ಬೆಂಗಳೂರಿನಲ್ಲಿ ಮನೆ ಖರೀದಿಸುವ ಪ್ಲ್ಯಾನ್‌ ಇದ್ದರೆ ಇನ್ನು ತಡ ಮಾಡಬೇಡಿ

ದೇಶದ ಪ್ರಮುಖ ಎಂಟು ದೊಡ್ಡ ನಗರಗಳಿಗೆ ಹೋಲಿಸಿದರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆಗಳ ಬೆಲೆ ಅತ್ಯಂತ ವೇಗವಾಗಿ ಹೆಚ್ಚಾಗುತ್ತಿದೆ. 2026ರ ಮೊದಲ ಮೂರು ತಿಂಗಳಲ್ಲಿ (ಜನವರಿ-ಮಾರ್ಚ್) ಬೆಂಗಳೂರಿನಲ್ಲಿ ವಸತಿ ಮನೆಗಳ ಬೆಲೆ ಬರೋಬ್ಬರಿ ಶೇ. 24ರಷ್ಟು ದುಬಾರಿಯಾಗಿದೆ. ಈ ಭಾರಿ ಬೆಲೆ ಏರಿಕೆಯೊಂದಿಗೆ, ಮುಂಬೈ ನಂತರ ದೇಶದಲ್ಲೇ ಎರಡನೇ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಮಾರುಕಟ್ಟೆಯಾಗಿ ಬೆಂಗಳೂರು ಹೊರಹೊಮ್ಮಿದೆ.

ಪ್ರಾಪ್ಟೈಗರ್ (PropTiger) ಸಂಸ್ಥೆ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ಬೇಡಿಕೆ ಮತ್ತು ಪೂರೈಕೆಯ ಸಮತೋಲನ ಹಾಗೂ ಗರಿಷ್ಠ ಮಾರಾಟದ ಬೆಳವಣಿಗೆಯಿಂದಾಗಿ 2026ರ ಮೊದಲ ತ್ರೈಮಾಸಿಕದಲ್ಲಿ ಬೆಂಗಳೂರು ದೇಶದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಬೆಂಗಳೂರಿನಲ್ಲಿ ವಸತಿ ಮನೆಗಳ ಸರಾಸರಿ ಬೆಲೆ ವಾರ್ಷಿಕವಾಗಿ ಶೇ 24ರಷ್ಟು ಮತ್ತು ತ್ರೈಮಾಸಿಕವಾಗಿ ಶೇ. 3ರಷ್ಟು ಹೆಚ್ಚಾಗಿದ್ದು, ಪ್ರತಿ ಚದರ ಅಡಿಗೆ ಸರಾಸರಿ 9,785 ರೂಪಾಯಿ ತಲುಪಿದೆ.

property Prices

ದೇಶದಲ್ಲೇ 2ನೇ ದುಬಾರಿ ನಗರ

ಈ ಬೆಲೆ ಏರಿಕೆಯೊಂದಿಗೆ ಮುಂಬೈ ನಂತರ ಬೆಂಗಳೂರು ದೇಶದ ಎರಡನೇ ಅತ್ಯಂತ ದುಬಾರಿ ವಸತಿ ಮಾರುಕಟ್ಟೆಯಾಗಿದೆ. ಮುಂಬೈನಲ್ಲಿ ಪ್ರತಿ ಚದರ ಅಡಿಯ ಸರಾಸರಿ ದರ 15,120 ರೂಪಾಯಿಗಳಾಗಿದೆ. 2025ರ ಮೊದಲ ತ್ರೈಮಾಸಿಕದಲ್ಲಿ ಬೆಂಗಳೂರಿನ ವಸತಿ ಬೆಲೆ ಏರಿಕೆ ಶೇ 14ರಷ್ಟಿತ್ತು, ಅದು ಈಗ 2026ಕ್ಕೆ ಶೇ 24ಕ್ಕೆ ಜಿಗಿದಿದೆ. ಬೆಂಗಳೂರಿನಲ್ಲಿ ಮನೆಗಳ ಬೆಲೆ ಇಷ್ಟೊಂದು ಹೆಚ್ಚಾಗಲು ಇಲ್ಲಿನ ಉದ್ಯೋಗ ಮಾರುಕಟ್ಟೆಯೂ ಪ್ರಮುಖ ಕಾರಣವಾಗಿದೆ.

ನಗರದಲ್ಲಿ ಸಾಂಪ್ರದಾಯಿಕ ಐಟಿ ಕಂಪನಿಗಳ ನೇಮಕಾತಿಗಿಂತಲೂ, ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCC) ಮತ್ತು ಹೊಸ ಹೊಸ ಸ್ಟಾರ್ಟ್-ಅಪ್‌ಗಳಿಂದಾಗಿ ಉದ್ಯೋಗಾವಕಾಶಗಳು ನಿರಂತರವಾಗಿ ಸೃಷ್ಟಿಯಾಗುತ್ತಲೇ ಇವೆ. ಇದರಿಂದಾಗಿ ಸಾಫ್ಟ್‌ವೇರ್ ಮತ್ತು ಟೆಕ್ ಉದ್ಯೋಗಿಗಳಿಂದ ಬೆಂಗಳೂರಲ್ಲಿ ಪ್ರಾಪರ್ಟಿ ಖರೀದಿಗೆ ಭಾರಿ ಬೇಡಿಕೆ ಮುಂದುವರಿದಿದೆ. ಇದು ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಯಾವುದೇ ನಿರ್ದಿಷ್ಟ ವಲಯದ ಹಿಂಜರಿತದ ಪರಿಣಾಮ ಬೀರದಂತೆ ಭದ್ರವಾದ ಗ್ರಾಹಕರ ನೆಲೆಯನ್ನು ಒದಗಿಸುತ್ತಿದೆ.

