ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.2ರಿಂದ ಜಮ್ಮು ಕಾಶ್ಮೀರದಿಂದ ಮೊದಲ ಎಲೆಕ್ಟ್ರಿಕ್ ರೈಲು ಸಂಚಾರ

|
Google Oneindia Kannada News

ಶ್ರೀನಗರ, ಸೆಪ್ಟಂಬರ್ 18: ಜಮ್ಮು ಮತ್ತು ಕಾಶ್ಮೀರದಿಂದ ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದಂದು ಮೊದಲ ಎಲೆಕ್ಟ್ರಿಕ್ ರೈಲು ತನ್ನ ಪ್ರಯಾಣ ಆರಂಭಿಸಲಿದೆ.

ಕಾಶ್ಮೀರವು ಇದೇ ಗಾಂಧಿ ಜಯಂತಿ ಸಂದರ್ಭದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸುವ ಜತೆಗೆ ಪ್ರಯಾಣಿಕರಿಗೆ ಸಿಹಿ ಸುದ್ದಿ ಒಂದನ್ನು ನೀಡಿದೆ. ಜಮ್ಮು ಮತ್ತು ಕಾಶ್ಮೀರ ಮೊದಲ ಎಲೆಕ್ಟ್ರಿಕ್ ರೈಲು 137 ಕಿಲೋ ಮೀಟರ್ ಕ್ರಮಿಸಲಿದೆ. ಕಾಶ್ಮೀರ ಕಣಿವೆಯಿಂದ ಬನಿಹಾಲ್-ಬಾರಾಮುಲ್ಲಾ ಕಾರಿಡಾರ್ ಮೂಲಕ ಚಲಿಸಲಿದೆ ಎಂದು ಭಾರತೀಯ ರೈಲ್ವೇ ಕನ್ಸ್ಟ್ರಕ್ಷನ್ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಡಿಯೊ: ಆದೇಶವನ್ನು ತಲುಪಿಸಲು ರೈಲಿನಿಂದ ಓಡಿದ ಡಂಜೊ ಡೆಲಿವರಿ ಬಾಯ್: 'ಡಿಡಿಎಲ್‌ಜೆ ಕ್ಷಣ' ಎಂದು ನೆಟ್ಟಿಗರುವಿಡಿಯೊ: ಆದೇಶವನ್ನು ತಲುಪಿಸಲು ರೈಲಿನಿಂದ ಓಡಿದ ಡಂಜೊ ಡೆಲಿವರಿ ಬಾಯ್: 'ಡಿಡಿಎಲ್‌ಜೆ ಕ್ಷಣ' ಎಂದು ನೆಟ್ಟಿಗರು

ಜಮ್ಮು ಮತ್ತು ಕಾಶ್ಮೀರ ಸರ್ಕಾರ, ಭಾರತೀಯ ರೈಲ್ವೆ ಇಲಾಖೆ ಮತ್ತು ಭಾರತೀಯ ರೈಲ್ವೆ ನಿರ್ಮಾಣ ಕಂಪನಿಗಳು ಆಗಸ್ಟ್ 2019 ರಿಂದ ಈ ಯೋಜನೆಗಾಗಿ ಒಟ್ಟಾಗಿ ಕಾರ್ಯೋನ್ಮುಖವಾಗಿವೆ.

Kashmirs First Electric train will travell Banihal to Baramulla from October 2nd

ಅ.2ರಿಂದ 137 ಕಿ.ಮೀ. ಸಂಚಾರ ಮುಕ್ತ; ಈ ಎಲೆಕ್ಟ್ರಿಕ್ ರೈಲು ಸಂಚಾರ ಕಾಮಗಾರಿ ನಿರ್ಮಾಣ ಯೋಜನೆಯು ಪೂರ್ಣಗೊಂಡಿದ್ದು, ಇದೇ ಸೆಪ್ಟೆಂಬರ್ 26ರಂದು ರೈಲು ಸಂಚಾರದ ಪ್ರಾಯೋಗಿಕ ಪರಿಶೀಲನೆ ನಡೆಯಲಿದೆ. ನಂತರ ಅಕ್ಟೋಬರ್ 2ರಂದು ಅಧಿಕೃತವಾಗಿ ಈ ಭಾಗದ ಮೊದಲ ಎಲೆಕ್ಟ್ರಿಕ್ ರೈಲಿನ ಚಾಲನೆಗೆ ಹಸಿರು ನಿಶಾನೆ ದೊರೆಯಲಿದೆ. ಅಂದಿನಿಂದ ಎಲೆಕ್ಟ್ರಿಕ್ ರೈಲಿನ ಈ 137 ಕಿಲೋ ಮೀಟರ್ ಮಾರ್ಗದಲ್ಲಿ ಪ್ರಯಾಣಿಕರು ಸಂಚರಿಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಎಲೆಕ್ಟ್ರಿಕ್ ರೈಲು ಸಂಚಾರ ಯೋಜನಾ ವೆಚ್ಚವು ಒಟ್ಟು ಸುಮಾರು 324 ಕೋಟಿ ರೂ. ಎಂದು ತಿಳಿಸಿದ್ದಾರೆ, ಬುಡಗಾಮ್‌ನಿಂದ ಬಾರಾಮುಲ್ಲಾ ವಿಭಾಗವು ಈಗಾಗಲೇ ಪೂರ್ಣಗೊಂಡಿದೆ. ಬುಡಗಾಮ್ ನಿಂದ ಬನಿಹಾಲ್ ಕಾರಿಡಾರ್ ಅನ್ನು ಪರಿಶೀಲಿಸಲಿದ್ದೇವೆ. ನಂತರ ಈ ಮಾರ್ಗ ಉದ್ಘಾಟನೆಗೊಳ್ಳಲಿದೆ ಎಂದು ವಿವರಿಸಿದರು.

