• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುಲ್ವಾಮಾ ಪ್ರತೀಕಾರ LIVE: ನೂರಾರು ಜೈಷ್ ಉಗ್ರರ ಹತ್ಯೆ ಮಾಡಿದ್ದು ಸತ್ಯ

|

ಶ್ರೀನಗರ, ಫೆಬ್ರವರಿ 26: ಪುಲ್ವಾಮಾ ದಾಳಿಯ ನಂತರ ಪ್ರತೀಕಾರಕ್ಕಾಗಿ ಹವಣಿಸುತ್ತಿದ್ದ ಭಾರತ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆಯಾ?

ಭಾರತೀಯ ವಾಯುಸೇನೆಯು ಭಯೋತ್ಪಾದಕ ನೆಲೆಯ ಮೇಲೆ 1000 ಕೆಜಿ ಬಾಂಬ್ ಅನ್ನು ಎಸೆದಿರುವುದಾಗಿ ಖಚಿತ ಮಾಹಿತಿ ಲಭ್ಯವಾಗಿದೆ ಎಂದು ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಭಾರತ ದಾಳಿ ನಡೆಸಿದ್ದು, ಮತ್ತು ನೂರಾರು ಉಗ್ರರನ್ನು ಹೊಡೆದುರುಳಿಸಿದ್ದು ಸತ್ಯ ಎಂದು ಭಾರತೀಯ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಜಯ್ ಗೋಖಲೆ ಸಹ ಹೇಳಿದ್ದಾರೆ.

ಪುಲ್ವಾಮಾ ಸಂಚುಕೋರನನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಿದ ಪಾಕಿಸ್ತಾನ

IAF sources say, India drops 1000 Kg bombs on terror camps across the LoC

ಭಾರತ ಯುದ್ಧ ಸಾರಿದರೆ ಎದುರಿಸಲು ನಾವು ಸಿದ್ಧ: ಪಾಕ್ ಸೇನೆ

12 ಮೀರಜ್ 2000 ಜೆಟ್ ವಿಮಾನವು ಬೆಳಿಗ್ಗೆ 3:30 ರ ಸುಮಾರಿಗೆ ಉಗ್ರ ನೆಲೆಯ ಮೇಲೆ ಬಾಂಬಿನ ಸುರಿಮಳೆಗರೆದಿದೆ ಎಂದು ಈ ವರದಿ ತಿಳಿಸಿದೆ

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ಎಂಬ ಆತ್ಮಾಹುತಿ ದಾಳಿಕೋರ ಕಾರ್ ಬಾಂಬ್ ಸ್ಫೋಟಿಸಿ 44 ಯೋಧರ ಬಲಿದಾನಕ್ಕೆ ಕಾರಣವಾಗಿದ್ದ. ಅದರ ಪ್ರತೀಕಾರ ಎಂಬಂತೆ ಭಾರತ ಈಗ ಉಗ್ರನೆಲೆ ಮೇಲೆ ದಾಳಿ ನಡೆಸಿದೆ.

