ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಭರ್ಜರಿ ಶಾಕ್ ನೀಡಿದ ಕೇಂದ್ರ ಸರಕಾರ
ಶ್ರೀನಗರ, ಫೆ 17: ಪುಲ್ವಾಮಾ ಘಟನೆಯ ನಂತರ, ಪಾಕಿಸ್ತಾನದ ವಿರುದ್ದ ತನ್ನ ಕುಣಿಕೆಯನ್ನು ಬಿಗಿಗೊಳಿಸುತ್ತಿರುವ ಕೇಂದ್ರ ಸರಕಾರ, ಭಾರತದಲ್ಲಿದ್ದು ಮಾತೃಭೂಮಿಗೆ ದ್ರೋಹ ಬಗೆಯುತ್ತಿರುವವರಿಗೆ ಭರ್ಜರಿ ಶಾಕ್ ನೀಡಿದೆ.
ಈ ತಕ್ಷಣದಿಂದಲೇ ಜಾರಿಗೆ ಬರುವಂತೆ (ಫೆ 17) ಕಾಶ್ಮೀರದ ಐವರು ಪ್ರತ್ಯೇಕತಾವಾದಿಗಳಿಗೆ ನೀಡಿರುವ ವಿಶೇಷ ಭದ್ರತೆಯನ್ನು ಜಮ್ಮು ಕಾಶ್ಮೀರ ರಾಜ್ಯಾಡಳಿತ ಹಿಂದಕ್ಕೆ ಪಡೆದುಕೊಂಡಿದೆ.
ಮಿರ್ವಾಜ್ ಉಮರ್ ಫಾರೂಕ್, ಅಬ್ಧುಲ್ ಗನಿಭಟ್, ಬಿಲಾಲ್ ಲೋನ್, ಹಶೀಮ್ ಖುರೇಷಿ ಮತ್ತು ಶಬ್ಬೀರ್ ಶಾ ಅವರಿಗೆ ನೀಡಲಾಗಿದ್ದ ವಿಶೇಷ ಸವಲತ್ತು ಮತ್ತು ಭದ್ರತೆಯನ್ನು ಹಿಂದಕ್ಕೆ ಪಡೆದು, ಮೋದಿ ಸರಕಾರ ಶಾಕ್ ನೀಡಿದೆ.

ಜಮ್ಮು ಕಾಶ್ಮೀರದಲ್ಲಿ ಸದ್ಯ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ. ರಾಜ್ಯಾಡಳಿತದ ಆದೇಶದನ್ವಯ, ಈ ಐವರಿಗೆ ಭದ್ರತೆ ಮತ್ತು ಎಸ್ಕಾರ್ಟ್ ವಾಹನವನ್ನು ಸರಕಾರದ ವತಿಯಿಂದ ನೀಡಲಾಗಿತ್ತು.
ಪುಲ್ವಾಮಾ ಆತ್ಮಹತ್ಯಾ ಘಟನೆಯ ನಂತರ, ಭಾರತ ತನ್ನ ಅತ್ಯಾಪ್ತ ರಾಷ್ಟ್ರಗಳ ಪಟ್ಟಿಯಿಂದ ಪಾಕಿಸ್ತಾನವನ್ನು ಹೊರದಬ್ಬಿತ್ತು.












Click it and Unblock the Notifications