ಮೂರು ಮುಖ್ಯ ಉಪ ಕೇಂದ್ರಗಳನ್ನು ಪರಿಶೀಲಿಸಿ; ಖಾಜಿಗುಂಡ್, ಬುಡಗಾಮ್ ಹಾಗೂ ಬಾರಾಮುಲ್ಲಾದಲ್ಲಿ ಮೂರು ಮುಖ್ಯ ಉಪ ಕೇಂದ್ರಗಳಿಂದ ರೈಲು ಮಾರ್ಗದ ಓವರ್‌ಹೆಡ್ ಉಪಕರಣಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುವುದು.

Kashmirs First Electric train will travell Banihal to Baramulla from October 2nd

ವಿದ್ಯುದೀಕರಣಕ್ಕಾಗಿ ಒಟ್ಟು ಮಾರ್ಗದ ಉದ್ದ 137.73 ಕಿ.ಮೀ.. ಈ ಯೋಜನೆಯಿಂದ ಸಾಕಷ್ಟು ಪ್ರಮಾಣದಲ್ಲಿ ಮಾಲಿನ್ಯ ಕಡಿಮೆ ಆಗಲಿದೆ. ಅಲ್ಲದೇ ಸಂಚಾರಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ. ಮುಖ್ಯವಾಗಿ ಯೋಜನೆಯಿಂದಾಗಿ ಇಂಧನ ಬಳಕೆಯಲ್ಲಿ ಶೇ.60ರಷ್ಟು ಇಳಿಕೆ ಆಗಲಿದೆ ಎಂದು ತಿಳಿದು ಬಂದಿದೆ.

ಯೋಜನೆಯ ಮುಂದುವರಿದ ಭಾಗವಾಗಿ ಬನಿಹಾಲ್ ಮತ್ತು ಕತ್ರಾ ಪ್ರದೇಶವನ್ನು ಮುಂದಿನ ದಿನಗಳಲ್ಲಿ ಸಂಪರ್ಕಿಸಲು ಚಿಂತನೆ ನಡೆದಿದೆ. ಕತ್ರಾದಿಂದ ಬನಿಹಾಲ್ ನಡುವಿನ ಸಂಪರ್ಕ ಮುಗಿದ ನಂತರ ಕಾಶ್ಮೀರವು ದೇಶದ ಇತರ ಭಾಗಗಳೊಂದಿಗೆ ಉತ್ತಮ ಸಂಪರ್ಕವನ್ನು ಸಾಧಿಸಿದಂತಾಗುತ್ತದೆ.

ಇದರಿಂದ ಜಮ್ಮು ಮತ್ತು ಕಾಶ್ಮೀರವು ಸಹ ಆಧುನಿಕ ಸೌಲಭ್ಯಗನ್ನು ಒಳಗೊಂಡ ಇತರ ಅಭಿವೃದ್ಧಿ ಹೊಂದಿದ ರಾಜ್ಯಗಳ ಪಟ್ಟಿಗೆ ಸೇರಲು ಈ ಯೋಜನೆ ಸಹಕಾರಿಯಾಗಲಿದೆ. 2013ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ರೈಲು ಸಂಪರ್ಕ ಲಭಿಸಿದ್ದು, ಅಂದು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಸಂಚಾರಕ್ಕೆ ಚಾಲನೆ ನೀಡಿದ್ದರು.

English summary
Kashmir's First Electric train will travell Banihal to Baramulla from October 2nd, said officers of Indian Railway Construction Limited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X