ಶ್ರೀನಗರ ವಿಮಾನ ನಿಲ್ದಾಣದಲ್ಲಿ ಗುಲಾಂ ನಬಿ ಆಜಾದ್‌ಗೆ ಆಘಾತ

ಶ್ರೀನಗರ, ಆಗಸ್ಟ್ 08: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ಕಲಂ 370 ರದ್ದುಗೊಂಡ ಬಳಿಕ ಶ್ರೀನಗರಕ್ಕೆ ಗುರುವಾರ ಆಗಮಿಸಿದ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್‌ಗೆ ಆಘಾತ ಕಾದಿತ್ತು. ಶ್ರೀನಗರ ವಿಮಾನ ನಿಲ್ದಾಣದಲ್ಲೇ ಅವರನ್ನು ಅಲ್ಲಿನ ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ನಗರದೊಳಗೆ ಪ್ರವೇಶಿಸಲು ನಿರ್ಬಂಧವಿದೆ ಎಂದು ಹೇಳಿದ್ದಾರೆ.

ಕಲಂ 370ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಹಲವೆಡೆ ಸುರಕ್ಷತಾ ದೃಷ್ಟಿಯಿಂದ ಕರ್ಪ್ಯೂ ಹೇರಲಾಗಿದೆ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ, ಸೂಕ್ಷ್ಮ ಪರಿಸ್ಥಿತಿಯಲ್ಲಿ ಹಲವು ನಾಯಕರಿಗೆ ನಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಮುಖ್ಯಸ್ಥ ಗುಲಾಂ ಅಹ್ಮದ್ ಮೀರ್ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಅಜಾದ್ ಅವರನ್ನು ತಡೆದಿದ್ದಲ್ಲದೆ, ಬಲವಂತವಾಗಿ ದೆಹಲಿಗೆ ಹಿಂತಿರುಗುವಂತೆ ಸೂಚಿಸಲಾಗಿದೆ.

J&K tense: Ghulam Nabi Azad stopped at Srinagar Airport, sent back to New Delhi

ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಲು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಉಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ, ಅನೇಕ ಪ್ರತ್ಯೇಕತಾವಾದಿಗಳನ್ನು ಬಂಧಿಸಲಾಗಿದೆ. ಯಾವುದೆ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಎಲ್ಲೆಡೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಮೋದಿ ಸರ್ಕಾರವು ಕಲಂ 370ರದ್ದು ಪಡಿಸಲು ಅನುಸರಿಸಿದ ಕ್ರಮ, ವಿಶೇಷ ಅಧಿಕಾರ ಹಿಂಪಡೆದಿದ್ದನ್ನು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಗುಲಾಂ ನಬಿ ಅಜಾದ್ ಅವರು ಕಟುವಾಗಿ ಖಂಡಿಸಿದ್ದರು. ದೇಶದ ಭೂಶಿರ ಭಾಗವನ್ನು ಬಿಜೆಪಿ ಕತ್ತರಿಸಿದೆ ಎಂದೆಲ್ಲ ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+