ಶ್ರೀನಗರದಲ್ಲಿ ಮೂವರು ಉಗ್ರರನ್ನು ಬಲಿ ಹಾಕಿದ ಸೇನೆ
ಶ್ರೀನಗರ, ಜೂನ್ 21: ಗಡಿಭಾಗದಲ್ಲಿ ಉಗ್ರರು ಹಾಗೂ ಭಾರತೀಯ ಸೇನೆ ನಡುವೆ ಭಾನುವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಮುಂಜಾಗರೂಕತೆಯಿಂದ ನಗರದಲ್ಲಿ ಇಂಟರ್ನೆಟ್ ಬಂದ್ ಮಾಡಲಾಗಿದೆ ಎಂದು ಜಮ್ಮು-ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ.
ಶ್ರೀನಗರದ ಝಾದಿಬಾಲ್ ಎಂಬ ಪ್ರದೇಶದಲ್ಲಿ ಮೂವರು ಉಗ್ರರು ಅಡಗಿ ಕುಳಿತಿದ್ದ ಬಗ್ಗೆ ಮಾಹಿತಿ ಪಡೆದ ಸೇನೆ ಸತತವಾಗಿ ಗುಂಡಿನ ಮಳೆಗೈದು, ಮೂವರು ಉಗ್ರರನ್ನು ಬಲಿ ಹಾಕಿದ್ದಾರೆ. ಇನ್ನೊಂದೆಡೆ ಶೋಪಿಯಾನ್ ನಲ್ಲಿ ಒಬ್ಬ ಉಗ್ರನನ್ನು ಭಾರತೀಯ ಸೇನೆಯು ಗುಂಡಿಕ್ಕಿ ಹತ್ಯೆ ಮಾಡಿದೆ.
ಪುಲ್ವಾಮಾದ ಮಸೀದಿಯಲ್ಲಿ ಅಡಗಿದ್ದ ಮೂವರು ಉಗ್ರರ ಹತ್ಯೆ
ಝಾದಿಬಾಲ್ ನ ಮನೆಯೊಂದರಲ್ಲಿ ಮೂವರು ಉಗ್ರರು ಅಡಗಿ ಕುಳಿತಿದ್ದಾರೆಂಬ ಮಾಹಿತಿ ಪಡೆದ ಬಳಿಕ ಸಿಅರ್ ಪಿಎಫ್ QAT (Quick Action Team), 115 ಬೆಟಾಲಿಯನ್, 28 ಬೆಟಾಲಿಯನ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದಾರೆ. ಜೂನಿಮಾರ್ ಪೋಂಜ್ವಾಲ್ ಪೊರಾ ಪ್ರದೇಶವನ್ನು ಸುತ್ತುವರೆದು, ಉಗ್ರರು ಕದಲದಂತೆ ಮಾಡಿ, ಹೊಸಕಿ ಹಾಕಿದ್ದಾರೆ.
ಇತ್ತೀಚೆಗೆ ಕತುವಾ ಜಿಲ್ಲೆಯಲ್ಲಿ ಹಾರಾಡುತ್ತಿದ್ದ ಡ್ರೋನ್ ಮೇಲೆ ಗುಂಡು ಹಾರಿಸಿ ಹೊಡೆದುರುಳಿಸಿ, ಶಸ್ತ್ತಾಸ್ತ್ರಗಳನ್ನು ಬಿಎಸ್‌ಎಫ್ ವಶಪಡಿಸಿಕೊಂಡಿತ್ತು. ಕತುವಾ ಪ್ರದೇಶದಲ್ಲಿ ಪಾಕ್‌ನ ಡ್ರೋನ್ ಹಾರಾಟವನ್ನು ಬಿಎಸ್‌ಎಫ್‌ನ ಪೆಟ್ರೋಲಿಂಗ್ ತಂಡವು ಹತ್ತಿಕ್ಕಿದ್ದನ್ನು ಸ್ಮರಿಸಬಹುದು. ಜೂನ್ ತಿಂಗಳಿನಲ್ಲಿ ಶೋಪಿಯಾನ್ ಜಿಲ್ಲೆಯ ಪಿಂಜೋರಾ ಪ್ರದೇಶದಲ್ಲಿ ನಾಲ್ವರು ಉಗ್ರರನ್ನು ಕೊಂದು ಹಾಕಲಾಗಿದೆ.