ಘಟನೆ ಕುರಿತ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

Newest First Oldest First
1:12 PM, 26 Feb
"ಭಾರತವು ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ಮಾಡಿದ ಆಕ್ರಮಣಕ್ಕೆ ಪ್ರತಿದಾಳಿ ನಡೆಸುವ ಹಕ್ಕು ಪಾಕಿಸ್ತಾನಕ್ಕಿದೆ. ನಾವು ಸೂಕ್ತ ಉತ್ತರ ನೀಡುತ್ತೇವೆ" ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ
1:07 PM, 26 Feb
ದಾಳಿ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತು ಏರ್ಪೋರ್ಟ್ ಗಳಲ್ಲಿ ಹೈಅಲರ್ಟ್
12:38 PM, 26 Feb
ಇಂಡೋ ಪಾಕ್ ಗಡಿಯಲ್ಲಿ ಭದ್ರತೆಯ ಪರಿಶೀಲನೆ ನಡೆಸಿದ ಭದ್ರತಾ ಸಲಹೆಗಾರ ಅಜಿತ್ ದೊವಲ್, ಸೇನಾ ಮುಖಂಡ ಬಿಪಿನ್ ರಾವತ್ ಮತ್ತು ವಾಯುಸೇನೆ ಮುಖಂಡ ಬಿ ಎಸ್ ಧಾನೊವಾ
12:23 PM, 26 Feb
ಉಗ್ರ ನೆಲೆ ಮೇಲೆ ಭಾರತೀಯ ಸೇನೆ ವೈಮಾನಿಕ ದಾಳಿ ನಡೆಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಭಾರತದಾದ್ಯಂತ ಸಂಭ್ರಮ ಮನೆ ಮಾಡಿದ್ದು, ಪರಸ್ಪರ ಸಿಹಿ ಹಂಚಿಕೊಂಡು ಜನರು ಸಂಭ್ರಮ ಆಚರಿಸುತ್ತಿದ್ದಾರೆ.
12:18 PM, 26 Feb
ಸಂಜೆ 5 ಗಂಟೆಗೆ ಸರ್ವಪಕ್ಷಗಳ ಸಭೆ ಕರೆದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
12:11 PM, 26 Feb
ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳಿಗೆ ಭಾರತೀಯ ವಾಯುಸೇನೆ ನಡೆಸದ ದಾಳಿಯ ಕುರಿತು ವಿವರ ನೀಡಿದ ಪ್ರಧಾನಿ ನರೇಂದ್ರ ಮೋದಿ
11:54 AM, 26 Feb
ದಟ್ಟ ಅರಣ್ಯ ಭಾಗದಲ್ಲಿರುವ ಭಯೋತ್ಪಾದಕ ಕ್ಯಾಂಪ್ ಗಳನ್ನೇ ಗುರಿಯಾಗಿಸಿ ದಾಳಿ ಮಾಡಲಾಗಿದ್ದು, ಅಮಾಯಕರ ಸಾವು ಸಂಭವಿಸುವುದನ್ನು ತಪ್ಪಿಸಲು ಈ ನೆಲೆಯನ್ನೇ ಗುರಿಯಾಗಿಸಿಕೊಳ್ಳಲಾಗಿದೆ- ವಿಜಯ್ ಗೋಖಲೆ
11:50 AM, 26 Feb
ವಿಜಯ್ ಗೋಖಲೆ ಅವರು ಬಳಸಿದ "non-military pre-emptive action" ಎಂಬ ಪದದ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದ್ದು, ಅದರ ಅರ್ಥವನ್ನು ಬಿಡಿಸುವುದಕ್ಕೆ ಹೋದರೆ, 'ಇದು ಯುದ್ಧಕ್ಕೂ ಮೊದಲ ಪೂರ್ವಭಾವಿ ದಾಳಿ' ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆಯೇ ಎಂದು ಮಾಧ್ಯಮಗಳು ಚರ್ಚಿಸುತ್ತಿವೆ.
11:45 AM, 26 Feb