ಜಲ ನಿರ್ವಹಣೆಯಲ್ಲಿ ಎಐ ಬಳಕೆ ಅಗತ್ಯ, ತಂತ್ರಜ್ಞಾನ ಜತೆ ಮಾನವ ಸಹಕಾರ ಬೇಕು: ತುಷಾರ್ ಗಿರಿನಾಥ್
ಜಲ ನಿರ್ವಹಣೆಯಲ್ಲಿ ಎಐ ಬಳಕೆ ಅಗತ್ಯ, ತಂತ್ರಜ್ಞಾನ ಜತೆ ಮಾನವ ಸಹಕಾರ ಬೇಕು: ತುಷಾರ್ ಗಿರಿನಾಥ್

ದೇಶದ ಇತರೆ ನಗರಗಳ ಪರಿಸ್ಥಿತಿ ಹೇಗಿದೆ?

ಭಾರತದ ಪ್ರಮುಖ ಎಂಟು ನಗರಗಳಾದ ಅಹಮದಾಬಾದ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬೈ, ಪುಣೆ ಮತ್ತು ದೆಹಲಿ-ಎನ್‌ಸಿಆರ್‌ಗಳಲ್ಲಿ ಒಟ್ಟಾರೆಯಾಗಿ ವಸತಿ ಬೆಲೆಗಳು ವಾರ್ಷಿಕವಾಗಿ ಶೇ. 3ರಿಂದ ಶೇ. 24ರಷ್ಟು ಏರಿಕೆಯಾಗಿವೆ. ಪ್ರಮುಖ 8 ನಗರಗಳಲ್ಲಿನ ಒಟ್ಟಾರೆ ಸರಾಸರಿ ವಸತಿ ಪ್ರಾಪರ್ಟಿ ದರವು ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತಿ ಚದರ ಅಡಿಗೆ 10,050 ರೂಪಾಯಿ ದಾಟಿದೆ. ವಾರ್ಷಿಕ ಆಧಾರದ ಮೇಲೆ ಮನೆಗಳ ಮಾರಾಟದ ಪ್ರಮಾಣವು ಚೆನ್ನೈನಲ್ಲಿ ಶೇ. 43, ಬೆಂಗಳೂರಿನಲ್ಲಿ ಶೇ. 33, ಹೈದರಾಬಾದ್‌ನಲ್ಲಿ ಶೇ. 25 ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ಶೇ. 11ರಷ್ಟು ಹೆಚ್ಚಾಗಿದೆ. ಆದರೆ ಮುಂಬೈ, ಪುಣೆ, ಕೋಲ್ಕತ್ತಾ ಮತ್ತು ಅಹಮದಾಬಾದ್‌ನಲ್ಲಿ ಮಾರಾಟ ಕುಸಿದಿದೆ.

ದೇಶದಾದ್ಯಂತ ಮನೆಗಳ ಮಾರಾಟದ ಪ್ರಮಾಣದಲ್ಲಿ ಶೇ 2.2ರಷ್ಟು ಸಣ್ಣ ಕುಸಿತ ಕಂಡುಬಂದಿದ್ದರೂ, ಬೆಂಗಳೂರು ಮತ್ತು ಚೆನ್ನೈನಂತಹ ದಕ್ಷಿಣ ಭಾರತದ ನಗರಗಳಲ್ಲಿ ಪ್ರಾಪರ್ಟಿ ಖರೀದಿಗೆ ಭಾರಿ ಕ್ರೇಜ್ ಮುಂದುವರಿದಿದೆ. ಇಡೀ ದೇಶದಲ್ಲಿ ಅತಿ ಹೆಚ್ಚು ಮನೆಗಳು ಮಾರಾಟವಾಗುವ ನಗರಗಳಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಕೇವಲ ಮೂರೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ 15,603 ಮನೆಗಳು ಮಾರಾಟವಾಗಿವೆ. ಸ್ವಂತ ಮನೆ ಖರೀದಿಸಬೇಕು ಅಂದುಕೊಂಡಿರುವವರಿಗೆ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜಾಗದ ಬೆಲೆ ಕೈಗೆಟುಕದಷ್ಟು ದುಬಾರಿಯಾಗುತ್ತಿದೆ. ಹೀಗಾಗಿ ಮನೆ ಖರೀದಿಸುವ ಪ್ಲ್ಯಾನ್‌ ಇದ್ದರೆ ಈಗಲೇ ಮನೆಗಳ ಬೆಲೆ ಬಗ್ಗೆ ತಿಳಿದುಕೊಂಡಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+