರು ನೋಡಿಕೊಳ್ಳುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು. ಬಾಲಾ ಅವರ ಸಾವಿನ ಸುದ್ದಿಹರಡುತ್ತಿದ್ದಂತೆ ಹಲವಾರು ಕಾಶ್ಮೀರಿ ಪಂಡಿತರು ಶ್ರೀನಗರದ ಬಟ್ವಾರಾ ಮತ್ತು ಇಂದ್ರ ನಗರ ಪ್ರದೇಶಗಳಲ್ಲಿ ಹಾಗೂ ಅನಂತನಾಗ್ ಜಿಲ್ಲೆಯ ವೆಸ್ಸು ಎಂಬಲ್ಲಿ ಪ್ರತಿಭಟನೆಗಳನ್ನು ನಡೆಸಿದರು. ಶ್ರೀನಗರದಲ್ಲಿ ಪ್ರತಿಭಟನಾಕಾರರು ಕೇಂದ್ರದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಮನೋಜ್ ಸಿನ್ಹಾ ವಿರುದ್ಧ ಘೋಷಣೆಗಳನ್ನು ಕೂಗಿದರು.

ಇಂದು ಮತ್ತೊಂದು ಕೊಲೆ

ಇಂದು ಮತ್ತೊಂದು ಕೊಲೆ

ಬಾರಾಮುಲ್ಲಾದಿಂದ ಅನಂತನಾಗ್ ಟ್ರಾನ್ಸಿಟ್ ಕ್ಯಾಂಪ್‌ಗಳಿಗೆ ಸಂಬಂಧ ಸರ್ಕಾರವು 24 ಗಂಟೆಗಳ ಒಳಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ ನಾವು ಕಣಿವೆಯಿಂದ ಸಾಮೂಹಿಕವಾಗಿ ವಲಸೆ ಹೋಗುತ್ತೇವೆ ಎಂದು ನಾವು ನಿರ್ಧರಿಸಿದ್ದೇವೆ. ನಮ್ಮನ್ನು ಸ್ಥಳಾಂತರಿಸುವಂತೆ ಎಲ್‌ಜಿ ಸಿನ್ಹಾ ಅವರಿಗೆ ಮನವಿ ಮಾಡಿದ ಮೂರು ದಿನಗಳ ನಂತರ ಬಾಲಾ ಅವರ ಹತ್ಯೆಯಾಗಿದೆ. ಇಲ್ಲಿ ಎಲ್ಲವೂ ಸಾಮಾನ್ಯವಾಗುವವರೆಗೆ ಎರಡು ಮೂರು ವರ್ಷಗಳ ಕಾಲ ನಮ್ಮನ್ನು ಸ್ಥಳಾಂತರಿಸುವಂತೆ ನಾವು ಅವರಿಗೆ ಮನವಿ ಮಾಡಿದ್ದೆವು. ಆದರೆ ಇಂದು ಮತ್ತೊಂದು ಕೊಲೆಯಾಗಿದೆ ಎಂದು ಕೌಲ್ ಹೇಳಿದ್ದಾರೆ.

ಹಿಂದಿನ ದಿನದ ಬಾಲಾ ಅವರ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ನಿಶ್ಚಿತ ಎಂದು ಸಿನ್ಹಾ ಭರವಸೆ ನೀಡಿದ್ದರು. ಕಳೆದ 14 ವರ್ಷಗಳಿಂದ ನಾವು ಸಂಕಷ್ಟ ಅನುಭವಿಸುತ್ತಿದ್ದೇವೆ. ನಮ್ಮ ಬೇಡಿಕೆಗಳನ್ನು ಯಾರೂ ಕೇಳುತ್ತಿಲ್ಲ. ಕೇಂದ್ರ ಸರಕಾರವಾಗಲಿ, ಆಡಳಿತವಾಗಲಿ ನಮ್ಮ ಗೋಳು ಕೇಳುತ್ತಿಲ್ಲ. ನಾವು ನಮ್ಮ ಕುಟುಂಬಗಳಿಗೆ ವಿದಾಯ ಹೇಳಿದ್ದೇವೆ ಎಂದು ಶ್ರೀನಗರದಲ್ಲಿ ಪ್ರತಿಭಟನಾಕಾರರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು. ನಮ್ಮನ್ನು ಪ್ರಧಾನಮಂತ್ರಿ ಯೋಜನೆ ಅಡಿಯಲ್ಲಿ ನೇಮಕ ಮಾಡಲಾಗಿದೆ. ಆದರೆ ವಾಸ್ತವವಾಗಿ ಸರ್ಕಾರ ನಮ್ಮನ್ನು ಮರೆತುಬಿಟ್ಟಿದೆ. ಅವರು ನಮ್ಮನ್ನು ಇಲ್ಲಿ ಸಾಯಲು ಬಿಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.

1990 ರ ದಶಕದಲ್ಲಿ ನಮ್ಮ ಪೋಷಕರು ಸಹಿಸುತ್ತಿದ್ದರು. ಆದರೆ ಈಗ ನಾವು ಇದನ್ನು ಸಹಿಸುವುದಿಲ್ಲ. ನಮ್ಮ ತಂದೆ- ತಾಯಿ ನಮ್ಮನ್ನು ಇಲ್ಲಿಗೆ ಕೆಲಸಕ್ಕೆ ಕಳುಹಿಸಲು ಇಷ್ಟವಿರಲಿಲ್ಲ. ಈಗ ಬಹಿರಂಗ ರಕ್ತಪಾತ ನಡೆಯುತ್ತಿದೆ. ಜನರು ಕೊಲ್ಲಲ್ಪಡುತ್ತಿದ್ದಾರೆ. ಈಗ ನಮ್ಮನ್ನು ಇಲ್ಲಿಂದ ಜಮ್ಮುವಿಗೆ ಸ್ಥಳಾಂತರಿಸುವವರೆಗೆ ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ಇಂದ್ರ ನಗರದಲ್ಲಿ ಪ್ರತಿಭಟನಾಕಾರರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+