ಬಾಲಾಕೋಟ್ ಉಗ್ರ ಕ್ಯಾಂಪ್ ನಲ್ಲಿ ಮಾತ್ರ ದಾಳಿ ನಡೆಸಿದ ಬಗ್ಗೆ ವಿಜಯ್ ಗೋಖಲೆ ಸ್ಪಷ್ಟನೆ. ಉಳಿದ ನೆಲೆಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.
11:44 AM, 26 Feb
ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ನ ಬಾವ ಮೌಲಾನಾ ಯೂಸಫ್ ಅಜರ್ ಮತ್ತು ಉಸ್ತಾದ್ ಗೌರಿ ಎಂಬ ಉಗ್ರರ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಉಗ್ರ ನೆಲೆ ಧ್ವಂಸ- ವಿಜಯ್ ಗೋಖಲೆ
11:42 AM, 26 Feb
ದಾಳಿಯಲ್ಲಿ ನೂರಾರು ಜೈಷ್ ಉಗ್ರರ ಹತ್ಯೆ. ಜೈಷ್ ಕಮಾಂಡರ್ ಗಳನ್ನೂ ಸದೆಬಡೆಯಲಾಗಿದೆ-ವಿಜಯ್ ಗೋಖಲೆ
11:38 AM, 26 Feb
ಜೈಷ್ ಇ ಮೊಹಮ್ಮದ್ ಉಗ್ರರು ಭಾರತದಲ್ಲಿ ಮತ್ತಷ್ಟು ಉಗ್ರ ಚಟುವಟಿಕೆ ನಡೆಸಲು ಯತ್ನಿಸಿದ್ದರು. ಆದ್ದರಿಂದ ಈ ದಾಳಿ ಅನಿವಾರ್ಯವಾಯ್ತು: ವಿಜಯ್ ಗೋಖಲೆ
11:37 AM, 26 Feb
ಜೈಷ್ ಇ ಮೊಹಮ್ಮದ್ ಉಗ್ರ ನೆಲೆಯನ್ನೇ ಗುರಿಯಾಗಿಸಿಕೊಂಡು ದಾಳಿ-ವಿಜಯ್ ಗೋಖಲೆ
11:34 AM, 26 Feb
3:30 ಕ್ಕೆ ಇಂದು ಸರ್ಜಿಕಲ್ ನಡೆದಿದ್ದು ಸತ್ಯ-ವಿಜಯ್ ಗೋಖಲೆ
11:34 AM, 26 Feb
ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರಿಂದ ಮಾಧ್ಯಮಗೋಷ್ಠಿ
11:17 AM, 26 Feb
ಗುಜರಾತಿನ ಕಛ್ ಪ್ರದೇಶದಲ್ಲಿ ಬೆಳಿಗ್ಗೆ ಸುಮಾರು 6:30 ರ ವೇಳೆಗೆ ಪಾಕಿಸ್ತಾನದ ಡ್ರೋಣ್ ಕಾಣಿಸಿಕೊಂಡಿತ್ತು. ಅದನ್ನು ಹೊಡೆದು ಬೀಳಿಸಲಾಗಿತ್ತು. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
11:00 AM, 26 Feb
ಪಾಕಿಸ್ತಾನದ ಪಕ್ತುಂಖ್ವಾ ಪ್ರದೇಶದಲ್ಲಿರುವ ಖೈಬರ್ ಮೇಲೂ ಭಾರತೀಯ ವಾಯುಸೇನೆಯ ಮೀರಜ್ ಯುದ್ಧ ವಿಮಾನ ದಾಳಿ ನಡೆಸಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
10:56 AM, 26 Feb
F-16 ಯುದ್ಧ ವಿಮಾನ ಬಳಸಿ ಭಾರತೀಯ ಸೇನೆ ವಿರುದ್ಧ ಪ್ರತಿದಾಳಿಗೆ ಪ್ರಯತ್ನಿಸಿದ್ದ ಪಾಕಿಸ್ತಾನ. ಆದರೆ ಪ್ರಯತ್ನ ವಿಫಲ
10:50 AM, 26 Feb
11:30 ಕ್ಕೆ ಸುದ್ದಿಗೋಷ್ಠಿ ನಡೆಸಲಿರುವ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಯಂಕಾ
10:09 AM, 26 Feb
ಭದ್ರತೆ ಕುರಿತು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆ
10:06 AM, 26 Feb
ಅತ್ತ ಪಾಕಿಸ್ತಾನದಲ್ಲೂ ಸಚಿವ ಸಂಪುಟ ಸಭೆ ನಡೆಸಲಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್
10:05 AM, 26 Feb
ಹಿರಿಯ ಸಚಿವರೊಂದಿಗೆ ಸಭೆ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ
9:59 AM, 26 Feb
"ಭಾರತೀಯ ವಾಯುಸೇನೆಯ ಪೈಲೆಟ್ ಗಳಿಗೆ ಸೆಲ್ಯೂಟ್"- ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
9:57 AM, 26 Feb
ಉಗ್ರರ ಮೂರು ಕ್ಯಾಮಪ್ ಮೇಲೆ ಸುಮಾರು 21 ನಿಮಿಷಗಳ ಕಾಲ ದಾಳಿ ನಡೆಸಲಾಗಿದೆ
9:56 AM, 26 Feb
ಬಾಲಾಕೋಟ್, ಚಾಕೋಟಿ ಮತ್ತು ಮುಜಾಫರ್ ಬಾದ್ ನಲ್ಲಿ ದಾಳಿ ನಡೆಸಿ ಉಗ್ರನೆಲೆ ಸಂಪೂರ್ಣ ನಾಶ ಮಾಡಿದ ಭಾರತೀಯ ವಾಯುಸೇನೆ
9:55 AM, 26 Feb
ಪಾಕಿಸ್ತಾನ ನಮ್ಮ ನೆಲವಲ್ಲದಿದ್ದರೂ ಸ್ವರಕ್ಷಣೆಗಾಗಿ ನಾವು ಪ್ರತಿದಾಳಿ ನಡೆಸಬಹುದು. ಅವರು ನಮ್ಮ ಮೇಲೆ ದಾಳಿ ನಡೆಸುತ್ತಲೇ ಇದ್ದಾರೆ. ಭಾರತವನ್ನು ಸಾವಿರ ತುಂಡುಗಳನ್ನಾಗಿ ಮಾಡುತ್ತೇವೆ ಎಂದಿದ್ದಾರೆ. ಅದಕ್ಕೇ ಭಾರತೀಯ ಸೇನೆ ಅವರ ಮೇಲೆ 1000 ಬಾಂಬ್ ಹಾಕಿದೆ- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
9:34 AM, 26 Feb
ರಕ್ಷಣಾ ಇಲಾಖೆ ವತಿಯಿಂದ ಇಂದು ಬೆಳಿಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿ ಸಾಧ್ಯತೆ. ಘಟನೆ ಕುರಿತು ಸ್ಪಷ್ಟನೆ ನೀಡುವ ಸಾಧ್ಯತೆ
9:32 AM, 26 Feb
ಪಾಕಿಸ್ತಾನದಲ್ಲಿರುವ ಉಗ್ರ ನೆಲೆಯ ಮೇಲೆ ದಾಳಿ ನಡೆಸಿದ ನಂತರ ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದೆ.
9:31 AM, 26 Feb
ಈ ಕುರಿತು ಐಎಎಫ್ ಟ್ವಿಟ್ಟರ್ ನಲ್ಲಾಗಲಿ, ಬೇರೆಲ್ಲೇ ಆಗಲಿ ಖಚಿತ ಮಾಹಿತಿ ಲಭ್ಯವಿಲ್ಲ.
9:14 AM, 26 Feb
ಬೆಳಗ್ಗಿನ ಜಾವ ಭಾರತೀಯ ಯುದ್ಧವಿಮಾನವೊಂದು ಪಾಕ್ ಗಡಿಯೊಳಗೆ ಬಂದಿದ್ದು ಸತ್ಯ. ಆದರೆ ಪಾಕ್ ವಾಯುಸೇನೆಯ ಸಮಯೋಚಿತ ಪ್ರತಿದಾಳಿಯಿಂದ ಅದು ವಾಪಸ್ ಹೋಗಿದೆ. ಭಾರತ ದಾಳಿ ನಡೆಸಿದ್ದು ಸುಳ್ಳು, ಪಾಕಿಸ್ತಾನದ ಕಡೆ ಯಾವುದೇ ಪ್ರಾಣಹಾನಿಯೂ ಆಗಿಲ್ಲ -ಮೇ.ಜ. ಆಸೀಫ್ ಗಾನ್ಫೂರ್, ಪಾಕಿಸ್ತಾನದ ಇಂಟರ್ ಸರ್ವಿಸ್ ಪಬ್ಲಿಕ್ ರಿಲೇಶನ್ಸ್ ನ ಪ್ರಧಾನಿ ನಿರ್ದೇಶಕ
READ MORE

English summary
IAF sources say, India drops 1000 Kg bombs on terror camps across the LoC: Here are LIVE updates in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X